Udayavni Special

ಮದುಮಗಳು ಆಗೋದೆ ಓಂಥರಾ ಹಿತಾ…

Team Udayavani, Jul 29, 2019, 3:11 PM IST

Hita-Chandrashekhar—04

ನಟಿ ಹಿತಾ ಚಂದ್ರಶೇಖರ್‌ ಹಸೆಮಣೆ ಏರಲು ತಯಾರಿ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಹಿತಾ ನಿಜವಾಗಿಯೂ ಹಸೆಮಣೆ ಏರುವ ಮುಂಚೆಯೇ ಮದುಮಗಳ ಗೆಟಪ್‌ನಲ್ಲಿ ಬಿಗ್‌ಸ್ಕ್ರೀನ್‌ ಮೇಲೆ ಎಂಟ್ರಿ ಕೊಡಲಿದ್ದಾರೆ. ಹೌದು, ಹಿತಾ ಚಂದ್ರಶೇಖರ್‌ ಇನ್ನೂ ಹೆಸರಿಡದ ತಮ್ಮ ಮುಂಬರುವ ಚಿತ್ರದಲ್ಲಿ ಮದುಮಗಳ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಈಗಾಗಲೇ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್‌.ಜಿ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಹಿತಾ ಅವರಿಗೆ ಸಿದ್ಧಾರ್ಥ್ ಮಾಧ್ಯಮಿಕ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಮೇಘನಾ ಗಾಂವ್ಕರ್‌, ಅರುಣಾ ಬಾಲರಾಜ್‌, ಬಾಬು ಹಿರಣ್ಣಯ್ಯ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಜುಲೈ ಮೊದಲ ವಾರದಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಇದೇ ತಿಂಗಳ ಅಂತ್ಯಕ್ಕೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಲಿದೆ.

ಇನ್ನು ಈ ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ಮಾತನಾಡುವ ಹಿತಾ, “ಈ ಚಿತ್ರದಲ್ಲಿ ನನ್ನದು
ಮದುವೆಯ ಹೆಣ್ಣಿನ ಪಾತ್ರ. ಮದುವೆಯ ಬಗ್ಗೆ ತುಂಬ ಕನಸುಗಳನ್ನು ಕಟ್ಟಿಕೊಂಡಿರುವ, ಒಂಥರಾ ಪಾಪದ ಆದ್ರೆ ಚುರುಕಾಗಿರುವ ಹುಡುಗಿ ಆಗಿ ಕಾಣಿಸಿಕೊಂಡಿದ್ದೇನೆ. ಮನೆಯಲ್ಲಿ ತುಂಬಾ ಮುದ್ದಾಗಿ ಬೆಳೆಸಿದ ಹುಡುಗಿ ಪಾತ್ರ. ನನ್ನ ರಿಯಲ್‌ ಲೈಫ್ಗಿಂತ ತುಂಬಾ ವಿಭಿನ್ನ ಪಾತ್ರ ಇದಾಗಿದೆ. ಚಿತ್ರದ ಕಥೆ ಮತ್ತು ನನ್ನ ಪಾತ್ರ ಎರಡೂ ಇಷ್ಟವಾಗಿದ್ದರಿಂದ ಈ ಚಿತ್ರವನ್ನು ಒಪ್ಪಿಕೊಂಡೆ. ಚಿತ್ರದ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಒಂದು ಮದುವೆಯಲ್ಲೆ ಏನೇನೋ ನಡೆಯುತ್ತಿರುತ್ತದೆಯೊ, ಅದೇ ಸನ್ನಿವೇಶಗಳು ಅದೇ ಥರ ಪಾತ್ರಗಳು ಈ ಚಿತ್ರದಲ್ಲೂ ಇವೆ’ ಎನ್ನುವ ವಿವರಣೆ ಕೊಡುತ್ತಾರೆ.

