Udayavni Special

ಅಭಿಷೇಕ್‌ಗೆ ದರ್ಶನ್‌ ಸಾಥ್‌


Team Udayavani, Jan 9, 2019, 9:02 AM IST

amar.jpg

ಅಭಿಷೇಕ್‌ ಅಂಬರೀಶ್‌ ಅಭಿನಯದ “ಅಮರ್‌’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆದಿದೆ. “ಅಮರ್‌’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ ಎಂದು ನಿರ್ದೇಶಕ ನಾಗಶೇಖರ್‌ ಈ ಹಿಂದೆಯೇ ಹೇಳಿದ್ದರು. ಅಷ್ಟೇ ಅಲ್ಲ, ಚಿತ್ರದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್‌ ನಟರು ಸಹ “ಅಮರ್‌’ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿಕೊಂಡಿದ್ದರು. ಅದಕ್ಕೀಗ ಮೊದಲ ಉತ್ತರ ಸಿಕ್ಕಿದೆ.

ಹೌದು, “ಅಮರ್‌’ ಚಿತ್ರದಲ್ಲಿ ಸದ್ದಿಲ್ಲದೆಯೇ ದರ್ಶನ್‌ ಅವರು ಕಾಣಿಸಿಕೊಂಡಾಗಿದೆ. ಅದರಲ್ಲೂ ವಿಶೇಷವಾಗಿರುವಂತಹ ಒಂದು ಹಾಡಿನಲ್ಲಿ ಅಭಿಷೇಕ್‌ ಜೊತೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ದಿ ಕ್ಲಬ್‌ನಲ್ಲಿ “ಅಮರ್‌’ ಚಿತ್ರದ ಹಾಡಿನ ಚಿತ್ರೀಕರಣ ನಡೆಯಿತು. ಆ ಹಾಡಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಅಭಿಷೇಕ್‌ಗೆ ಸಾಥ್‌ ಕೊಡುವ ಮೂಲಕ ದರ್ಶನ್‌ ಅವರ ಖುಷಿಯಲ್ಲೇ ಆ ಹಾಡಿಗೆ ಹೆಜ್ಜೆ ಹಾಕಿ, ಚಿತ್ರತಂಡದ ಜೊತೆ ಒಂದಷ್ಟು ಹರಟಿದ್ದಾರೆ ಕೂಡ.

ಅಂದಹಾಗೆ, ಆ ಹಾಡಲ್ಲಿ ದೇವರಾಜ್‌, ನಿರೂಪ್‌ ಭಂಡಾರಿ ಕೂಡ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ದರ್ಶನ್‌ ಹೆಜ್ಜೆ ಹಾಕಿರುವ ಹಾಡಿಗೆ ನೃತ್ಯ ನಿರ್ದೇಶಕ ಧನಂಜಯ್‌ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ದರ್ಶನ್‌ ಬರೀ ಹಾಡಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ ಎಂದು ಅರ್ಥೈಸಿಕೊಳ್ಳುವಂತಿಲ್ಲ. “ಅಮರ್‌’ ಚಿತ್ರದಲ್ಲಿ ಅವರು ಹಾಡಿಗೆ ಹೆಜ್ಜೆ ಹಾಕುವುದರ ಜೊತೆಗೆ ಮಾತಿನ ಭಾಗದ ದೃಶ್ಯದಲ್ಲೂ ಅಭಿನಯಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ, ರಾಜರಾಜೇಶ್ವರಿ ನಗರ ಮುಂತಾದ ಕಡೆ ಅವರ ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಇನ್ನು, ನಿರೂಪ್‌ ಭಂಡಾರಿ ಅವರು ಸಹ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು ಹಾಗೂ ಸ್ವಿಜರ್‌ಲೆಂಡ್‌ನ‌ಲ್ಲೂ ಚಿತ್ರದ ಚಿತ್ರೀಕರಣವಾಗಿದೆ.

ಫೆಬ್ರವರಿ 11ರಿಂದ ಸಿಂಗಾಪುರದಲ್ಲಿ “ಅಮರ್‌’ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರದ ಇನ್ನೊಂದು ಹೆಚ್ಚುಗಾರಿಕೆ ಅಂದರೆ, ಅತೀ ಹೆಚ್ಚು ಲೊಕೇಷನ್‌ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವುದು. ಈ ಚಿತ್ರವನ್ನು ಸಂದೇಶ್‌ ಪೊ›ಡಕ್ಷನ್ಸ್‌ನಲ್ಲಿ ಸಂದೇಶ್‌ ಅವರ ನಿರ್ಮಾಣವಿದೆ. ಈ ಹಿಂದೆ ಅಂಬರೀಶ್‌ ಅಭಿನಯದ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದ  ಸಂದೇಶ ನಾಗರಾಜ್‌ ಅವರು ಈಗ ಅವರ ಪುತ್ರ ಸಂದೇಶ್‌ ಅವರಿಗೆ ಈ ಚಿತ್ರ ನಿರ್ಮಾಣದ ಜವಾಬ್ದಾರಿ ಹೊರಿಸಿದ್ದಾರೆ.

ನಾಗಶೇಖರ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದರೆ, ಹರ್ಷ ಸಂಕಲನ ಮಾಡಿದ್ದಾರೆ. ಧನಂಜಯ್‌, ಇಮ್ರಾನ್‌ ಸರ್ದಾರಿಯಾ, ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ. ರವಿವರ್ಮ, ಥ್ರಿಲ್ಲರ್‌ ಮಂಜು, ಅಂಬು ಅರಿವು ಅವರ ಸಾಹಸ ನಿರ್ದೇಶನವಿದೆ. ಚಿತ್ರದಲ್ಲಿ ಅಭಿಷೇಕ್‌ ಅಂಬರೀಶ್‌ ಅವರಿಗೆ ತಾನ್ಯಾ ಹೋಪ್‌ ನಾಯಕಿಯಾಗಿ ಕಾಣಿಸಿಕೊಂಡರೆ, ಉಳಿದಂತೆ ಸುಧಾರಾಣಿ, ದೇವರಾಜ್‌, ದೀಪಕ್‌ ಶೆಟ್ಟಿ, ಅರುಣ್‌ ಸಾಗರ್‌, ಚಿಕ್ಕಣ್ಣ, ಸಾಧುಕೋಕಿಲ ಇತರರು ನಟಿಸಿದ್ದಾರೆ.

ಟಾಪ್ ನ್ಯೂಸ್

ದೀಪಾವಳಿ ಕೊಡುಗೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, 47 ಲಕ್ಷ ನೌಕರರಿಗೆ ಲಾಭ

ದೀಪಾವಳಿ ಕೊಡುಗೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, 47 ಲಕ್ಷ ನೌಕರರಿಗೆ ಲಾಭ

22

ಮುಳ್ಳಯ್ಯನಗಿರಿಯಲ್ಲಿ ಭಾರಿ ಮಳೆ: ಪ್ರವಾಸಿರ ಪರದಾಟ

siddaramaiah

ಸಂಘ ಪರಿವಾರದವರು ಸಮಾಜ ಒಡೆಯುವ ಕೆಲಸ ಮಾಡ್ತಾರೆಂಬ ಭಯವಿದೆ: ಸಿದ್ದರಾಮಯ್ಯ

manchester united owner shows interest in ipl

ಐಪಿಎಲ್ ತಂಡ ಖರೀದಿಸಲು ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್ ಮಾಲಕರು

