ಅಮೂಲ್ಯ ಸಂಭ್ರಮ ಕಲರ್ಫುಲ್ ಆಗಿ ನಡೆಯಿತು ಐಸೂ ಮೆಹಂದಿ -ಸಂಗೀತ್
Team Udayavani, May 11, 2017, 5:29 PM IST
ಶುಕ್ರವಾರ ಹಸೆಮಣೆ ಏರಲಿರುವ ನಟಿ ಅಮೂಲ್ಯ ಅವರ ಮೆಹಂದಿ ಶಾಸ್ತ್ರ ಹಾಗೂ ಸಂಗೀತ್ ಕಾರ್ಯಕ್ರಮ ನಟ ಗಣೇಶ್ ಅವರ ರಾಜರಾಜೇಶ್ವರಿ ನಗರದ “ಗಣಪ’ ನಿವಾಸದಲ್ಲಿ ಬುಧವಾರ ಅದ್ಧೂರಿಯಾಗಿ ಜರುಗಿದೆ. ಸುಂದರವಾಗಿ ಸಿಂಗರಿಸಿದ ಗಣೇಶ್ ಅವರ ಮನೆಯಲ್ಲಿ ಕಲರ್ಫುಲ್ ಆಗಿ ನಡೆದ ಅಮೂಲ್ಯ ಮೆಹಂದಿ ಹಾಗೂ ಸಂಗೀತ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಾಗೂ ಅಮೂಲ್ಯ ಆಪ್ತರು ಪಾಲ್ಗೊಂಡಿದ್ದರು. ಅಮೂಲ್ಯಗೆ ಉತ್ತರ ಭಾರತ ಶೈಲಿಯ ಮೆಹಂದಿ ಡಿಸೈನ್ ಮಾಡಲಾಗಿದ್ದು, ಪಿಂಕ್ ಮತ್ತು ವೈಟ್ ಥೀಮ್ನಲ್ಲಿ ಕಾರ್ಯಕ್ರಮ ನಡೆಯಿತು.
ಸಂಗೀತ್ ಕಾರ್ಯಕ್ರಮದಲ್ಲಿ ಪಂಜಾಬಿ ಡೋಲು ಹಾಗೂ ಗುಜರಾತಿ ತಾಂಡ್ಯ ಶೈಲಿಯ ಕೋಲಾಟ ಕುಡಾ ಆಯೋಜಿಸಿ, ಕಾರ್ಯಕ್ರಮದ ರಂಗು ಹೆಚ್ಚಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪುನೀತ್ ದಂಪತಿ, ಪ್ರೇಮ್, ಶರಣ್, ಸುಧಾರಾಣಿ, ನಿರ್ದೇಶಕ ಸಂತೋಷ್ ಆನಂದರಾಮ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ಪಾಲ್ಗೊಂಡಿದ್ದರು.
ಅಮೂಲ್ಯ ಕೂಡಾ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಸಂಗೀತ್ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ತಮ್ಮ ಮನೆಯಲ್ಲಿ ಆಯೋಜನೆಗೊಂಡಿದ್ದ ಅಮೂಲ್ಯ ಮೆಹಂದಿ ಹಾಗೂ ಸಂಗೀತ್ ಕಾರ್ಯಕ್ರಮದಲ್ಲಿ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಕೂಡಾ ಖುಷಿ ಖುಷಿಯಾಗಿ ಓಡಾಡಿಕೊಂಡಿದ್ದರು. ಅತ್ತ ಕಡೆ ಅಮೂಲ್ಯ ಅವರನ್ನು ವಿವಾಹವಾಗುತ್ತಿರುವ ಜಗದೀಶ್ ಅವರ ನಿವಾಸದಲ್ಲೂ ಮೆಹಂದಿ ಹಾಗೂ ಸಂಗೀತ್
ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇಂದು ಅಮೂಲ್ಯ ಮನೆಯಲ್ಲಿ ಚಪ್ಪರ ಶಾಸ್ತ್ರ ನಡೆಯಲಿದ್ದು, ಸಂಜೆ ಹೊತ್ತಿಗೆ ಆದಿ ಚುಂಚನಗಿರಿಗೆ ಅಮೂಲ್ಯ ಹಾಗೂ ಕುಟುಂಬ ತೆರಳಲಿದೆ. ಮೇ.12 ರಂದು ಆದಿಚುಂಚನಗಿರಿಯಲ್ಲಿ ಅಮೂಲ್ಯ ಮತ್ತು ಜಗದೀಶ್ ಮದುವೆ ನಡೆಯಲಿದ್ದು, ಮೇ.14 ರಂದು ಸಂತೋಷ ಕೂಟ ಹಮ್ಮಿಕೊಳ್ಳಲಾಗಿದೆ. ಅದಾದ ಬಳಿಕ ಮೇ.16 ರಂದು ಅರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು