ಅಭಿಷೇಕ್‌ ಧೈರ್ಯದ ಹಿಂದಿನ ಕಥೆ ಬಿಚ್ಚಿಟ್ಟ ಸಿಎಂ


Team Udayavani, Dec 1, 2018, 11:30 AM IST

abishek-dhairya.jpg

ಅಂಬರೀಶ್‌ ನಿಧನದ ವೇಳೆ ಸುಮಲತಾ ಅವರು ಅಳುತ್ತಿದ್ದರೆ, ಅಭಿಷೇಕ್‌ ಕಣ್ಣೀರು ಸುರಿಸದೇ ಧೈರ್ಯ ತೋರಿದ್ದರು. ಇದು ಸಿಎಂ ಕುಮಾರಸ್ವಾಮಿಗೂ ಅಚ್ಚರಿ ಕಂಡು ನೇರವಾಗಿ ಅಭಿಯನ್ನು ಪ್ರಶ್ನಿಸಿದ್ದಾರೆ. ಆಗ ಆಭಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಆ ಘಟನೆಯನ್ನು ಸಿಎಂ ಎಚ್‌ಡಿಕೆ, ವಿವರಿಸಿದ್ದು ಹೀಗೆ, “ಅಂಬರೀಶ್‌ ಪುತ್ರ ಅಭಿಷೇಕ್‌ ಅವರ ಧೈರ್ಯ ಮೆಚ್ಚಲೇಬೇಕು.

ಆಸ್ಪತ್ರೆಗೆ ಭೇಟಿ ಕೊಟ್ಟಾಗ, ಕಣ್ಣಲ್ಲಿ ಒಂದಿಷ್ಟೂ  ನೀರು ತುಂಬಿಕೊಳ್ಳದೆ ಮೌನವಾಗಿದ್ದ. ಆ ಬಗ್ಗೆ ವಿಚಾರಿಸಿದಾಗ, “ಅಂಕಲ್‌ ನಾನು ದುಃಖ ಪಟ್ಟರೆ, ತಾಯಿ ಮುಂದೆ ನೋವು ತೋಡಿಕೊಂಡರೆ, ಅವರಿಗೆ ಆಘಾತ ಆಗುತ್ತೆ. ಹಾಗಾಗಿ, ನಾನು ಎಷ್ಟೇ ನೋವಾದರೂ, ಅಳು ಬಂದರೂ ತೋರಿಸಿಕೊಳ್ಳಲಾಗುತ್ತಿಲ್ಲ’ ಎಂದು ಹೇಳಿದಾಗ, ಎಲ್ಲೋ ಒಂದು ಕಡೆ ನನಗನ್ನಿಸಿದ್ದು, ಅಭಿ ಎಲ್ಲೂ ನೋವನ್ನು ತೋರಿಸಿಕೊಳ್ಳಲಿಲ್ಲ.

ಆ ನೋವನ್ನು ಅದುಮಿಟ್ಟುಕೊಂಡೇ, ದುಃಖೀಸುತ್ತಿದ್ದಾನೆ. ಅದೆಲ್ಲವೂ ಅಂಬರೀಶ್‌ ಅವರಿಂದ ಬಂದ ಗುಣ. ತಂದೆಯ ಗುಣವನ್ನೇ ಅಭಿ ಅಳವಡಿಸಿಕೊಂಡಿದ್ದಾನೆ. ಯಾವುದೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸಬೇಕು ಎಂಬುದನ್ನು ಕಲಿತಿದ್ದಾನೆ. ಅಂಬರೀಶ್‌ ಅವರ ಹೆಸರನ್ನು ಅವರ ಪುತ್ರ ಅಭಿಷೇಕ್‌ ಉಳಿಸುತ್ತಾನೆ. ಮುಂದಿನ ದಿನಗಳಲ್ಲಿ ಅಭಿಷೇಕ್‌ ಮೂಲಕ ನಾವು ಅಂಬರೀಶ್‌ ಅವರನ್ನು ಕಾಣುತ್ತೇವೆ’ ಎಂದರು. 

