Udayavni Special

ಮಂಸೋರೆ ನಿರ್ದೇಶನದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಘರ್ಜಿಸಲಿದ್ದಾಳೆ ‘ಅಬ್ಬಕ್ಕ’


Team Udayavani, Dec 4, 2020, 6:42 PM IST

abbakka

ಬೆಂಗಳೂರು: ಕನ್ನಡದ ವೀರ ವನಿತೆ ರಾಣಿ ಅಬ್ಬಕ್ಕ ದೇವಿಯ ಜೀವನಾಧಾರಿತ ಸಿನಿಮಾ ಒಂದು ಬಹುಕೋಟಿ ವೆಚ್ಚದಲ್ಲಿ ತೆರೆ ಮೇಲೆ ಬರಲು ತಯಾರಿ ನಡೆಸುತ್ತಿದೆ. ಆ್ಯಕ್ಟ್ 1978 ಚಿತ್ರದ ಬಿಡುಗಡೆಯ ನಂತರ ನಿರ್ದೇಶಕ ಮಂಸೋರೆ ಸ್ಯಾಂಡಲ್ ವುಡ್ ನಲ್ಲಿ ಈ ಹೊಸ ಪ್ರಯತ್ನ ವೊಂದಕ್ಕೆ ಕೈ ಹಾಕಿದ್ದಾರೆ.

ಯಾರವಳು ರಾಣಿ ಅಬ್ಬಕ್ಕ

ಅಬ್ಬಕ್ಕ ರಾಣಿ   ಅಲಿಯಾಸ್ ಉಳ್ಳಾಲದ ರಾಣಿ ಎಂದೇ ಹೆಸರು ವಾಸಿಯಾಗಿರುವ ವೀರ ವನಿತೆ ಈಕೆ. 16ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಜೀವಿಸಿದ್ದ  ವೀರ ಸೇನಾನಿ. ಸಮುದ್ರ ಯುದ್ಧನೀತಿಯಲ್ಲಿ ನೈಪುಣ್ಯತೆಯನ್ನು ಹೊಂದಿದ ಏಕೈಕ ರಾಣಿ ಎಂಬ ಕೀರ್ತಿಗೆ ಪಾತ್ರಳಾಗಿರುವ ಈಕೆ ಸತತ 25 ವರ್ಷಗಳ ಕಾಲ ಯುದ್ದಗಳನ್ನು ಮಾಡುತ್ತಲೇ ತನ್ನ ಸಾಮ್ರಾಜ್ಯ ಕಟ್ಟಿದವಳು.

ಈಕೆಯ ಕುರಿತಾಗಿ ಮಾಡಲಾಗುತ್ತಿರುವ ಚಿತ್ರಕ್ಕೆ ಅಬ್ಬಕ್ಕ ಎಂಬ ಹೆಸರಿಡಲಾಗಿದ್ದು,   ‘ಅರಬ್ಬಿ ಸಮುದ್ರದ   ಅಭಯದ ರಾಣಿ’ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಬಾಲಿವುಡ್ ನಲ್ಲಿ ಮಣಿಕರ್ಣಿಕಾ ತೆಲುಗಿನಲ್ಲಿ ರುದ್ರಮ್ಮದೇವಿ ಸೇರಿದಂತೆ ಹಲವಾರು ವೀರ ಸೇನಾನಿಗಳ ಕಥೆ ಈಗಾಗಲೆ ತೆರೆ ಮೇಲೆ ಬಂದಿದ್ದು ಸ್ಯಾಂಡಲ್ ವುಡ್ ನಲ್ಲಿ ಇದೊಂದು ಹೊಸ ಪ್ರಯತ್ನವಾಗಿದೆ.

ಇದನ್ನೂ ಓದಿ:ಲಸಿಕೆ ನೀಡಲು ಆರೋಗ್ಯ ಇಲಾಖೆ ಸಜ್ಜು

ಅಬ್ಬಕ್ಕನ ಕುರಿತಾಗಿ ಸಿನಿಮಾ ಮಾಡಲು ನನಗೆ ಪ್ರೇರಣೆಯಾಗಿರುವುದೆ ಆಕೆಯ ಜಲಮಾರ್ಗದ ಯುದ್ಧ ಪರಿಣಿತಿ. ಕಳೆದ ಮೂರು ವರ್ಷಗಳಿಂದ  ನಾನು ಈ ಕುರಿತು ಅಧ್ಯಯನ ಮಾಡುತ್ತಿದ್ದೆ . ಈಗ ಈಕೆಯ ಕುರಿತು ಸಿನಿಮಾ ಮಾಡಲು ಕಾಲ ಕೂಡಿ ಬಂದಿದೆ ಎಂದು ನಿರ್ದೇಶಕ ಮಂಸೋರೆ ಹೇಳಿದ್ದಾರೆ.

