Udayavni Special

ಗೆದ್ದ ಖುಷಿಯಲ್ಲಿ ಆಕ್ಟ್ 1978


Team Udayavani, Nov 27, 2020, 3:25 PM IST

ಗೆದ್ದ ಖುಷಿಯಲ್ಲಿ ಆಕ್ಟ್ 1978

ಕಳೆದ ವಾರ ತೆರೆಕಂಡಿದ್ದ “ಆಕ್ಟ್-1978′ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾದ ಬಹುತೇಕ ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಹೌಸ್‌ಫ‌ುಲ್‌ ಪ್ರದರ್ಶನಕಾಣುತ್ತಿದೆ. ಇದೇ ಖುಷಿಯಲ್ಲಿರುವಚಿತ್ರತಂಡ, ತಮ್ಮ ಚಿತ್ರದ ಬಿಡುಗಡೆಯ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ನೀಡಲು ಮಾಧ್ಯಮಗಳ ಮುಂದೆ ಬಂದಿತ್ತು.

ಮೊದಲಿಗೆ ಮಾತನಾಡಿದ ನಿರ್ದೇಶಕ ಮಂಸೋರೆ, “ನಾವು ಸಿನಿಮಾ ರಿಲೀಸ್‌ ಮಾಡಬೇಕೆಂದು ಹೊರಟಾಗ ಒಂದಿಷ್ಟು ಸ್ನೇಹಿತರು ಈ ರಿಸ್ಕ್ ಬೇಕಿತ್ತಾ ಎನ್ನುತ್ತಿದ್ದರು. ಆದರೆ ನಿರ್ಮಾಪಕರು ನಮಗೆ ಬೆಂಬಲವಾಗಿ ನಿಂತು, ನಮಗೆಲ್ಲ ಧೈರ್ಯ ತುಂಬಿದರು. ಈಗ ಸಿನಿಮಾ ಸಕ್ಸಸ್‌ ಆಗಿದೆ. ಒಳ್ಳೆ ಕಂಟೆಂಟ್‌ ಸಿನಿಮಾ ಬಂದರೆ ಜನ ಯಾವತ್ತೂ ಕೈಬಿಡುವುದಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ನಮ್ಮ ಸಿನಿಮಾದಲ್ಲಿ ಯಾವುದೇ ಸ್ಟಾರ್ ಇಲ್ಲ, ಆದ್ರೆ ಈಗ ಎಲ್ಲಾ ಸ್ಟಾರ್ ನಮ್ಮ ಸಿನಿಮಾಕ್ಕೆ ಸಪೋರ್ಟ್‌ ಮಾಡ್ತಿದ್ದಾರೆ. ಪುನೀತ್‌, ಶಿವಣ್ಣ, ಸುದೀಪ್‌, ದರ್ಶನ್‌, ಸತೀಶ್‌ ಸೇರಿದಂತೆ ಎಲ್ಲರೂ ಸಿನಿಮಾ ಚೆನ್ನಾಗಿದೆ ಎಂದಿದ್ದಾರೆ. ಇಡೀಕನ್ನಡ ಇಂಡಸ್ಟ್ರಿ ನಮಗೆ ಬೆಂಬಲವಾಗಿ ನಿಂತಿದೆ. ಫ‌ಸ್ಟ್‌ ಡೇ ಜನರಿಗೆ ಸ್ವಲ್ಪ ಭಯ ಇತ್ತು. ಯಾವಾಗ ಸಿನಿಮಾದ ಬಗ್ಗೆ ಒಳ್ಳೇ ವಿಮರ್ಶೆ ಬರೋದಕ್ಕೆ ಶುರುವಾಯ್ತೋ ಆಗ ಆಡಿಯನ್ಸ್‌ ತಾವಾಗಿಯೇ ಥಿಯೇಟರ್‌ಗೆ ಬಂದರು.ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಇಂಡಸ್ಟ್ರಿಕೂಡ ನಮ್ಮ ಸಿನಿಮಾದ ರಿಸಲ್ಟ್ ಏನಾಗುತ್ತೋ ಎಂದು ಎದುರು ನೋಡುತ್ತಿತ್ತು’ ಎಂದರು.

