ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ
Team Udayavani, Dec 3, 2022, 2:47 PM IST
ನಟಿ ಹರಿಪ್ರಿಯ ಮತ್ತು ನಟ ವಶಿಷ್ಟ ಸಿಂಹ ವಿವಾಹವಾಗುತ್ತಾರೆ ಎಂಬ ವದಂತಿಗಳ ನಡುವೆಯೇ, ಶುಕ್ರವಾರ ಹರಿಪ್ರಿಯ ಮಾಡಿದ್ದ ಟ್ವೀಟೊಂದು ಹಲವು ಗುಮಾನಿಗಳಿಗೆ ಕಾರಣವಾಗಿತ್ತು. ಸಿಂಹವೊಂದು ಪುಟ್ಟ ಮಗುವನ್ನು ಹಿಡಿದುಕೊಂಡಿರುವ ಚಿತ್ರಕ್ಕೆ “ಚಿನ್ನ ನಿನ್ನ ತೋಳಿನಲಿ ಕಂದ ನಾನು’ ಎಂದು ಶೀರ್ಷಿಕೆ ನೀಡಿದ್ದರು. ಇದು ವಶಿಷ್ಟ ಸಿಂಹ ಅವರ ಬಗ್ಗೆಯೇ ಹೇಳಿದ್ದು ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಇದೀಗ ಇದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.
ಹೌದು, ಸ್ವತಃ ವಸಿಷ್ಟ ಸಿಂಹ ಅವರು ಟ್ವೀಟ್ ಮಾಡಿದ್ದಾರೆ. ಹರಿಪ್ರಿಯಾ ಪೋಸ್ಟ್ ಮಾಡಿದ್ದ ಸಿಂಹದ ಚಿತ್ರವನ್ನೇ ಟ್ವೀಟ್ ಮಾಡಿರುವ ವಸಿಷ್ಟ ಸಿಂಹ, ‘ಎಂದೂ ನಿನ್ನ ನೆರಳಾಗಿ ಕಾಯುವೆ ನಾನು’ ಎಂದು ಬರೆದುಕೊಂಡಿದ್ದಾರೆ.
ಹರಿಪ್ರಿಯಾ ಮತ್ತು ವಸಿಷ್ಟ ಸಿಂಹ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಜೋಡಿ ಎಲ್ಲೂ ಹೇಳಿಕೊಂಡಿಲ್ಲ. ಈ ಜೋಡಿ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಂದೂ ನಿನ್ನ ನೆರಳಾಗಿ ಕಾಯುವೆ ನಾನು..!!❤️ pic.twitter.com/rIfsb0l1bg
— Vasishta N Simha (@ImSimhaa) December 3, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ಮಹಿಳಾ ಅಧಿಕಾರಿಯಿಂದ ಡಾಕ್ಟರ್ ಗೆ ಮಸಾಜ್! ಫೋಟೊ- ವಿಡಿಯೋ ವೈರಲ್
ದುರಂತ ಅಂತ್ಯ:ನ್ಯೂಮೋನಿಯಾಕ್ಕೆ ಕಾದ ರಾಡ್ ನಿಂದ 3ತಿಂಗಳ ಹಸುಳೆಗೆ 51 ಬಾರಿ ಚುಚ್ಚಿ ಚಿಕಿತ್ಸೆ
ಬೆಂಗಳೂರಲ್ಲಿ ಮಲಯಾಳಂನ “ಕೋಲ್ಡ್ ಕೇಸ್” ಸಿನೆಮಾ ಹೋಲುವ ಪ್ರಕರಣ
ಹಿಟ್ & ರನ್’ಗೆ ಇಬ್ಬರ ಬಲಿ ಪ್ರಕರಣ! ‘ಮ್ಯಾಡ್ ಇನ್ ಕುಡ್ಲ’ ಕಾಮಿಡಿಯನ್ ಅರ್ಪಿತ್ ಬಂಧನ
ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR