Udayavni Special

ರೇಸ್‌ ಕೋರ್ಸ್‌ನಲ್ಲಿವೆ ಅಂಬಿಯವರ ಕುದುರೆಗಳು


Team Udayavani, Nov 25, 2018, 11:40 AM IST

racecourse.jpg

ರೇಸ್‌ ಪ್ರಿಯರಾಗಿದ್ದ ಅಂಬರೀಶ್‌, ಬೆಂಗಳೂರು ಟರ್ಫ್ ಕ್ಲಬ್‌ನ ಸದಸ್ಯರೂ ಹೌದು. ಹತ್ತಾರು ವರ್ಷಗಳ ಹಿಂದೆಯೇ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಎರಡು ಕುದುರೆಗಳನ್ನು ಅವರು ಸಾಕಿದ್ದರು. ಪ್ರತಿ ವರ್ಷ ನಡೆಯುವ ಬೆಂಗಳೂರು ಡರ್ಬಿ ರೇಸ್‌ಗೆ ತಪ್ಪದೇ ಹಾಜರಾಗುತ್ತಿದ್ದರು. ತಮ್ಮ ಕುದುರೆಗಳ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ಅವರು ಅವನ್ನೂ ತಮ್ಮ ಮನೆಯ ಸದಸ್ಯರಂತೆ ಪರಿಗಣಿಸುತ್ತಿದ್ದರು.

ಅವು ನೆನಪಾದಾಗ, ಮಧ್ಯರಾತ್ರಿಯಾದರೂ ಸರಿ ಹೋಗಿ ನೋಡಿಕೊಂಡು ಬರುತ್ತಿದ್ದರು. ಅವರ ಮನೆಗೆ ಬರುವ ಆಪ್ತ ಗೆಳೆಯರನ್ನು ಬನ್ನಿ ನಮ್ಮ ಕುದುರೆಗಳನ್ನು ನೋಡಿ ಎಂದು ಕರೆದುಕೊಂಡು ಹೋಗಿ ಅಭಿಮಾನದಿಂದ ತೋರಿಸುತ್ತಿದ್ದರು. ಒಂದೊಮ್ಮೆ ತಮ್ಮ ಆಪ್ತ ಸ್ನೇಹಿತರೊಬ್ಬರನ್ನು ರಾತ್ರಿ ಊಟಕ್ಕೆ ಮನೆಗೆ ಆಹ್ವಾನಿಸಿದ್ದ ಅಂಬಿ,

ಅವರು ಇನ್ನೇನು ಹೊರಡುವಾಗ, “ನಮ್ಮ ಕುದುರೆಗಳನ್ನು ಪರಿಚಯಿಸುವುದನ್ನು ಮರೆತಿದ್ದೆ. ಬನ್ನಿ ಅವುಗಳನ್ನು ಮಾತನಾಡಿಸಿಕೊಂಡು ಬರೋಣ ಪ್ಲೀಸ್‌” ಎಂದು ಅವರನ್ನು ತಮ್ಮ ಕಾರಿನಲ್ಲೇ ರೇಸ್‌ಕೋರ್ಸ್‌ಗೆ ಕರೆದೊಯ್ದು ಕುದುರೆಗಳನ್ನು ತೋರಿಸಿ ಅವುಗಳ ಪರಿಚಯ ಮಾಡಿಸಿ ಆನಂತರ ಅವರನ್ನು ಮನೆಗೆ ಕಳುಹಿಸಿದ್ದರಂತೆ!

ಅಣ್ಣ ಸತ್ತ ವರ್ಷಕ್ಕೆ ಅಂಬಿ ಸಾವು: ನಟ, ಮಾಜಿ ಸಚಿವ ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ ಹಿರಿಯ ಸಹೋದರ ಡಾ.ಹರೀಶ್‌ (69) ಸಾವನ್ನಪ್ಪಿ ನಿನ್ನೆಗೆ ಒಂದು ವರ್ಷ. ಅಣ್ಣ ಸತ್ತ ಒಂದು ವರ್ಷಕ್ಕೆ ಅಂಬರೀಶ್‌ ವಿಧಿವಶರಾಗಿದ್ದಾರೆ. ಡಾ.ಹರೀಶ್‌ ಅವರು 24 ನವೆಂಬರ್‌ 2017ರಂದು ಮೃತಪಟ್ಟಿದ್ದರು.

1948ರಲ್ಲಿ ಜನಿಸಿದ್ದ ಡಾ.ಹರೀಶ್‌ 35 ವರ್ಷಗಳಿಂದ ದೊಡ್ಡರಸಿನಕೆರೆ ಸಮೀಪದ ಕೆ.ಎಂ.ದೊಡ್ಡಿಯಲ್ಲಿ ತಮ್ಮದೇ ಸ್ವಂತ ಕ್ಲಿನಿಕ್‌ ಹೊಂದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು 2017ರ ನವೆಂಬರ್‌ 24ರಂದು ಮೈಸೂರಿನ ನಿವಾಸದಲ್ಲಿ  ಮೃತಪಟ್ಟಿದ್ದರು.