1-bgg

ಚೀನಾ ಬೆದರಿಕೆ: ಎಲ್‌ಎಸಿ ಬಳಿ ಭಾರತೀಯ ಸೇನೆಯ ಕಠಿಣ ಸಮರಾಭ್ಯಾಸ

b k hariprasad

ವಿಕೃತ ಮನಸ್ಥಿತಿಯವರು ಮಾತ್ರ 100 ಲಸಿಕೆ ಕೊಟ್ಟಿದ್ದೇವೆಂದು ಸಂಭ್ರಮ ಪಡುತ್ತಾರೆ: ಹರಿಪ್ರಸಾದ್

ಬಂಧಿಸಲು ಹೋದ ಪೊಲೀಸರಿಗೆ ತಲವಾರು ತೋರಿಸಿ ರೌಡಿ ಶೀಟರ್ ಎಸ್ಕೇಪ್ : ಓರ್ವನ ಬಂಧನ

ಬಂಧಿಸಲು ಹೋದ ಪೊಲೀಸರಿಗೆ ತಲವಾರು ತೋರಿಸಿ ರೌಡಿ ಶೀಟರ್ ಎಸ್ಕೇಪ್ : ಓರ್ವನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ಜಂಗಮವಾಣಿ’ ಕಿರುಚಿತ್ರ

ಮೊಬೈಲ್‌ ಬಳಕೆಯ ಸುತ್ತ ‘ಜಂಗಮವಾಣಿ’ ಕಿರುಚಿತ್ರ

‘ಕಾರ್ಗಲ್‌ ನೈಟ್ಸ್‌’ ನಲ್ಲಿ ಥ್ರಿಲ್ಲರ್‌ ಝಲಕ್‌

‘ಕಾರ್ಗಲ್‌ ನೈಟ್ಸ್‌’ ನಲ್ಲಿ ಥ್ರಿಲ್ಲರ್‌ ಝಲಕ್‌

ಉದಯವಾಣಿ ಜೊತೆ ಸಲಗ ಸಂಭ್ರಮ

ಉದಯವಾಣಿ ಜೊತೆ ‘ಸಲಗ’ ಸಂಭ್ರಮ

‘ಇಲ್ಲಿಂದ ಆರಂಭವಾಗಿದೆ…’ ತೆಲುಗು ನಿರ್ಮಾಪಕನ ಕನ್ನಡ ಸಿನಿಮಾ

‘ಇಲ್ಲಿಂದ ಆರಂಭವಾಗಿದೆ…’ ತೆಲುಗು ನಿರ್ಮಾಪಕನ ಕನ್ನಡ ಸಿನಿಮಾ

fgjhhg

ಭಯ ಹುಟ್ಟಿಸುವ ಭಯಾನಕ ಪಾತ್ರಗಳು  : ಭಜರಂಗಿ 2 ಟ್ರೇಲರ್ ಔಟ್

MUST WATCH

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

udayavani youtube

ಉದಯವಾಣಿ ಕಚೇರಿಯಲ್ಲಿ ‘ಸಲಗ’ !

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

ಹೊಸ ಸೇರ್ಪಡೆ

ದೀಪಾವಳಿ ಕೊಡುಗೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, 47 ಲಕ್ಷ ನೌಕರರಿಗೆ ಲಾಭ

ದೀಪಾವಳಿ ಕೊಡುಗೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, 47 ಲಕ್ಷ ನೌಕರರಿಗೆ ಲಾಭ

22

ಮುಳ್ಳಯ್ಯನಗಿರಿಯಲ್ಲಿ ಭಾರಿ ಮಳೆ: ಪ್ರವಾಸಿರ ಪರದಾಟ

siddaramaiah

ಸಂಘ ಪರಿವಾರದವರು ಸಮಾಜ ಒಡೆಯುವ ಕೆಲಸ ಮಾಡ್ತಾರೆಂಬ ಭಯವಿದೆ: ಸಿದ್ದರಾಮಯ್ಯ

1-bgg-aaa

ಮಧ್ಯಪ್ರದೇಶದಲ್ಲಿ ಏರ್ ಫೋರ್ಸ್ ವಿಮಾನ ಪತನ; ಪೈಲಟ್ ಪಾರು

manchester united owner shows interest in ipl

ಐಪಿಎಲ್ ತಂಡ ಖರೀದಿಸಲು ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್ ಮಾಲಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.