ಚಿತ್ರ ಕನ್ನಡ, ತುಳು , ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ  ಮೂಡಿಬರಲಿದೆ. ಹೀಗಾಗಿ ಎಲ್ಲಾ ಭಾಷೆಯ ಜನರಿಗೂ ಪರಿಚಿತವಾಗಿರುವ ನಟಿಯನ್ನೆ ಅಬ್ಬಕ್ಕನ ಪಾತ್ರಕ್ಕೆ  ಆಯ್ಕೆ ಮಾಡಲಾಗುವುದು ಎಂದು ನಿರ್ದೇಶಕ ಮಂಸೋರೆ ತಿಳಿಸಿದ್ದಾರೆ.

ಈ ಮಂಸೋರೆ ಜೊತೆಗೆ ಕೆಲಸ ಮಾಡಿರುವ ಆ್ಯಕ್ಟ್ 1978 ತಾಂತ್ರಿಕ ತಂಡ  ಅಬ್ಬಕ್ಕ ಚಿತ್ರದಲ್ಲೂ ಮುಂದುವರೆಯಲಿದ್ದು, ಛಾಯಾಗ್ರಹಣದಲ್ಲಿ ಸತ್ಯ ಹೆಗಡೆ ಕಾರ್ಯನಿರ್ವಹಿಸಲಿದ್ದಾರೆ.  ಸಂಗೀತ ನಿರ್ದೇಶನದಲ್ಲಿ  ಅಜನೀಶ್ ಲೋಕ್ ನಾಥ್ ಹೊಸದಾಗಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಬೇಡ; ಬಿಬಿಎಂಪಿ ಆಯುಕ್ತ

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಬೇಡ; ಬಿಬಿಎಂಪಿ ಆಯುಕ್ತ

ಲಂಚದ ಹಣ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಡಿಎಚ್ಓ ಕಛೇರಿ ವ್ಯವಸ್ಥಾಪಕ ಮನೋಹರ

ಲಂಚದ ಹಣ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಡಿಎಚ್ಓ ಕಛೇರಿ ವ್ಯವಸ್ಥಾಪಕ ಮನೋಹರ

ಅಲ್‌ಖೈದಾ ಜೊತೆ ಸೇರಿ ಹೊಸ ಉಗ್ರಸಂಘಟನೆ ಕಟ್ಟಲು ಹಖ್ಖಾನಿ ಸಂಚು?

ಅಲ್‌ಖೈದಾ ಜೊತೆ ಸೇರಿ ಹೊಸ ಉಗ್ರಸಂಘಟನೆ ಕಟ್ಟಲು ಹಖ್ಖಾನಿ ಸಂಚು?

“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಸಭಾಪತಿ ಸ್ಥಾನ ಹೊರಟ್ಟಿಗೆ: ಬಿಜೆಪಿಯಿಂದ ಪ್ರಾಣೇಶ್‌ ಉಪ ಸಭಾಪತಿ

ಜೆಡಿಎಸ್ ನ ಹೊರಟ್ಟಿಗೆ ಸಭಾಪತಿ ಸ್ಥಾನ : ಬಿಜೆಪಿಯ ಪ್ರಾಣೇಶ್‌ ಉಪ ಸಭಾಪತಿ

ಬೇಬಿಬೆಟ್ಟದ ಸುತ್ತ ಮಾರ್ಚ್ 24ರವರೆಗೆ ಎಲ್ಲ ರೀತಿಯ ಗಣಿಗಾರಿಕೆ ನಿಷೇಧ

ಬೇಬಿಬೆಟ್ಟದ ಸುತ್ತ ಮಾರ್ಚ್ 24ರವರೆಗೆ ಎಲ್ಲ ರೀತಿಯ ಗಣಿಗಾರಿಕೆ ನಿಷೇಧ

ರಾಜ್ಯದ ಎಲ್ಲ ಅಂಗಡಿಗಳ ನಾಮಫ‌ಲಕ ಕನ್ನಡದಲ್ಲೇ ಇರಬೇಕು : ನಾಗಾಭರಣ

ರಾಜ್ಯದ ಎಲ್ಲ ಅಂಗಡಿಗಳ ನಾಮಫ‌ಲಕ ಕನ್ನಡದಲ್ಲೇ ಇರಬೇಕು : ನಾಗಾಭರಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಣರಾಜ್ಯೋತ್ಸವಕ್ಕೆ ಹೊಸ ಪೋಸ್ಟರ್‌ ಮೂಲಕ ರಾಬರ್ಟ್‌ ವಿಶ್‌

