Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!
Team Udayavani, Sep 7, 2024, 10:00 PM IST
ಒಂದು ಹೊತ್ತಿನ ಅನ್ನಕ್ಕಾಗಿ ಎದುರು ನೋಡುವ ಜೀವಗಳು ಇವತ್ತೂ ನಮ್ಮ ಸಮಾಜದಲ್ಲಿ ಇವೆ. ಅನ್ನ ಸಿಕ್ಕರೆ ಅದು ಪರಮಾನಂದ. ಇಂತಹ ಅನ್ನದ ಮಹತ್ವವನ್ನು ಸಾರುವ ಚಿತ್ರ ಈ ವಾರ ತೆರೆಕಂಡಿರುವ “ಅನ್ನ’. ಇದೊಂದು ವಾಸ್ತವ ಸ್ಥಿತಿಯನ್ನು ಬಿಚ್ಚಿಡುತ್ತಾ ಸಾಗುವ ಭಾವನಾತ್ಮಕ ಚಿತ್ರ.
ಚಿತ್ರದ ಬಗ್ಗೆ ಹೇಳುವುದಾದರೆ ಇದು 80ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ. ಕೆಲವೊಂದು ಹಳ್ಳಿಗಾಡುಗಳಲ್ಲಿ ಹಬ್ಬದ ದಿನ ಮಾತ್ರ ಅನ್ನ ಮಾಡುತ್ತಾರೆ. ಈ ಕಥೆಯು ಇದರ ಸುತ್ತವೇ ಸಾಗುತ್ತದೆ.
ಅನ್ನ ಎಷ್ಟು ಮುಖ್ಯ , ಅದರ ಮಹತ್ವ ಏನು, ಎಂಬುದರ ಜೊತೆಗೆ ಹಳ್ಳಿಯ ಬಡಕುಟುಂಬದಲ್ಲಿ ಬೆಳೆದ ಹುಡುಗನೊಬ್ಬನ ಮೂರು ಹೊತ್ತು ಅನ್ನ ತಿನ್ನುವ ಕನಸು ಒಂದೆಡೆಯಾದರೆ ಜಾತ್ರೆಯಲ್ಲಿ ನಾಪತ್ತೆಯಾಗಿ ತದನಂತರ ಅವನು ಹುಡುಕಾಟದಲ್ಲಿ ಎದುರಾಗುವ ಒಂದಷ್ಟು ಸಮಸ್ಯೆ. ಇದರ ಜೊತೆಗೆ ಅನ್ನದ ಅರಿವು ಮೂಡಿಸುವ ಪ್ರಯತ್ನವನ್ನೇ ಮುಖ್ಯವಾಗಿಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಇಡೀ ಸಿನಿಮಾದ ಪರಿಸರ ಕಥೆ ಹಾಗೂ ಅದರ ಆಶಯಕ್ಕೆ ಪೂರಕವಾಗಿರುವುದರಿಂದ ನೈಜವಾಗಿ ಮೂಡಿಬಂದಿದೆ.
ಸಂಪತ್ ಮೈತ್ರೇಯ ಹಾಗೂ ಪದ್ಮಶ್ರೀ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಅವರು ಹೆಚ್ಚು ಇಷ್ಟವಾಗುತ್ತಾರೆ. ಉಳಿದಂತೆ ನಂದನ್, ಭುವನಾ, ಬಲರಾಜವಾಡಿ ಸೇರಿದಂತೆ ಇತರರು ನಟಿಸಿದ್ದಾರೆ. ಒಂದು ಪ್ರಯತ್ನವಾಗಿ “ಅನ್ನ’ ಮೆಚ್ಚಬಹುದಾದ ಚಿತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vijayanagara: ಹುಲಿಕೆರೆ ಕೆರೆ ಬಳಿಯ ರಸ್ತೆಯಲ್ಲಿ ಬಿರುಕು.. ಕುಸಿಯುವ ಭೀತಿ, ಆತಂಕದಲ್ಲಿ ಜನ
Mysore- Film City: ಮೈಸೂರಿಗೆ ಚಿತ್ರನಗರಿ ಕಿರೀಟ
Renukaswamy Case: ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್.. ಬೆಂಗಳೂರು ಶಿಫ್ಟ್ ಆಗ್ತಾರಾ?
Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ
Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.