‘ಅಂಜನ್’ ಟ್ರೇಲರ್ ಬಂತು
Team Udayavani, Mar 9, 2022, 4:05 PM IST
ಹೊಸಬರ “ಅಂಜನ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಸಚಿವ ಡಾ.ಸಿ.ಅಶ್ವಥ್, ಶಾಸಕ ರವಿಸುಬ್ರಮಣ್ಯಂ ಚಿತ್ರದ ಟ್ರೇಲರ ರಿಲೀಸ್ ಮಾಡಿ, ಶುಭಕೋರಿದರು.
ಚಿತ್ರದಲ್ಲಿ ಅಂಜನ್ ನಾಯಕರಾಗಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಪ್ರಾರಂಭದಲ್ಲಿ ಹಳ್ಳಿ, ನಂತರ ಸಿಟಿಗೆ ಕತೆಯು ತೆಗೆದುಕೊಂಡು ಹೋಗುತ್ತದೆ. ಅಂಗವಿಕಲ, ಅಣ್ಣ ತಂಗಿ ಬಾಂದವ್ಯ ಮತ್ತು ರೌಡಿಗಳಾದವರ ಮನಸ್ಥಿತಿ, ಮನೆಸ್ಥಿತಿ ಹೇಗಿರುತ್ತದೆ. ಮನೆಯಲ್ಲಿ ತಂಗಿಯ ಮದುವೆ ಬಂದಾಗ, ಇಂತಹ ಪರಿಸ್ಥಿತಿಯಲ್ಲಿ ಅಣ್ಣನಾದವನು ಏನು ಮಾಡುತ್ತಾನೆ ಎಂಬ ವಿಷಯಗಳು ಇರಲಿದೆ. ತಂಗಿಯಾಗಿ ವಿಭೀಷ ತಾಯಿ ಪಾತ್ರದಲ್ಲಿ ಮಂಜುಳಮ್ಮ ನಟಿಸಿದ್ದಾರೆ. ಚಿತ್ರದಲ್ಲಿ ನಾನು ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.
ಇದನ್ನೂ ಓದಿ:ಇಂದಿರಾ ಗಾಂಧಿ, ನಿಜಲಿಂಗಪ್ಪರನ್ನು ಬಂಗಾರದಲ್ಲಿ ತೂಗಿದ್ದೇವೆ, ಆದರೆ… : ಕಾರಜೋಳ ವಿಷಾದ
ಆರ್.ಸಾಗರ್ ಈ ಚಿತ್ರದ ನಿರ್ದೇಶಕರು. ಅವರು ಹೇಳುವಂತೆ ಸಿನಿಮಾ ಮಾಸ್, ಸೆಂಟಿಮೆಂಟ್ ಸನ್ನಿವೇಶಗಳಿಂದ ಕೂಡಿದೆ. ನಾಲ್ಕು ಹಾಡುಗಳು, ಐದು ಸಾಹಸಗಳು ಇದೆ. ಬೆಂಗಳೂರು, ಶಿವಮೊಗ್ಗ, ಶಂಕರಘಟ್ಟ, ಹೊನ್ನಾವರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ.
ನಿರ್ಮಾಪಕ ಪ್ರದೀಪ್ ಸೋನ್ಸ್ ಮಾತನಾಡಿ, ದಿ ಗಟ್ಸ್ ಆಫ್ ಹ್ಯೂಮನ್ ಅಂತ ಅಡಿಬರಹದಲ್ಲಿ ಇರುವಂತೆ ನಮ್ಮ ನಾಯಕ ಜಬರ್ದಸ್ತ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾನು ಡಾನ್ ಆಗಿ ಬಣ್ಣ ಹಚ್ಚಿದ್ದೇನೆ. ಆದಷ್ಟು ಬೇಗನೆ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