ಗಣರಾಜ್ಯೋತ್ಸವಕ್ಕೆ ಹೊಸ ಪೋಸ್ಟರ್‌ ಮೂಲಕ ರಾಬರ್ಟ್‌ ವಿಶ್‌

ಗ್ಯಾಂಗ್‌ಸ್ಟರ್‌ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ

ಗ್ಯಾಂಗ್‌ಸ್ಟರ್‌ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಶಾನ್ವಿ ಶ್ರೀವಾಸ್ತವ್

ಐಂದ್ರಿತಾ ಅಡ್ವೆಂಚರ್‌ ಕ್ರೇಜ್‌

ಐಂದ್ರಿತಾ ಅಡ್ವೆಂಚರ್‌ ಕ್ರೇಜ್‌

ಇಂದು ಸಂಜೆ ಇನ್ಸ್‌ಪೆಕ್ಟರ್‌ ವಿಕ್ರಂ ಟ್ರೇಲರ್‌ ರಿಲೀಸ್‌

ಇಂದು ಸಂಜೆ ಇನ್ಸ್‌ಪೆಕ್ಟರ್‌ ವಿಕ್ರಂ ಟ್ರೇಲರ್‌ ರಿಲೀಸ್‌

145 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರಾಗಿಣಿ ಬಿಡುಗಡೆ

145 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರಾಗಿಣಿ ಬಿಡುಗಡೆ

MUST WATCH

udayavani youtube

ಕೃಷಿಕ ಪ್ರತಿಭಟನೆ – ಗೊಂದಲ, ಘರ್ಷಣೆ , ವಿಶ್ಲೇಷಣೆ

udayavani youtube

ಮಂಗಳೂರು: ಜ. 30ರಿಂದ ಕಂಬಳ ನಡೆಸಲು ಅನುಮತಿ

udayavani youtube

ಕೃಷಿ ಕಾಯಿದೆ; ಕೃಷಿಕನ ಅಭಿಪ್ರಾಯ ಕ್ಕೆ ಕಿವಿಯಾಗೋಣ ಬನ್ನಿ

udayavani youtube

Udupiಯ ಜನತೆಗೆ ಕಲೆಯಿಂದ ಜನಜಾಗೃತಿ ಮೂಡಿಸಿದ ಕಲಾವಿದ KAMIL RAZA,

udayavani youtube

ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

ಹೊಸ ಸೇರ್ಪಡೆ

ಬೆಳಗಾವಿ ವಿಭಜನೆಗೆ ಮತ್ತೆ ಮೂಡಿದ ರೆಕ್ಕೆ

ಬೆಳಗಾವಿ ವಿಭಜನೆಗೆ ಮತ್ತೆ ಮೂಡಿದ ರೆಕ್ಕೆ

ಪಡೀಲ್‌ ಕ್ರಾಸ್‌ ಬಳಿ ಅವೈಜ್ಞಾನಿಕ ತಿರುವಿನಿಂದ ನಿಲ್ಲದ ಅಪಘಾತ ಸರಣಿ

ಪಡೀಲ್‌ ಕ್ರಾಸ್‌ ಬಳಿ ಅವೈಜ್ಞಾನಿಕ ತಿರುವಿನಿಂದ ನಿಲ್ಲದ ಅಪಘಾತ ಸರಣಿ

ಬಿಜೆಪಿ ಆಡಳಿತದ ಮೊದಲ ಆಯವ್ಯಯ: ಹಲವು ನಿರೀಕ್ಷೆ

ಬಿಜೆಪಿ ಆಡಳಿತದ ಮೊದಲ ಆಯವ್ಯಯ: ಹಲವು ನಿರೀಕ್ಷೆ

ಉದ್ಘಾಟನೆಗೆ ಸಿದ್ಧಗೊಂಡ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರ

ಉದ್ಘಾಟನೆಗೆ ಸಿದ್ಧಗೊಂಡ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರ

ಹೊಳೆ ತೀರ ವಾಸಿಗಳ ಗೋಳು ಕೇಳುವವರ್ಯಾರು ..?

ಹೊಳೆ ತೀರ ವಾಸಿಗಳ ಗೋಳು ಕೇಳುವವರ್ಯಾರು ..?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.