ಕನ್ನಡದ ಆ್ಯಂಗ್ರಿ ಯಂಗ್‌ ಮ್ಯಾನ್‌

Team Udayavani, Nov 25, 2018, 11:40 AM IST

kannada-angry.jpg

ಬಹುಶಃ ಅಂಬರೀಶ್‌ ಮೊದಲ ಬಾರಿಗೆ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದು “ಅಂತ’ ಚಿತ್ರದಲ್ಲಿ. ಆ ಚಿತ್ರದಲ್ಲಿ ಅವರು ಸ್ಮಗ್ಲರ್‌ಗಳ ವಿರುದ್ಧ ಹೋರಾಡುವ ಶಿಷ್ಟ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದರು. ಅವರಿಗೆ ಇನ್ನೂ ದೊಡ್ಡ ಹೆಸರು ತಂದುಕೊಟ್ಟಿದ್ದು “ಚಕ್ರವ್ಯೂಹ’. ಈ ಚಿತ್ರದಲ್ಲಿ ಇಡೀ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಹಾಕುವ ಪೊಲೀಸ್‌ ಅಧಿಕಾರಿಯಾಗಿ ಅಭಿನಯಿಸಿದ್ದರು.

ಆ ನಂತರ ಅಂಬರೀಶ್‌ ಎಂದೂ ಹಿಂದಿರುಗಿ ನೋಡುವಂಥಾ ಪ್ರಮೇಯವೇ ಬರಲಿಲ್ಲ. ಅದರ ನಂತರ ಅಂಬರೀಶ್‌ ಸಾಲು ಸಾಲು ಚಿತ್ರಗಳಲ್ಲಿ ಅದೇ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಕಾಣಿಸಿಕೊಂಡರು. “ಗಜೇಂದ್ರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಇದೇ ತರಹದ ಪಾತ್ರಗಳಲ್ಲಿ ಮುಂದುವರೆದರು. ಆ್ಯಂಗ್ರಿ ಯಂಗ್‌ ಮ್ಯಾನ್‌ ಜೊತೆಗೆ ಅಂಬರೀಶ್‌ ಇನ್ನೂ ಹಲವು ಪಾತ್ರಗಳಲ್ಲಿ ಅಭಿನಯಿಸಿದರು. ಆದರೆ, ಜನ ಅವರನ್ನ ಗುರುತಿಸಿದ್ದು ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿಯೇ. ಅದಕ್ಕೆ ಕಾರಣವೂ ಇದೆ.

ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಲೀ, ಕಳ್ಳನಾಗಲೀ, ಸುಳ್ಳನಾಗಲೀ, ಪ್ರೇಮಿಯಾಗಲೀ, ಡಾಕ್ಟರ್‌ ಆಗಲೀ- ಎಲ್ಲೆಲ್ಲೂ ಅವರ ಮುಖದೊಳಗೊಬ್ಬ ಗಡಸು ಗಂಡಸು, ಎದೆಯಲ್ಲಿ ಕೆಚ್ಚು, ಕಣ್ಣಲ್ಲಿ ಮಚ್ಚು. ಅಂಬರೀಶ್‌ ಎಂದರೆ ಅಭಿಮಾನಿಗಳ ಪಾಲಿಗೆ ಹಾಗೇ ಇರಬೇಕು. ಮಧ್ಯೆಮಧ್ಯೆ ಅಂಬಿ “ಮೇಘ ಬಂತು ಮೇಘ’ ಅಂತ ಹಾಡಿದರು, “ಸಪ್ತಪದಿ’, “ಹೃದಯ ಹಾಡಿತು’, “ಮಿಡಿವ ಹೃದಯಗಳು’ಗಾಗಿ ತುಂಬ ಮೃದು ಪ್ರೇಮಿಯಾದರು,

“ಒಲವಿನ ಉಡುಗೊರೆ’ ತರುವ ಹತಾಶ ಪ್ರಿಯಕರನಾದರು, ಚಳಿ ಚಳಿ ಎನ್ನುತ್ತಾ ಅಂಬಿಕಾನನ್ನು ತಬ್ಬುವ ರಸಿಕನಾದರು, “ನಮ್ಮೂರ ಹಮ್ಮಿರ’ನಾದರು, “ನ್ಯೂಡೆಲ್ಲಿ’ಯ ಪತ್ರಿಕಾ ಸಂಪಾದಕರಾದರು, ಮಠಗಳ ಬಣ್ಣ ಬಯಲು ಮಾಡುವ “ಗುರು ಜಗದ್ಗುರು’ವಿನಲ್ಲಿ ಗುರುವಿಗೆ ಜಗದ್ಗರುವಾದರು. ದುಡಿದ ಹಣದಲ್ಲಿ ಒಂದಿಷ್ಟು ಉಳಿಸಿ ಥಿಯೇಟರ್‌ಗೆ ಬಂದು ಕುಳಿತರೆ ಹಣೆ ಮೇಲಿನ ಕೂದಲನ್ನು ಎಡಗೈಲಿ ಸರಿಸಿ ಬೆವರುತ್ತಾ,

ಖಳರನ್ನು ಕಣ್ಣಲ್ಲೇ ಬೆದರಿಸುತ್ತಾ ಫೈಟು ಮಾಡುವ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಅಂಬಿ ಕಂಡರು. ದೊಡ್ಡ ಕಣ್ಗಳು, ತಮ್ಮದೇ ವಿಶಿಷ್ಟ ಹೇರ್‌ಸ್ಟೈಲ್‌, ಎತ್ತರದ ವ್ಯಕ್ತಿತ್ವ, ಗಡಸು ದನಿಗಳು ಅಂಬರೀಶ್‌ ಅವರನ್ನು ನೆಚ್ಚಿನ ಹೀರೋ ಮಾಡಿದವು. ಅಂಬರೀಶ್‌ ನಂತರ ಹಲವು ನಾಯಕರು ಆ್ಯಂಗ್ರಿ ಯಂಗ್‌ ಮ್ಯಾನ್‌ಗಳಾಗಿ ವಿಜೃಂಭಿಸಿದರು. ಆದರೆ, ಕನ್ನಡದ ಮೊದಲ ಆ್ಯಂಗ್ರಿ ಯಂಗ್‌ ಮ್ಯಾನ್‌ ಎಂದರೆ ಅದು ಅಂಬರೀಶ್‌ ಮಾತ್ರ. 

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.