ಮತ್ತೆ ಸ್ಮಶಾನದಲ್ಲಿ “ರಾಧಿಕಾ ನೃತ್ಯ’

Team Udayavani, Mar 12, 2019, 5:51 AM IST

“ಭೈರಾದೇವಿ’ ಚಿತ್ರೀಕರಣದ ವೇಳೆ ನಟಿ ರಾಧಿಕಾ, ಸ್ಮಶಾನದಲ್ಲಿ ಕಾಲು ಜಾರಿ ಬಿದ್ದು ಬೆನ್ನಿಗೆ ಏಟು ಮಾಡಿಕೊಂಡಿದ್ದರು. ಕಾಳಿ ಗೆಟಪ್‌ ಹಾಕಿ ಶಾಂತಿನಗರದ ಸ್ಮಶಾನದಲ್ಲಿ ರಾತ್ರಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ರಾಧಿಕಾ ಗೋರಿ ಮೇಲೆ ನಡೆದುಕೊಂಡು ಬರುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದರು. ಅದರ ಬೆನ್ನಲ್ಲೇ ಆ ಸುದ್ದಿಗೆ ಹಾರರ್‌ ಟಚ್‌ ಕೂಡಾ ಸಿಕ್ಕಿತು. ಕಾಳಿ ಮುನಿದ ಕಾರಣ ರಾಧಿಕಾ ಬೀಳುವಂತಾಯಿತು ಎಂಬೆಲ್ಲಾ ಸುದ್ದಿಗಳು ಹರಿದಾಡತೊಡಗಿದವು. ಸಹಜವಾಗಿಯೇ ಒಂದು ಪ್ರಶ್ನೆ ಎದ್ದಿತ್ತು.

ರಾಧಿಕಾ ಮತ್ತೆ ಸ್ಮಶಾನದಲ್ಲಿ ಚಿತ್ರೀಕರಣ ಮಾಡುತ್ತಾರಾ ಎಂದು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಧಿಕಾ ಈಗ ಚೇತರಿಸಿಕೊಂಡಿದ್ದು, ಸದ್ಯ “ದಮಯಂತಿ’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಆ ಚಿತ್ರೀಕರಣ ಮುಗಿಸಿಕೊಂಡು ತಮ್ಮದೇ ಹೋಂಬ್ಯಾನರ್‌ನಲ್ಲಿ ತಯಾರಾಗುತ್ತಿರುವ “ಭೈರಾದೇವಿ’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಅದು ಸ್ಮಶಾನದಲ್ಲಿ ಎಂಬುದು ವಿಶೇಷ.

ಮಾರ್ಚ್‌ 21 ರಿಂದ “ಭೈರಾದೇವಿ’ ಚಿತ್ರೀಕರಣ ಆರಂಭವಾಗಲಿದೆ. ಶಾಂತಿನಗರದ ಸ್ಮಶಾನದಲ್ಲಿ ಸುಮಾರು ಎಂಟು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ರಾಧಿಕಾ ಅವರು ಕಾಲು ಜಾರಿ ಬಿದ್ದು, ಎಲ್ಲಿ ಶೂಟಿಂಗ್‌ ನಿಂತಿತ್ತೋ, ಅಲ್ಲಿಂದಲೇ ಮತ್ತೆ ಆರಂಭವಾಗಲಿದೆ. ಈ ಮೂಲಕ ರಾಧಿಕಾ ಮತ್ತೆ ಸ್ಮಶಾನದಲ್ಲಿ ಕಾಳಿ ಗೆಟಪ್‌ನಲ್ಲಿ ಕುಣಿಯಲಿದ್ದಾರೆ.

ಈ ಬಾರಿ ಕೇವಲ ಅವರೊಬ್ಬರೇ ಅಲ್ಲ, ಅವರ ಜೊತೆ ಬರೋಬ್ಬರಿ 100 ಮಂದಿ ಕಾಳಿ ಗೆಟಪ್‌ನಲ್ಲಿ ಸಾಥ್‌ ಕೊಡಲಿದ್ದಾರೆ. ಈ ಮೂಲಕ ತಾನು ಬಿದ್ದ ಬಳಿಕ ಎದ್ದಿರುವ ಊಹಾಪೋಹಾ ಸುದ್ದಿಗಳನ್ನೆಲ್ಲಾ ಬದಿಗೊತ್ತಿ ನೃತ್ಯ ಮಾಡಲು ಅಣಿಯಾಗಿದ್ದಾರೆ. ಚಿತ್ರದಲ್ಲಿ ರಮೇಶ್‌ ಅರವಿಂದ್‌, ಸ್ಕಂದ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರವನ್ನು ಶ್ರೀಜಯ್‌ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಆರ್‌ಎಕ್ಸ್‌ ಸೂರಿ’ ಚಿತ್ರ ಮಾಡಿದ್ದ ಶ್ರೀಜಯ್‌ಗೆ ಇದು ಎರಡನೇ ಚಿತ್ರ.  

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