ನಿರ್ಮಾಪಕ ದೇವರಾಜ್‌ ಮಾತನಾಡಿ, “ನನಗಿದು ಫ‌ಸ್ಟ್‌ ಹಿಟ್‌ ಸಿನಿಮಾ, ಎಲ್ಲ ಅಂದುಕೊಂಡಂತೆ ಆಗಿದ್ದರೆ,ಕಳೆದ ಮೇ ತಿಂಗಳಲ್ಲೇ ನಮ್ಮ ಸಿನಿಮಾ ರಿಲೀಸ್‌ ಮಾಡಬೇಕಿತ್ತು. ಆದ್ರೆ ಕೋವಿಡ್ ಕಾರಣದಿಂದ ರಿಲೀಸ್‌ ಆಗಲಿಲ್ಲ. ಈಗ ರಿಸ್ಕ್ ಇಟ್ಟುಕೊಂಡೆ ಸಿನಿಮಾರಿಲೀಸ್‌ ಮಾಡಿದ್ದೇವೆ. ಅಂದುಕೊಂಡಂತೆ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್‌ ಬರುತ್ತಿದೆ. ಮುಂದೆ ಬರುವವರಿಗೆ ದಾರಿ ಸಿಕ್ಕಂತಾಗಿದೆ’ ಎಂದರು.

ಹಿರಿಯ ನಟಿ ಶೃತಿ ಮಾತನಾಡಿ, “ಲಾಕ್‌ಡೌನ್‌ ನಂತರ ಒಳ್ಳೇ ಸಿನಿಮಾ ರಿಲೀಸ್‌ ಆಗಿದೆ. ಇಡಿ ಚಿತ್ರರಂಗವನ್ನು ಈ ಸಿನಿಮಾ ಒಟ್ಟುಗೂಡಿಸಿದೆ.ಕನ್ನಡ ಜನರಿಗೆ ಚಿತ್ರರಂಗದ ಮೇಲೆ ಎಷ್ಟು ಪ್ರೀತಿಯಿದೆ ಅನ್ನೋದನ್ನ ಈ ಸಿನಿಮಾ ತೋರಿಸಿಕೊಟ್ಟಿದೆ. ನನ್ನದು ಒಂದೇ ದಿನದ ಪಾತ್ರವಾದರೂ ತುಂಬ ತೃಪ್ತಿಕೊಟ್ಟಿದೆ. ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಖುಷಿಯಾಗಿದೆ’ ಎಂದರು.

ಇದನ್ನೂ ಓದಿ :ಕೋಮಲ್‌ 2020 ಗೆ ಮುಹೂರ್ತ

“ಸಿನಿಮಾ ರಿಲೀಸ್‌ ಆದ ದಿನದಿಂದಲೂ ನಾವು ಥಿಯೇಟರ್‌ಗೆ ಹೋಗುತ್ತಿದ್ದೇವೆ. ಜನ ತುಂಬಾ ಉತ್ಸಾಹದಿಂದ ಸಿನಿಮಾ ನೋಡುತ್ತಿದ್ದಾರೆ. ಆರಂಭದಲ್ಲಿ ನಮಗೂ ನಿರ್ದೇಶಕರು ತುಂಬಾ ರಿಸ್ಕ್ ತೆರೆದುಕೊಳ್ಳುತ್ತಿದ್ದಾರೆ ಎನಿಸಿತ್ತು. ನಮ್ಮ ಶ್ರಮ ವ್ಯರ್ಥ ಆಗಲಿಲ್ಲ’ ಎಂದರು.

ನಟ ಸಂಚಾರಿ ವಿಜಯ್‌. ಹಿರಿಯನಟ ಅವಿನಾಶ್‌ ಮಾತನಾಡಿ, “ಈ ಸಿನಿಮಾದಲ್ಲಿ ಕಥೆಯೇ ಹೀರೋ. ಥಿಯೇಟರ್‌ಗಳು ಓಪನ್‌ ಆಗಿ ತಿಂಗಳೇ ಆಗ್ತಾ ಬಂತು. ಸಿನಿಮಾ ರಿಲೀಸ್‌ ಮಾಡಲು ಯಾರೂ ಮುಂದೆ ಬರ್ತಾ ಇರಲಿಲ್ಲ. ಎಲ್ಲ ನೀನು ಹೋಗು, ನಾನು ಹೋಗು ಎನ್ನುತ್ತಿದ್ದರು. ಬೆಕ್ಕಿಗೆ ಘಂಟೆಕಟ್ಟೊರು ಯಾರು? ಎಂಬ ಪ್ರಶ್ನೆ ಎದುರಾಗಿತ್ತು. ಅಂತಾ ಟೈಮ್‌ನಲ್ಲಿ ಈ ನಿರ್ಮಾಪಕರು ಬೆಕ್ಕಿಗೆ ಘಂಟೆ ಕಟ್ಟಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಒಂದು ಹೊಸ ಚೈತನ್ಯ ತುಂಬಿದ್ದಾರೆ. ನಿರೀಕ್ಷೆಗೂ ಮೀರಿದ ಸಪೋರ್ಟ್‌ ನಮ್ಮ ಚಿತ್ರಕ್ಕೆ ಸಿಗುತ್ತಿದೆ’ ಎಂದರು.