ಅಂಬಿ ಜೊತೆ ಮಗನ ಸಿನಿಮಾ ಮಾಡುವ ಆಸೆ ಇತ್ತು: ಸಿಎಂ ಎಚ್‌ಡಿಕೆ ಅವರಿಗೆ ಅಂಬರೀಶ್‌ ಅವರನ್ನು ಹಾಕಿಕೊಂಡು ಪುತ್ರ ನಿಖೀಲ್‌ಗೊಂದು ಸಿನಿಮಾ ಮಾಡುವ ಆಸೆ ಇತ್ತಂತೆ. ಆ ಬಗ್ಗೆಯೂ ಹೇಳಿಕೊಂಡರು.  “ನನಗೊಂದು ಆಸೆ ಇತ್ತು. ನನ್ನ ಮಗನ ಜೊತೆ ಅಂಬರೀಶ್‌ ಅವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು ಎಂಬುದೇ ಆ ಆಸೆ. ನನಗೆ ಡಾ.ರಾಜಕುಮಾರ್‌ ಮೇಲೆ ಅಪಾರ ಗೌರವ. ಹಾಗೆ ಅಂಬರೀಶ್‌ ಜೊತೆಗೆ ಅಪಾರ ಸ್ನೇಹವೂ ಇತ್ತು. ಅಂಬರೀಶ್‌ ಅವರ ಮೂರು ಚಿತ್ರಗಳನ್ನು ಸತತವಾಗಿ ಹಂಚಿಕೆ ಮಾಡಿದ್ದೇನೆ.

ಆ ಮೂಲಕ ಯಶಸ್ವಿಯಾಗಿದ್ದೂ ಹೌದು. ನಾನು ನನ್ನ ಪುತ್ರನ ಜೊತೆಗೆ ಅಂಬರೀಶ್‌ ಅವರಿಗೊಂದು ಸಿನಿಮಾ ಮಾಡಬೇಕು ಅಂತಾನೇ, ತೆಲುಗಿನ “ರೆಬೆಲ್‌’ ಚಿತ್ರದ ಹಕ್ಕು ಖರೀದಿಸಿದ್ದೆ. ಆ ಕನ್ನಡ ಚಿತ್ರದಲ್ಲಿ ಅಂಬರೀಶ್‌ ಅವರು ಪಾತ್ರ ಮಾಡಬೇಕು ಅಂತಾನೇ ರೈಟ್ಸ್‌ ತಂದಿದ್ದೆ. ಆದರೆ, ರಾಜಕೀಯ ಒತ್ತಡಗಳಿಂದಾಗಿ, ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇದೆ. ಕಲಾವಿದರ ಅಂತ್ಯಕ್ರಿಯೆ ನೋಡಿದಾಗ, ಬೇರೆ ರಾಜ್ಯಗಳಲ್ಲಿ ಕಲಾವಿದರುಗಳಿಗೆ ಇಷ್ಟೊಂದು ಗೌರವ ಸಿಕ್ಕಿರಲಿಕ್ಕಿಲ್ಲ.

ಬಹುಶಃ ಕನ್ನಡಿಗರು ಮತ್ತು ಇಲ್ಲಿನ ಸರ್ಕಾರಗಳು ಆ ರೀತಿಯ ಗೌರವ ಕೊಡುತ್ತಿರುವುದು ದೇಶಕ್ಕೆ ಮಾದರಿ. ಯಾರೋ ಒಬ್ಬರು, ಕಂಠೀರವ ಸ್ಟುಡಿಯೋದಲ್ಲಿ ಕಲಾವಿದರ ಅಂತ್ಯಕ್ರಿಯೆ ಮಾಡಿರುವುದಕ್ಕೆ ನ್ಯಾಯಾಲಯ ಮೆಟ್ಟಿಲು ಏರಿದ್ದಾರೆ. ಕಲಾವಿದರ ಸಿನಿಮಾಗಳ ಮೂಲಕ ಸರ್ಕಾರಕ್ಕೆ ಹಲವು ರೀತಿಯಲ್ಲಿ ತೆರಿಗೆ ರೂಪದಲ್ಲಿ ಹಣ ಬರುತ್ತಿದೆ. ಹೀಗಾಗಿ, ಕಲಾವಿದರಿಗೆ ಸರ್ಕಾರ ಕೊಡುವ ಗೌರವ ಇದು. ಇದರಲ್ಲಿ ಸಣ್ಣತನ ಇರಬಾರದು’ ಎಂದರು. 

ಟಾಪ್ ನ್ಯೂಸ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.