ಅಂಜನ್ ಚಿತ್ರದ ಟ್ರೇಲರ್ ಬಂತು
Team Udayavani, Aug 20, 2021, 5:25 PM IST
“ಅಂಜನ್’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆರ್.ಸಾಗರ್ ಈ ಚಿತ್ರದ
ನಿರ್ದೇಶಕರು. ಚಿತ್ರದ ಬಗ್ಗೆ ಮಾತನಾಡುವ ಅವರು, “ಚಿತ್ರದಲ್ಲಿ ಸಾಕಷ್ಟು ಅಂಶಗಳನ್ನು ಹೇಳಿದ್ದೇವೆ.
ಅಂಗವಿಕಲ, ಅಣ್ಣ ತಂಗಿ ಬಾಂಧವ್ಯ ಮತ್ತು ರೌಡಿಗಳಾದವರ ಮನಸ್ಥಿತಿ, ಮನಸ್ಥಿತಿ ಹೇಗಿರುತ್ತದೆ. ಮನೆಯಲ್ಲಿ ತಂಗಿಯ ಮದುವೆ ಬಂದಾಗ, ಇಂತಹ ಪರಿಸ್ಥಿತಿಯಲ್ಲಿ ಅಣ್ಣನಾದವನು ಏನು ಮಾಡುತ್ತಾನೆ ಎಂಬ ವಿಷಯಗಳು ಇರಲಿದೆ’ ಎಂದರು. ಚಿತ್ರದಲ್ಲಿ ಅಂಜನ್ ನಾಯಕರಾಗಿ ನಟಿಸಿದ್ದಾರೆ. ನಟ ದರ್ಶನ್ ಅವರ ಜಿಮ್ ತರಬೇತುದಾರನಾಗಿದ್ದ ಅಂಜನ್ ಈಗ “ಅಂಜನ್’ ಚಿತ್ರದ ಮೂಲಕ ಹೀರೋ ಆಗಿದ್ದಾರೆ.
ಇದನ್ನೂ ಓದಿ:500 ಕೋಟಿ ಬಜೆಟ್ನಲ್ಲಿ ಸಿನಿಮಾ; ಉದ್ಯಮಿಯೊಬ್ಬರ ಡ್ರೀಮ್ ಪ್ರಾಜೆಕ್ಟ್
ಚಿತ್ರದಲ್ಲಿ ತಂಗಿಯಾಗಿ ಮಡಿಕೇರಿ ಮುತ್ತಮ್ಮ, ತಾಯಿ ಪಾತ್ರದಲ್ಲಿ ಮಂಜುಳ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳು, ಐದು ಸಾಹಸಗಳು ಇದೆ. ಬೆಂಗಳೂರು, ಶಿವಮೊಗ್ಗ, ಶಂಕರಘಟ್ಟ, ಹೊನ್ನಾವರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಬಗ್ಗೆ ಮಾತನಾಡುವ ಪ್ರದೀಪ್ ಸೋನ್ಸ್, ಚಿತ್ರದಲ್ಲಿ ನಮ್ಮ ನಾಯಕ ಜಬರ್ದಸ್ತ್ ಆಗಿ ನಟಿಸಿದ್ದಾರೆ. ಹಿಂದೆ “ಪ್ರತಿಬಿಂಬ’ ಚಿತ್ರ ನಿರ್ಮಾಣ ಮಾಡಿದ್ದೆ. ಎಂಇ ಮಾಡಿರುವ ನನಗೆ ಚಿತ್ರರಂಗ ಏನಂತ ತಿಳಿದಿರಲಿಲ್ಲ. ನಿರ್ದೇಶಕರ ಸಹವಾಸದಿಂದ ಇಲ್ಲಿಗೆ ಬರಬೇಕಾಯಿತು. ಡಾನ್ ಆಗಿ ಬಣ್ಣ ಹಚ್ಚಿದ್ದೇನೆ ಎಂದರು.