ಬೆಂಜಮಿನ್‌ ಆಗಿ ರಾಘುಗೆ ಮೆಚ್ಚುಗೆ :

ಆಕ್ಟ್ 1978 ಚಿತ್ರ ನೋಡಿದವರಿಗೆ ಅಲ್ಲೊಂದು ಪಾತ್ರ ಗಮನ ಸೆಳೆಯುತ್ತದೆ. ಅದು ಬೆಂಜಮಿನ್‌ ಪಾತ್ರ.ಸೀರಿಯಸ್‌ ವಾತಾವರಣದ ನಡುವೆ ಆಗಾಗ ತಮ್ಮ ಡೈಲಾಗ್‌, ಮ್ಯಾನರೀಸಂ ಮೂಲಕ ಗಮನ ಸೆಳೆಯುವ ಬೆಂಜಮಿನ್‌ ಪಾತ್ರದಲ್ಲಿ ಕಾಣಿಸಿಕೊಂಡಿರೋದು ರಾಘು ಶಿವಮೊಗ್ಗ. ಚೂರಿಕಟ್ಟೆ ಸಿನಿಮಾನಿರ್ದೇಶಿಸಿ ಮೆಚ್ಚುಗೆ ಪಡೆದಿದ್ದ ರಾಘು ಈಗ ನಟನೆಯತ್ತ ಮುಖಮಾಡಿದ್ದಾರೆ. ಆಕ್ಟ್ 1978 ನೋಡಿದವರಿಂದ ರಾಘು ಅವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಹೊಸ ಸಿನಿಮಾಗಳ ಆಫ‌ರ್‌ ಕೂಡಾ ಬರುತ್ತಿವೆ. ಈಗಾಗಲೇ ಮತ್ತೂಂದು ಹೊಸಸಿನಿಮಾದಲ್ಲಿ ನಟಿಸುತ್ತಿದ್ದಾರೆ. “ನನಗೆ ಯಾವುದೇ ಪಾತ್ರವಾದರೂ ಮಾಡಲು ಸಿದ್ಧ. ಆದರೆ, ಅದರಲ್ಲಿ ವಿಭಿನ್ನತೆಇರಬೇಕು. ಆಕ್ಟ್ 1978 ಚಿತ್ರದ ನನ್ನ ಪಾತ್ರದ ಬಗ್ಗೆಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದೆ ನಟನೆಯತ್ತ ಹೆಚ್ಚು ಫೋಕಸ್‌ ಮಾಡುವ ಎಂದಿದ್ದೇನೆ’ ಎನ್ನುವುದು ರಾಘು ಮಾತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ- ಬೃಹತ್ ಮೊತ್ತ ವಂಚೆನೆ- ಇಬ್ಬರು ಟೆಕ್ಕಿಗಳ ಬಂಧನ

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ- ಬೃಹತ್ ಮೊತ್ತ ವಂಚೆನೆ- ಇಬ್ಬರು ಟೆಕ್ಕಿಗಳ ಬಂಧನ

