
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ – ಹರಿಪ್ರಿಯಾ; ಶಿವಣ್ಣ, ಡಾಲಿ ಸೇರಿ ಅನೇಕ ಗಣ್ಯರು ಭಾಗಿ
Team Udayavani, Jan 26, 2023, 3:23 PM IST

ಮೈಸೂರು: ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇಂದು(ಜನವರಿ 26)ತಮ್ಮ ಪ್ರೀತಿಗೆ ದಾಂಪತ್ಯದ ಮುದ್ರೆಯನ್ನು ಒತ್ತಿದ್ದಾರೆ. ಇಬ್ಬರೂ ಆಪ್ತರ ಸಮ್ಮುಖದಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಧು ವರರ ಆಪ್ತ ವಲಯ ಹಾಗೂ ಆತ್ಮೀಯ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿ ನವ ದಂಪತಿಗೆ ಹಾರೈಸಿದ್ದಾರೆ. ನಟ ಶಿವರಾಜ್ ಕುಮಾರ್, ಡಾಲಿ ಧನಂಜಯ, ಅಮೃತ ಅಯ್ಯಂಗರ್, ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಸತೀಶ್ ನೀನಾಸಂ ಸೇರಿದಂತೆ ಸಂಸದ ಪ್ರತಾಪ್ ಸಿಂಹ, ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎ.ಎಸ್. ರಾಮದಾಸ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.
ಮದುವೆ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜ.28 ರಂದು ಸಿಂಹಪ್ರಿಯಾ ಜೋಡಿಯ ಆರತಕ್ಷತೆ ಕಾರ್ಯಕ್ರಮ ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಮುಖ ಗಣ್ಯರನ್ನು ಆಹ್ವಾನಿಸಲಾಗಿದೆ.
ಟಾಪ್ ನ್ಯೂಸ್
