ಪ್ರೇಮಂ ಪೂಜ್ಯಂಗೆ ಐಂದ್ರಿತಾ ನಾಯಕಿ?

ನಾಯಕ ಪ್ರೇಮ್‌ 25ನೇ ಚಿತ್ರ

Team Udayavani, Apr 16, 2019, 3:00 AM IST

ನಟ ಪ್ರೇಮ್‌ ಈಗ 25ನೇ ಸಿನಿಮಾ ಹೊಸ್ತಿಲಿನಲ್ಲಿ ನಿಂತಿರೋದು ನಿಮಗೆ ಗೊತ್ತೇ ಇದೆ. ಅವರ 25ನೇ ಸಿನಿಮಾಕ್ಕೆ “ಪ್ರೇಮಂ ಪೂಜ್ಯಂ’ ಎಂದು ಟೈಟಲ್‌ ಇಡಲಾಗಿದೆ. ಈ ಮೂಲಕ ಲವ್‌ಸ್ಟೋರಿಯೊಂದನ್ನು ಹೇಳಲು ನಿರ್ದೇಶಕರು ಹೊರಟಿದ್ದಾರೆ.

ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆನ್ನಲಾಗಿದೆ. ಅದು ಬೇರಾರು ಅಲ್ಲ, ಐಂದ್ರಿತಾ ರೇ. ಹೌದು, ನಟಿ ಐಂದ್ರಿತಾ ರೇ “ಪ್ರೇಮಂ ಪೂಜ್ಯಂ’ಗೆ ಚಿತ್ರಕ್ಕೆ ನಾಯಕಿಯಾಗಿದ್ದಾರೆನ್ನಲಾಗಿದೆ. ಈ ಮೂಲಕ ದೊಡ್ಡ ಗ್ಯಾಪ್‌ನ ನಂತರ ಐಂದ್ರಿತಾ ಸಿನಿಮಾವೊಂದನ್ನು ಒಪ್ಪಿಕೊಂಡಂತಾಗಿದೆ. ಇದು ಐಂದ್ರಿತಾ ಮದುವೆ ಬಳಿಕ ಒಪ್ಪಿಕೊಳ್ಳುತ್ತಿರುವ ಮೊದಲ ಸಿನಿಮಾ.

ಇತ್ತೀಚೆಗೆ ಯಾವುದೇ ಕನ್ನಡ ಸಿನಿಮಾ ಒಪ್ಪಿಕೊಳ್ಳದೇ, ತನ್ನದೇ ಕೆಲಸಗಳಲ್ಲಿ ಬಿಝಿಯಾಗಿರುವ ಐಂದ್ರಿತಾ, ಕೊನೆಯದಾಗಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, “ಮೇಲುಕೋಟೆ ಮಂಜ’ ಚಿತ್ರದಲ್ಲಿ. ಆ ಬಳಿಕ “ರ್‍ಯಾಂಬೋ-2′ ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡರು. ಈಗ “ಪ್ರೇಮಂ ಪೂಜ್ಯಂ’ ಚಿತ್ರವನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ.

ಅಂದಹಾಗೆ, ಪ್ರೇಮ್‌ ಹಾಗೂ ಐಂದ್ರಿತಾ “ಚೌಕ’ ಚಿತ್ರದಲ್ಲೂ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈಗ ಮತ್ತೂಮ್ಮೆ ಜೊತೆಯಾಗಿದ್ದಾರೆ. ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ರಾಘವೇಂದ್ರ ಅವರಿಗೆ ಇದು ಮೊದಲ ಅನುಭವ.

ಪ್ರೇಮ್‌ ಅವರಿಗಿಲ್ಲಿ ನಾಲ್ಕು ಶೇಡ್‌ನ‌ ಪಾತ್ರವಿದ್ದು, ರೆಗ್ಯುಲರ್‌ ಫಾರ್ಮೆಟ್‌ನಿಂದ ಹೊರಗಿರುವ ಚಿತ್ರ ಇದಾಗಲಿದೆ. ಉಳಿದಂತೆ ಇಲ್ಲೂ ಕಾಮಿಡಿ, ಲವ್‌ ಸೆಂಟಿಮೆಂಟ್‌, ಫ್ಯಾಮಿಲಿ ಸೆಂಟಿಮೆಂಟ್‌ ಇದ್ದರೂ, ಅದರಾಚೆಗೆ ವಿಶೇಷವಾದಂತಹ ಸಂದೇಶವೂ ಇದೆಯಂತೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪುತ್ರ ನಟ ಕಂ ರಾಜಕಾರಣಿ ನಿಖಿಲ್‌ ಕುಮಾರ್‌ ಇಂದು (ಜ. 22) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮೂವತ್ತನೇ ವರ್ಷಕ್ಕೆ...

  • "ಆ ದಿನಗಳು' ಖ್ಯಾತಿಯ ಚೇತನ್‌ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಚಿತ್ರರಂಗದ ಬಹುತೇಕರಿಗೆ ಗೊತ್ತಿದೆ. ಆದರೆ, ಯಾವಾಗ ಎಂಬುದು ಗೊತ್ತಿರಲಿಲ್ಲ. ಅವರ ಮದುವೆ...

  • ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರಜ್ವಲ್‌ ದೇವರಾಜ್‌ ಅಭಿನಯದ "ಜಂಟಲ್‌ಮನ್‌' ಚಿತ್ರ ಜನವರಿ 31 ರಂದು ತೆರೆಕಾಣಬೇಕಿತ್ತು. ಆದರೆ, ಈಗ ಕಾರಣಾಂತರಗಳಿಂದ ಚಿತ್ರದ...

  • ಮೈಸೂರಿನ ಹೂಟಗಳ್ಳಿ ಹೊರವಲಯದ "ಒಡನಾಡಿ ಕೇಂದ್ರ'ದಲ್ಲಿ ಇತ್ತೀಚೆಗೆ ರಘು ಎಸ್‌.ಪಿ. ನಿರ್ದೇಶನವಿರುವ "ಗಿಫ್ಟ್ಬಾಕ್ಸ್‌' ಚಿತ್ರದ ಲಿರಿಕಲ್‌ ವೀಡಿಯೋ ಹಾಡನ್ನು ಅಲ್ಲಿನ...

  • ನಟ ಕಿಚ್ಚ ಸುದೀಪ್‌ ಅಭಿನಯಕ್ಕೆ ಈಗ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. 2020ನೇ ಸಾಲಿನ "ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌...

ಹೊಸ ಸೇರ್ಪಡೆ