ಅಮೆರಿಕಾ ಕನ್ನಡಿಗರ ಬಗ್ಗೆ ಅನಂತ್ನಾಗ್ ಮೆಚ್ಚುಗೆ
Team Udayavani, Dec 4, 2018, 11:21 AM IST
ಅನಂತ್ನಾಗ್ ಎಲ್ಲೇ ಹೋದರೂ ಅಲ್ಲಿನ ಅಂಶಗಳನ್ನು ಗಮನಿಸುತ್ತಾರೆ. ತಮಗೆ ಇಷ್ಟವಾಗಿದ್ದನ್ನು ನೇರವಾಗಿ ಹೇಳಿ, ಪ್ರೋತ್ಸಾಹಿಸುತ್ತಾರೆ. ಇತ್ತೀಚೆಗೆ ಅನಂತ್ನಾಗ್ ಅವರು ಅಮೆರಿಕಾಕ್ಕೆ ಹೋಗಿದ್ದಾಗ, ಅಲ್ಲಿ ಕನ್ನಡಿಗರ ಶಿಸ್ತನ್ನು ಕಂಡು ಖುಷಿಯಾಗಿದ್ದಾರೆ. ಜೊತೆಗೆ ಅವರು ವೀಕೆಂಡ್ ಅನ್ನು ಬಳಸಿಕೊಳ್ಳುವ ರೀತಿ ಕೂಡಾ ಅವರಿಗೆ ಇಷ್ಟವಾಗಿದೆ.
ಇತ್ತೀಚೆಗೆ ನಡೆದ “ವೀಕೆಂಡ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಅನಂತ್ನಾಗ್, ಅಮೆರಿಕಾ ಕನ್ನಡಿಗರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಸುಮಾರು ಎರಡು ತಿಂಗಳ ಹಿಂದೆ ಅಮೆರಿಕಾಗೆ ಹೋಗಿದ್ದೆ. ಅಲ್ಲಿಯ ಭಾರತೀಯ, ಕನ್ನಡಿಗ ಯುವಕರಲ್ಲಿ ಇದ್ದ ಶಿಸ್ತು ಸಂಯಮವನ್ನು ಕಂಡು ನಾನು ಚಕಿತಗೊಂಡಿದ್ದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೆರಿಕದಲ್ಲಿ ಬಿಡುಗಡೆ ಆಗುವಾಗ ಅಲ್ಲಿಯೇ ಇದ್ದೆ.
ಅಲ್ಲಿನ 25-30 ರ ಆಸುಪಾಸಿನ ಯುವಕರ ಉತ್ಸಾಹ, ಜೀವನ ಶೈಲಿ, ಆಸಕ್ತಿಯನ್ನು ಅವರು ಬಹಳ ಮೆಚ್ಚುಗೆಯಾಗುವಂತಿದೆ. ಇಲ್ಲಿನ ಯುವಕರಿಗಿಂತ ಅಲ್ಲಿನ ಕನ್ನಡದ ಯುವಕರು, ಅಷ್ಟೇ ಶಿಸ್ತಿನಿಂದ ವೀಕ್ ಎಂಡ್ ದಿನಗಳನ್ನು ಬಹಳ ಸದ್ವಿನಿಯೋಗ ಪಡಿಸಿಕೊಳ್ಳುತ್ತಾರೆ. ಅಂತಹ ಗುಣವನ್ನು ಅಮೆರಿಕದ ಕನ್ನಡಿಗರಲ್ಲಿ ಕಂಡಿದ್ದೇನೆ’ ಎನ್ನುತ್ತಾರೆ ಅನಂತ ನಾಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