“ಅಳಿದು ಉಳಿದವರು’ ಫ‌ಸ್ಟ್‌ಲುಕ್‌ ಬಂತು

Team Udayavani, Nov 19, 2019, 6:00 AM IST

ಆಶು ಬೆದ್ರ ಹಾಗೂ ಸಂಗೀತಾ ಭಟ್‌ ನಾಯಕ-ನಾಯಕಿಯಾಗಿ “ಅಳಿದು ಉಳಿದವರು’ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ನಟ ರಕ್ಷಿತ್‌ ಶೆಟ್ಟಿ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿ ಶುಭಕೋರಿದರು. ಅಂದಹಾಗೆ, ಈ ಚಿತ್ರದ ಮತ್ತೂಂದು ವಿಶೇಷವೆಂದರೆ ನಿರ್ದೇಶಕ “ಲೂಸಿಯಾ’ ಪವನ್‌ ಈ ಚಿತ್ರದಲ್ಲಿ ನಟಿಸಿದ್ದಾರೆ.

ದೊಡ್ಡ ಗ್ಯಾಪ್‌ನ ನಂತರ ಬಣ್ಣ ಹಚ್ಚಿರುವ ಅವರಿಗೆ ಇಲ್ಲಿ ಪ್ರಮುಖ ಪಾತ್ರವಿದೆಯಂತೆ. ಇದೊಂದು ಥ್ರಿಲ್ಲರ್‌ ಸಿನಿಮಾವಾಗಿದ್ದು, ಹೊಸ ಬಗೆಯ ಕಂಟೆಂಟ್‌ ಅನ್ನು ಹೊಂದಿದೆಯಂತೆ. ಈ ಹಿಂದೆ “ಕಹಿ’ ಸಿನಿಮಾ ಮಾಡಿದ್ದ ಅರವಿಂದ ಶಾಸ್ತ್ರಿ ಈ ಚಿತ್ರದ ನಿರ್ದೇಶಕರು. ಈಗಾಗಲೇ ಅನೇಕ ಧಾರಾವಾಹಿಗಳನ್ನು ನಿರ್ಮಿಸಿ, ಸಿನಿಮಾ ನಿರ್ಮಾಣದಲ್ಲೂ ತೊಡಗಿರುವ ಆಶು ಬೆದ್ರ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