- Tuesday 10 Dec 2019
ರಜನಿ ಮಾತಲ್ಲಿ ಅಂಬಿ ಸ್ನೇಹ
Team Udayavani, Nov 26, 2018, 11:40 AM IST
ಅಂಬರೀಷ್ ಅವರ ವ್ಯಕ್ತಿತ್ವ ಎಂಥವರನ್ನಾದರೂ ಸೆಳೆಯುವಂಥದ್ದು. ಅದೇ ಕಾರಣದಿಂದ ಅವರ ಸ್ನೇಹಿತರ ಬಳಗ ದೊಡ್ಡದಿದೆ. ಕೇವಲ ಕನ್ನಡವಷ್ಟೇ ಅಲ್ಲದೇ ಪರಭಾಷಾ ನಟರು ಕೂಡಾ ಅಂಬರೀಷ್ ಅವರ ಆಪ್ತರಾಗಿದ್ದರು. ಅದರಲ್ಲಿ ಪ್ರಮುಖವಾಗಿದ್ದವರೆಂದರೆ ರಜನಿಕಾಂತ್. ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ಆಗಿ ಅಪಾರ ಸಂಖ್ಯೆಯ ಅಭಿಮಾನಿ ವರ್ಗವನ್ನು ಹೊಂದಿರುವ ರಜನಿಕಾಂತ್, ಅಂಬಿಯವರ “ಹೋಗೋ ಬಾರೋ’ ಸ್ನೇಹಿತ.
ಇಬ್ಬರು ಚಿತ್ರರಂಗದಲ್ಲಿ ಕಷ್ಟಪಟ್ಟು ಗಟ್ಟಿ ನೆಲೆ ಕಂಡುಕೊಂಡವರು. ಅಂದು ಆರಂಭವಾದ ಅವರಿಬ್ಬರ ನಿಷ್ಕಲ್ಮಶ ಸ್ನೇಹ ಹಾಗೆ ಮುಂದುವರೆದುಕೊಂಡು ಬಂದಿದೆ. ಅಂಬರೀಷ್ ಚೆನ್ನೈಗೆ ಹೋದರೆ ರಜನಿಕಾಂತ್ ಅವರನ್ನು ಭೇಟಿಯಾಗದೇ ಬರುತ್ತಿರಲಿಲ್ಲ. ಅದರಂತೆ ರಜನಿಕಾಂತ್ ಕೂಡಾ ಬೆಂಗಳೂರಿಗೆ ಬಂದರೆ ಅಂಬಿ ಮನೆಗೆ ಹೋಗಿ ಮಾತನಾಡಿ, ಊಟ ಮಾಡದೇ ಹೋಗುತ್ತಿರಲಿಲ್ಲ.
ಆದರೆ, ಇತ್ತೀಚೆಗೆ ಒಂದು ಬಾರಿ ರಜನಿಕಾಂತ್ ಅವರು ಬೆಂಗಳೂರಿಗೆ ಬಂದು ಹೋದರೂ ತುರ್ತು ಕಾರಣಗಳಿಂದಾಗಿ ಅಂಬಿ ಮನೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದು ಅಂಬಿಗೆ ಗೊತ್ತಾಗಿ, ತಮ್ಮದೇ ಶೈಲಿಯಲ್ಲಿ ರಜನಿಗೆ ಗದರಿದ್ದಾರೆ. “ಬಡ್ಡಿ ಮಗನೇ ಇನ್ನೊಂದ್ಸಾರಿ ಮನೆಗೆ ಬಾರದೇ ಹಾಗೇ ಹೋದರೆ ಸಾಯಿಸಿ ಬಿಡ್ತೀನಿ’ ಎಂದು. ಈ ವಿಚಾರವನ್ನು ಸ್ವತಃ ರಜನಿಕಾಂತ್ ಹೇಳಿಕೊಂಡು ಭಾವುಕರಾದರು.
ಅಂಬಿಯ ಅಂತಿಮ ದರ್ಶನಕ್ಕಾಗಿ ಚೆನ್ನೈನಿಂದ ಬಂದ ರಜನಿ, ಗೆಳೆಯನನ್ನು ನೋಡಿ ಕಣ್ಣೀರು ಹಾಕಿದರು. ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆಯುತ್ತಾ ಸುಮಲತಾ ಅವರಿಗೆ ಸಾಂತ್ವನ ಹೇಳಿದರು. ಆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅಂಬರೀಷ್, “ಒಬ್ಬ ಅದ್ಭುತ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಆತ ರಾಜನಂತೆ ಬದುಕಿದ. ಆತನ ತರಹ ಬದುಕಲು ಯಾರಿಂದಲೂ ಸಾಧ್ಯವಿಲ್ಲ. ಸಾಮಾನ್ಯವಾಗಿ ನಾನು ಬೆಂಗಳೂರಿಗೆ ಬಂದರೆ ಅಂಬಿ ಮನೆಗೆ ಹೋಗಿ ಹೋಗುತ್ತಿದ್ದೆ.
