ಸಾಯಿಕುಮಾರ್ ಹೊಸ ಅವತಾರ
Team Udayavani, Jul 27, 2019, 12:48 PM IST
ಸುನಿ ನಿರ್ದೇಶನದ “ಅವತಾರ್ ಪುರುಷ’ದಲ್ಲಿ ಶ್ರೀನಗರ ಕಿಟ್ಟಿ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದು, ಚಿತ್ರದ ಲುಕ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಈಗ ಸಾಯಿಕುಮಾರ್ ಸರದಿ. “ಅವತಾರ್ ಪುರುಷ’ದಲ್ಲಿ ಸಾಯಿಕುಮಾರ್ ಪ್ರಮುಖ ಪಾತ್ರ ಮಾಡಿರುವ ವಿಚಾರ ನಿಮಗೆ ಗೊತ್ತಿರಬಹುದು.
ಈಗ ಚಿತ್ರದಲ್ಲಿನ ಅವರ ಗೆಟಪ್ ಹಾಗೂ ಪಾತ್ರದ ವಿವರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇಂದು ಸಾಯಿಕುಮಾರ್ ಅವರ ಹುಟ್ಟುಹಬ್ಬ. ಈ ಪ್ರಯುಕ್ತ “ಅವತಾರ್ ಪುರುಷ’ದಲ್ಲಿನ ಅವರ ಗೆಟಪ್ ಅನ್ನು ರಿಲೀಸ್ ಮಾಡಲಾಗಿದ್ದು, ಚಿತ್ರದಲ್ಲಿ ಸಾಯಿಕುಮಾರ್ ರಾಮ ಜೋಯಿಸ್ ಎಂಬ ಆಯುರ್ವೇದ ಪಂಡಿತನ ಪಾತ್ರ ಮಾಡುತ್ತಿದ್ದಾರೆ.
ಜೀವನದಲ್ಲಿ ತುಂಬಾ ಶಿಸ್ತಿನ ವ್ಯಕ್ತಿಯಾಗಿ, ದೈವ, ದೇವರು, ಆಚಾರ-ವಿಚಾರ ಎಂದು ನಂಬಿರುವ ಜೊತೆಗೆ ಸುತ್ತಮುತ್ತಲ ಹಳ್ಳಿಯ ಜನರಿಗೆ ಕಡಿಮೆ ವೆಚ್ಚದಲ್ಲಿ ಆಯುರ್ವೇದ ಚಿಕಿತ್ಸೆ ಕೊಡುವ ಪಾತ್ರ ಅವರದಂತೆ. ಸಾಯಿಕುಮಾರ್ ಕೂಡಾ ಈ ಪಾತ್ರದ ಬಗ್ಗೆ ಖುಷಿಯಾಗಿದ್ದು, “ಅವತಾರ್ ಪುರುಷ
ಟೈಟಲ್ನಿಂದ ಹಿಡಿದು ಇಡೀ ತಂಡವೇ ತುಂಬಾ ಇಂಟರೆಸ್ಟಿಂಗ್.
ಒಳ್ಳೆಯ ಪಾತ್ರ ಸಿಕ್ಕಿದೆ. ತುಂಬಾ ಖುಷಿಯಿಂದ ನಟಿಸಿದ್ದೇನೆ’ ಎಂದಿದ್ದಾರೆ. ಅಂದಹಾಗೆ, ಈ ಚಿತ್ರ ಪುಷ್ಕರ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