ಅಂದಹಾಗೆ, ಈ ಚಿತ್ರದಲ್ಲಿ ಒಂದು ಮದುವೆ ಮನೆಯಲ್ಲಿ ನಡೆ ಯುವ ಕಥೆಯಿದ್ದು, ಹಿಂದಿನ ದಿನದ ರಿಸೆಪ್ಷನ್‌ ನಿಂದ ಬೆಳಿಗ್ಗೆ ಮದುವೆಯವರೆಗೆ ಏನೇನೂ ನಡೆಯುತ್ತದೆ ಅನ್ನೋದರ ಸುತ್ತ ಚಿತ್ರ ನಡೆಯಲಿದೆಯಂತೆ. ಇನ್ನು ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ರಾಕೇಶ್‌ ಛಾಯಾಗ್ರಹಣವಿದೆ. ಸದ್ಯ ಈ ಚಿತ್ರದ ಪ್ರೊಡಕ್ಷನ್‌ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ಡಿಸೆಂಬರ್‌ ಅಥವಾ ಮುಂದಿನ ಜನವರಿ ವೇಳೆಗೆ ಮದುಮಗಳ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದು ಗ್ಯಾರೆಂಟಿ ಎನ್ನುತ್ತಾರೆ ಹಿತಾ ಚಂದ್ರಶೇಖರ್‌.

ಟಾಪ್ ನ್ಯೂಸ್

Oxygen On wheels ready to medicate patient in Bengalore : Lakshaman Savaadi Oxygen On wheels ready to medicate patient in Bengalore : Lakshaman Savaadi

ಸೇವೆಗೆ ಸಿದ್ಧವಾಗಿರುವ ‘ಆಕ್ಸಿಜನ್  ಆನ್ ವ್ಹೀಲ್ಸ್’ ಬಸ್ : ಡಿಸಿಎಂ ಸವದಿ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

serum institute ceo adar poonawalla to invest over usd 300 million in uk may make inoculations

ಬ್ರಿಟನ್ ನಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ!

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 341 ಅಂಕ ಕುಸಿತ, 14,900ರ ಗಡಿ ತಲುಪಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 341 ಅಂಕ ಕುಸಿತ, 14,900ರ ಗಡಿ ತಲುಪಿದ ನಿಫ್ಟಿ

2 ಕೋಟಿ ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್: ಡಿಸಿಎಂ ಅಶ್ವತ್ಥನಾರಾಯಣ

2 ಕೋಟಿ ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್: ಡಿಸಿಎಂ ಅಶ್ವತ್ಥನಾರಾಯಣ

Three Ganja Suppliers arrested by police in Hubballi

ಗಾಂಜಾ ಸಾಗಾಟದಲ್ಲಿ ತೊಡಗಿದ್ದ ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jftytyt

ಚಿತ್ರರಂಗದ 3 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಣೆಗೆ ಮುಂದಾದ ನಟ ಉಪೇಂದ್ರ

iouyhijghg

ರಾಮು ಅಗಲಿಕೆಯಿಂದ ಹೃದಯ ಚೂರಾಗಿದೆ : ನಟಿ ಮಾಲಾಶ್ರೀ

dsggg

ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಮಾದರಿಯಾದ ವಸಿಷ್ಠ ಸಿಂಹ

ghghtutu

ಮಾಸ್ಟರ್‌ಶೆಫ್ ಆಗಲಿದ್ದಾರೆ ಕಿಚ್ಚ

fgdfgrtrtr

ಬಿಗ್‍ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ.ನೀಡಿದ ನಟ ಸುದೀಪ್

MUST WATCH

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

udayavani youtube

ಬೆಂಗಳೂರಿಗೆ ಬಂತು 120 ಟನ್ ಪ್ರಾಣವಾಯು

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

ಹೊಸ ಸೇರ್ಪಡೆ

Oxygen On wheels ready to medicate patient in Bengalore : Lakshaman Savaadi Oxygen On wheels ready to medicate patient in Bengalore : Lakshaman Savaadi

ಸೇವೆಗೆ ಸಿದ್ಧವಾಗಿರುವ ‘ಆಕ್ಸಿಜನ್  ಆನ್ ವ್ಹೀಲ್ಸ್’ ಬಸ್ : ಡಿಸಿಎಂ ಸವದಿ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

serum institute ceo adar poonawalla to invest over usd 300 million in uk may make inoculations

ಬ್ರಿಟನ್ ನಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ!

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

11-4

ಆಯಸ್ಕಾಂತೀಯ ವಲಯಗಳಲ್ಲಿ ಸಂಚರಿಸುತ್ತವೆ ಶಾರ್ಕ್ ಮೀನುಗಳು..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.