ಆದರೆ ಕಳೆದ ಬಾರಿ ಭೇಟಿ ಕೊಟ್ಟಾಗ ಆತನ ಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದರಿಂದ ಸಿಟ್ಟಾದ ಆತ ಕರೆ ಮಾಡಿ, “ಬಡ್ಡಿ ಮಗನೇ ಇನ್ನೊಂದ್ಸಾರಿ ಮನೆಗೆ ಬಾರದೇ ಹಾಗೇ ಹೋದರೆ ಸಾಯಿಸಿ ಬಿಡ್ತೀನಿ’ ಎಂದಿದ್ದ. ಆ ತರಹದ ಸ್ನೇಹ ನಮ್ಮಿಬ್ಬರ ಮಧ್ಯೆ ಇತ್ತು. ಚಿತ್ರರಂಗಕ್ಕೆ ಅಂಬರೀಷ್‌ನಂತಹ ನಟ ಬರಬಹುದು, ಆದರೆ ಆತನಂತಹ ಮನುಷ್ಯ ಬರಲು ಸಾಧ್ಯವಿಲ್ಲ’ ಎಂದು ತಮ್ಮಿಬ್ಬರ ಗೆಳೆತನವನ್ನು ಮೆಲುಕು ಹಾಕಿದರು ರಜನಿಕಾಂತ್.
ಈ ವಿಭಾಗದಿಂದ ಇನ್ನಷ್ಟು
-
"ಮೊದಲು "ರಣಧೀರ' ಮಾಡಿದ್ದರೆ ಮೊದಲ ಚಿತ್ರದಲ್ಲೇ ನಾನು ಸ್ಟಾರ್ ಆಗಿಬಿಡುತ್ತಿದ್ದೆ...' ತಮ್ಮ ಎರಡು ಚಿತ್ರಗಳ ಸೋಲು ಹಾಗೂ ಮುಂದಿನ ಚಿತ್ರಗಳ ಮೇಲಿರುವ ವಿಶ್ವಾಸ...
-
ಯೋಗರಾಜ್ ಭಟ್ ಅವರ "ಪಂಚತಂತ್ರ' ಚಿತ್ರದ ಬಳಿಕ ವಿಹಾನ್ ಗೌಡ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ...
-
ಈ ಹಿಂದೆ "ಕರಿಯಪ್ಪ'ನಾಗಿ ಗಮನಸೆಳೆದಿದ್ದ ಹಾಸ್ಯ ನಟ ತಬಲನಾಣಿ ಈಗ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಕೆಮಿಸ್ಟ್ರಿ ಆಫ್ ಕರಿಯಪ್ಪ' ಬಳಿಕ...
-
ಶೀತಲ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಕಿರುಚಿತ್ರ "ಕಾರು' ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪುಟ್ಟ ವಯಸ್ಸಿನಲ್ಲಿ ಎಲ್ಲರನ್ನೂ ಒಂದೊಂದು ವಿಚಾರಗಳು...
-
ದರ್ಶನ್ ನಾಯಕರಾಗಿರುವ "ಒಡೆಯ' ಚಿತ್ರ ಈ ವಾರ (ಡಿ.12) ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಸನಾ ತಿಮ್ಮಯ್ಯ ಎಂಬ ಕೊಡಗಿನ ಬೆಡಗಿ ಚಿತ್ರರಂಗಕ್ಕೆ ಲಾಂಚ್ ಆಗುತ್ತಿದ್ದಾರೆ....
ಹೊಸ ಸೇರ್ಪಡೆ
-
ದಾವಣಗೆರೆ: ಅಂಗವಿಕಲರು ಉತ್ತಮ ಸಾಧನೆಯ ಮೂಲಕ ಯಾರಿಗೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್...
-
ಬೆಂಗಳೂರು: ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಭಾರಿ ಚರ್ಚೆಯ ನಂತರ ಮಧ್ಯರಾತ್ರಿ...
-
ದಾವಣಗೆರೆ: ರೈತರ ಕುಂದುಕೊರತೆ ಚರ್ಚಿಸಲು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದ್ದಾರೆ. ಸೋಮವಾರ...
-
ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಯಾಕೆ ಹಿನ್ನಡೆ ಆಗಿದೆಯೆಂದು ಸಂಪೂರ್ಣವಾಗಿ ಎಲ್ಲರೊಂದಿಗೆ ಹೇಳುತ್ತೇನೆ ಎಂದು ಕಾಂಗ್ರೆಸ್ ನಾಯಕ...
-
ನ್ಯೂಯಾರ್ಕ್: ಅಮೆರಿಕದ ಮಾಜಿ ಬೇಸ್ ಬಾಲ್ ಆಟಗಾರ, ಜಗತ್ತಿನಾದ್ಯಂತ “ಐಸ್ ಬಕೆಟ್ ಚಾಲೆಂಜ್” ಮೂಲಕ ದೇಣಿಗೆ ಸಂಗ್ರಹಿಸಲು ಸ್ಫೂರ್ತಿಯಾಗಿದ್ದ ಪೀಟ್ ಫ್ರೇಟ್ಸ್(34ವರ್ಷ)...