ಅಮೆಜಾನ್ ಅಲೆಕ್ಸಾಗೆ ಅಮಿತಾಭ್ ಧ್ವನಿ!
Team Udayavani, Sep 15, 2020, 12:27 AM IST
ಮುಂಬಯಿ: ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಅಮೆಜಾನ್ನ ಅಲೆಕ್ಸಾಗೆ ಇನ್ಮುಂದೆ ಧ್ವನಿಯಾಗಲಿ ದ್ದಾರೆ. ಈ ರೀತಿ ಅಲೆಕ್ಸಾದ ಧ್ವನಿಯಾಗಲಿರುವ ಭಾರತದ ಮೊದಲ ಸೆಲೆಬ್ರಿಟಿಯಾಗಲಿದ್ದಾರೆ 77 ವರ್ಷದ ಈ ಹಿರಿಯ ನಟ.
ಅಮಿತಾಭ್ ಬಚ್ಚನ್ ಕೇವಲ ತಮ್ಮ ನಟನೆಯಿಂದಷ್ಟೇ ಅಲ್ಲದೇ, ತಮ್ಮ ಅದ್ಭುತ ಧ್ವನಿಯಿಂದಲೂ ಗುರುತಿಸಿ ಕೊಂಡವರು. ಅಮಿತಾಭ್ರ ಧ್ವನಿ ಕೇಳಬೇಕೆಂದರೆ ಬಳಕೆದಾರರು, “ಅಲೆಕ್ಸಾ, ಸೇ ಹಲೋ ಟು ಮಿಸ್ಟರ್ ಅಮಿತಾಭ್ ಬಚ್ಚನ್’ ಎಂದು ಹೇಳಿದರೆ ಸಾಕು, ಆಗ ಹೆಣ್ಣು ಧ್ವನಿಯ ಬದಲಾಗಿ ಅಮಿತಾಭ್ ಮಾತು ಕೇಳಿಸುತ್ತದೆ.
ಇನ್ಮುಂದೆ ಅಲೆಕ್ಸಾದಿಂದ ಯಾರಾದರೂ ಜೋಕು ಕೇಳಲು, ಹರಟೆ ಹೊಡೆಯಲು ಬಯಸಿದರೆ, ಬಚ್ಚನ್ರ ಧ್ವನಿ ಅವರಿಗೆ ಸಹಕರಿಸಲಿದೆ. ಆದರೆ ಅಲೆಕ್ಸಾ ರೂಪದಲ್ಲಿ ಅಮಿತಾಭ್ರ ಧ್ವನಿ ಕೇಳುವ ಅವಕಾಶ ಇರುವುದು ಭಾರತೀಯ ಬಳಕೆದಾರರಿಗೆ ಮಾತ್ರ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ.