ಅಂಬರೀಶ್‌ ಮೊದಲ ತಿಂಗಳ ಪುಣ್ಯತಿಥಿ

Team Udayavani, Dec 22, 2018, 11:25 AM IST

ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್‌ ಅವರು ಅಗಲಿ ನವೆಂಂಬರ್‌ 24ಕ್ಕೆ ಒಂದು ತಿಂಗಳು. ಚಿತ್ರರಂಗದ ಮಂದಿ ಹಾಗೂ ಅವರ ಅಪ್ಪಟ ಅಭಿಮಾನಿಗಳು ಅಂಬರೀಶ್‌ ಎಲ್ಲೂ ಹೋಗಿಲ್ಲ, ನಮ್ಮ ಜೊತೆಯೇ ಇದ್ದಾರೆ ಎಂಬ ಭಾವನೆಯೊಂದಿಗೆ ದಿನ ಕಳೆಯುತ್ತಿದ್ದಾರೆ.

ನಿತ್ಯವೂ ನೂರಾರು ಜನ ಅಂಬರೀಶ್‌ ಅವರ ಅಂತ್ಯಕ್ರಿಯೆ ಸ್ಥಳಕ್ಕೆ ತೆರಳಿ, ಪುಷ್ಪ ನಮನ ಸಲ್ಲಿಸುತ್ತಿದ್ದಾರೆ. ಶುಕ್ರವಾರ ಅಂಬರೀಶ್‌ ಅವರ ಮೊದಲ ತಿಂಗಳ ಪುಣ್ಯತಿಥಿಯನ್ನು ಆಚರಿಸಲಾಯಿತು. ಅಂಬರೀಶ್‌ ಅವರ ನಿವಾಸದಲ್ಲಿ ಬೆಳಗ್ಗೆ ಸುಮಲತಾ ಅಂಬರೀಶ್‌ ಹಾಗೂ ಪುತ್ರ ಅಭಿಷೇಕ್‌ ಅವರು ಅಂಬರೀಶ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಿಂಗಳ ಮೊದಲ ಪುಣ್ಯತಿಥಿ ಆಚರಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್‌ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ ಕುಟುಂಬ ವರ್ಗ, ಅಪಾರ ಅಭಿಮಾನಿಗಳೊಂದಿಗೆ ಮೊದಲ ತಿಂಗಳ ಪುಣ್ಯತಿಥಿ ಆಚರಿಸಿತು. ಬೆಳಗ್ಗೆ 9 ಗಂಟೆ ಸುಮಾರಿಗೆ ಕಂಠೀರವ ಸ್ಟುಡಿಯೋಗೆ ಆಗಮಿಸಿದ ಸುಮಲತಾ ಮತ್ತು ಪುತ್ರ ಅಭಿಷೇಕ್‌ ಅವರು,

ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಅಂಬರೀಶ್‌ ಅವರ ಭಾವಚಿತ್ರ ಹಾಗೂ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ, ಅಲ್ಲಿಗೆ ಆಗಮಿಸಿದ್ದ ಅಭಿಮಾನಿಗಳಿಗೆ ಸಿಹಿ ವಿತರಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಕಲಾವಿದ ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಅನೇಕರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