ಮಂಡ್ಯ ಮಣ್ಣಲ್ಲೇ ಅಂತ್ಯಕ್ರಿಯೆಗೆ ಅಭಿಮಾನಿಗಳ ಆಗ್ರಹ: ಅಂಬರೀಶ್‌ ಅವರ ಅಂತ್ಯಕ್ರಿಯೆಯನ್ನು ಮಂಡ್ಯದ ಮಣ್ಣಿನಲ್ಲಿಯೇ ಮಾಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ರಾತ್ರಿಯಿಂದಲೇ ಅಭಿಯಾನ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಅಂಬಿ ಕುಟುಂಬದವರಿಗೆ ತಲುಪುವವರೆಗೂ ಈ ಸಂದೇಶವನ್ನು ರವಾನೆ ಮಾಡುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ.

ಮಂಡ್ಯವನ್ನು ಬಹುವಾಗಿ ಪ್ರೀತಿಸುತ್ತಿದ್ದ ಅಂಬರೀಷ್‌ ನಾನು ಮಂಡ್ಯದವನು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.  ಹೆಮ್ಮೆ , ಅಭಿಮಾನದ ಪ್ರತೀಕವಾಗಿ ಅಂಬರೀಶ್‌ ಈ ನೆಲದಲ್ಲಿಯೇ ಇರಬೇಕು ಎಂಬುದು ಅಭಿಮಾನಿಗಳ ಪ್ರೀತಿಯ ಒತ್ತಾಯವಾಗಿದೆ. ಆದ್ದರಿಂದ ಅಂಬಿಯ ಅಂತ್ಯಸಂಸ್ಕಾರ ಮಂಡ್ಯದ ನೆಲದಲ್ಲಿಯೇ ಆಗಬೇಕೆಂಬುದು ಅಭಿಮಾನಿಗಳ ಆಗ್ರಹ. 

ಟಾಪ್ ನ್ಯೂಸ್

daily-horoscope

ಈ ರಾಶಿಯವರಿಗೆ ಇಂದು ನಿರೀಕ್ಷೆಗೂ ಮೀರಿದ ಧನಾರ್ಜನೆ, ದಂಪತಿಗಳಲ್ಲಿ ಅನುರಾಗ ವೃದ್ಧಿ.

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ದೇಗುಲಗಳ ಆಡಳಿತ ಭಕ್ತರ ಬಳಿಯೇ ಇರಲಿ…

ದೇಗುಲಗಳ ಆಡಳಿತ ಭಕ್ತರ ಬಳಿಯೇ ಇರಲಿ…

ರಕ್ಷಣೆಗೆ 7 ಸಂಸ್ಥೆ; 200 ವರ್ಷಗಳ ಹಳೆಯ ಒಎಫ್ ಬಿ ವಿಸರ್ಜನೆ

ರಕ್ಷಣೆಗೆ 7 ಸಂಸ್ಥೆ; 200 ವರ್ಷಗಳ ಹಳೆಯ ಒಎಫ್ ಬಿ ವಿಸರ್ಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hftytyt

ದಚ್ಚು ಜೊತೆ “ಕ್ರಾಂತಿ”ಗೆ ಸಜ್ಜಾದ ಡಿಂಪಲ್ ಕ್ವೀನ್ ರಚಿತಾ ರಾಮ್

xdfgdgr

ಸಿನಿ ರಸಿಕರ ಗಮನ ಸೆಳೆದ ‘ಗರುಡ ಗಮನ, ವೃಷಭ ವಾಹನ’ ಟ್ರೈಲರ್

gdfgdr

ಸಾವಿನಲ್ಲೂ ಸಾರ್ಥಕತೆ : ನೇತ್ರದಾನ ಮಾಡಿದ ದಿ.ನಟ ಗೋವಿಂದರಾವ್

ಅಲ್ಲಮ ಸಿನಿಮಾ

ಚಿತ್ರೀಕರಣ ಪೂರೈಸಿದ “ಶ್ರೀ ಅಲ್ಲಮಪ್ರಭು’

ಕಡಲ ತೀರದ ಭಾರ್ಗವ’ ಟೀಸರ್‌

ಅ. 18ಕ್ಕೆ “ಕಡಲ ತೀರದ ಭಾರ್ಗವ’ ಟೀಸರ್‌

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

daily-horoscope

ಈ ರಾಶಿಯವರಿಗೆ ಇಂದು ನಿರೀಕ್ಷೆಗೂ ಮೀರಿದ ಧನಾರ್ಜನೆ, ದಂಪತಿಗಳಲ್ಲಿ ಅನುರಾಗ ವೃದ್ಧಿ.

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.