Untitled-1

ಕ್ರಿಕೆಟ್ :‌ ದೀಪಕ್‌ ಹೂಡಾ ಒಂದು ವರ್ಷ ಅಮಾನತು

ನನ್ನ ಸೋಲಿನ ಹಿಂದೆ ಕುತಂತ್ರ ಇತ್ತು: ನಿಖಿಲ್ ‌ಕುಮಾರಸ್ವಾಮಿ

ನನ್ನ ಸೋಲಿನ ಹಿಂದೆ ಕುತಂತ್ರ ಇತ್ತು: ನಿಖಿಲ್ ‌ಕುಮಾರಸ್ವಾಮಿ

ಫೋಟೋಶೂಟ್ ಮಾಡುತ್ತಿದ್ದಾಗ ಜೇನು ನೊಣ ದಾಳಿ ; ಮೂವರು ಮಲಪ್ರಭಾ ಕಾಲುವೆಯಲ್ಲಿ ನಾಪತ್ತೆ

ಫೋಟೋಶೂಟ್ ಮಾಡುತ್ತಿದ್ದಾಗ ಜೇನು ನೊಣ ದಾಳಿ ; ಮೂವರು ಮಲಪ್ರಭಾ ಕಾಲುವೆಯಲ್ಲಿ ನಾಪತ್ತೆ

ಮೂಡುಬಿದಿರೆ ಮಾರೂರುನಲ್ಲಿ  ಸರಕಾರಿ ಮದ್ಯದಂಗಡಿ: ಕಾಂಗ್ರೆಸ್‌ ಪ್ರತಿಭಟನೆ

ಮೂಡುಬಿದಿರೆ ಮಾರೂರುನಲ್ಲಿ  ಸರಕಾರಿ ಮದ್ಯದಂಗಡಿ: ಕಾಂಗ್ರೆಸ್‌ ಪ್ರತಿಭಟನೆ

Deepika Padukone says Ranveer Singh keeps on asking why she manages home herself, even orders groceries

ಮನೆಗೆಲಸ ಮಾಡುವುದರಲ್ಲಿ ನನಗೆ ಹೆಮ್ಮೆ ಇದೆ: ದೀಪಿಕಾ ಪಡುಕೋಣೆ

beeper

ಒಂದೇ ಆ್ಯಪ್ ನೊಳಗೆ 13 ಅಪ್ಲಿಕೇಶನ್ ಗಳ ಬಳಕೆ: ಇಲ್ಲಿದೆ ವಿವರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು

‘ಇನ್ಸ್‌ಪೆಕ್ಟರ್‌ ವಿಕ್ರಂ’ ರೆಡಿ ಟು ರಿಪೋರ್ಟಿಂಗ್‌ …

‘ಇನ್ಸ್‌ಪೆಕ್ಟರ್‌ ವಿಕ್ರಂ’ ರೆಡಿ ಟು ರಿಪೋರ್ಟಿಂಗ್‌ …

ವಯಸ್ಸಿನ ಅವಾಂತರ ಸಂಚಾರಿ ಅವಸ್ಥಾಂತರ

ವಯಸ್ಸಿನ ಅವಾಂತರ ಸಂಚಾರಿ ಅವಸ್ಥಾಂತರ

ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

ಇಂದು ತೆರೆಗೆ ಐದು ಚಿತ್ರಗಳು

ಇಂದು ತೆರೆಗೆ ಐದು ಚಿತ್ರಗಳು

MUST WATCH

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

ಹೊಸ ಸೇರ್ಪಡೆ

Untitled-1

ಹದಗೆಟ್ಟ ಸಬ್ಲಾಡಿ ರಸ್ತೆ ಅಭಿವೃದ್ಧಿಗೆ ಕೂಡಿ ಬಾರದ ಕಾಲ

ಗಣರಾಜ್ಯೋತ್ಸವ: ಉಡುಪಿಯಲ್ಲಿ ಸಚಿವ ಅಂಗಾರ ಧ್ವಜಾರೋಹಣ

ಗಣರಾಜ್ಯೋತ್ಸವ: ಉಡುಪಿಯಲ್ಲಿ ಸಚಿವ ಅಂಗಾರ ಧ್ವಜಾರೋಹಣ

ತಿಂಗಳಿಗೆ 2 ಬಾರಿ ಸಪ್ತಪದಿ: ಸಚಿವ ಕೋಟ

ತಿಂಗಳಿಗೆ 2 ಬಾರಿ ಸಪ್ತಪದಿ: ಸಚಿವ ಕೋಟ

“7,600 ಕಿ.ಮೀ. ತಟ ರಕ್ಷಣೆಗೆ ಕೋಸ್ಟ್‌  ಗಾರ್ಡ್‌ ಸದಾ ಸಿದ್ಧ’

“7,600 ಕಿ.ಮೀ. ತಟ ರಕ್ಷಣೆಗೆ ಕೋಸ್ಟ್‌ ಗಾರ್ಡ್‌ ಸದಾ ಸಿದ್ಧ’

ತುಳು ಲಿಪಿಗೆ ಏಕರೂಪತೆ: ಕೆ.ಪಿ. ರಾವ್‌ ಇರಾದೆ

ತುಳು ಲಿಪಿಗೆ ಏಕರೂಪತೆ: ಕೆ.ಪಿ. ರಾವ್‌ ಇರಾದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.