ತ್ರಿವಿಕ್ರಮ್‌ಗೆ ಮತ್ತೊಬ್ಬ ನಾಯಕಿ ಎಂಟ್ರಿ

ವಿಕ್ರಮ್‌ಗೆ ಪಂಚತಂತ್ರ ಹುಡುಗಿ ಅಕ್ಷರಗೌಡ ನಾಯಕಿ

Team Udayavani, Aug 1, 2019, 3:02 AM IST

Akshara-Gowda

ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅಭಿನಯದ “ತ್ರಿವಿಕ್ರಮ’ ಚಿತ್ರಕ್ಕೆ ಮುಂಬೈ ಬೆಡಗಿ ಆಕಾಂಕ್ಷ ನಾಯಕಿ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರದಲ್ಲಿ ಒಬ್ಬ ನಾಯಕಿ ಅಲ್ಲ, ಇನ್ನೂ ಒಬ್ಬ ನಾಯಕಿ ಇದ್ದಾಳೆ ಎಂಬುದು ಈಗ ಗೊತ್ತಾಗಿದೆ. ಹೌದು, “ತ್ರಿವಿಕ್ರಮ’ ಚಿತ್ರಕ್ಕೆ ಮತ್ತೊಬ್ಬ ನಾಯಕಿ ಇದ್ದಾರೆ. ಅದು ಬೇರಾರೂ ಅಲ್ಲ, ಅಕ್ಷರಗೌಡ. ಯೋಗರಾಜ್‌ಭಟ್‌ ನಿರ್ದೇಶನದ “ಪಂಚತಂತ್ರ’ ಚಿತ್ರಕ್ಕೆ ನಾಯಕಿಯಾಗಿದ್ದ ಅಕ್ಷರಗೌಡ ಈಗ “ತ್ರಿವಿಕ್ರಮ’ ಚಿತ್ರಕ್ಕೂ ನಾಯಕಿಯಾಗಿದ್ದಾರೆ.

ಸದ್ಯಕ್ಕೆ ಅಕ್ಷರಗೌಡ, ತೆಲುಗು ಹೀರೋ ನಾಗಾರ್ಜುನ ಅವರೊಂದಿಗೆ ಒಂದು ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗಿದೆ. ಆ ಚಿತ್ರದಲ್ಲಿ ಸಮಂತಾ, ಕೀರ್ತಿಸುರೇಶ್‌ ಜೊತೆ ಅಕ್ಷರಗೌಡ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ವಿಕ್ರಮ್‌ ಅವರ “ತ್ರಿವಿಕ್ರಮ’ ಚಿತ್ರವನ್ನು ಸಹನಾಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲರಿಗೂ ಈ ಚಿತ್ರಕ್ಕೆ ಚಾಲನೆ ಯಾವಾಗ ಎಂಬ ಪ್ರಶ್ನೆ ಇತ್ತು. ಆ ಪ್ರಶ್ನೆಗೆ ಈಗ ಸ್ವತಃ ನಿರ್ದೇಶಕರೇ ಉತ್ತರಿಸಿದ್ದಾರೆ. ಹೌದು, ಆಗಸ್ಟ್‌ 10 ರಂದು “ತ್ರಿವಿಕ್ರಮ’ ಚಿತ್ರಕ್ಕೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ.

ಈ ಕುರಿತು ಹೇಳುವ ನಿರ್ದೇಶಕ ಸಹನಾಮೂರ್ತಿ, “ಆ.10 ರಂದು ಜಿಟಿ ವರ್ಲ್ಡ್ಮಾಲ್‌ನಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಅಂದು ದೊಡ್ಡ ಈವೆಂಟ್‌ ಮಾಡಲಾಗುತ್ತಿದ್ದು, ಅಲ್ಲೊಂದು ವಿಶೇಷತೆ ಇದೆ. ಆ ಮೂಲಕ ರವಿಚಂದ್ರನ್‌ ಅವರ ಪುತ್ರ ವಿಕ್ರಮ್‌ ಅವರ “ತ್ರಿವಿಕ್ರಮ’ ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಗಲಿದೆ’ ಎಂದು ವಿವರ ಕೊಡುತ್ತಾರೆ ಸಹನಾಮೂರ್ತಿ. ನಾಯಕರಾಗಿ ಎಂಟ್ರಿಯಾಗುತ್ತಿರುವ ವಿಕ್ರಮ್‌, ಈ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಇದೊಂದು ಸ್ವಮೇಕ್‌ ಕಥೆಯಾಗಿದ್ದು, ಪಕ್ಕಾ ಲವ್‌ಸ್ಟೋರಿ ಹೊಂದಿದೆ.

ಲವ್‌, ತಾಯಿ ಸೆಂಟಿಮೆಂಟ್‌, ಎಮೋಷನ್ಸ್‌ ಹಾಗು ಒಂದಷ್ಟು ಗೆಳೆತನ ಇತ್ಯಾದಿ ವಿಷಯಗಳು ಪ್ರಮುಖ ಆಕರ್ಷಣೆ ಆಗಿರಲಿದೆ. ಚಿತ್ರಕ್ಕೆ ಸೋಮಶೇಖರ್‌ ಮತ್ತು ಸುರೇಶ್‌ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಾಧುಕೋಕಿಲ, ತುಳಸಿ ಶಿವಮಣಿ, ಚಿಕ್ಕಣ್ಣ, ಸುಚೇಂದ್ರಪ್ರಸಾದ್‌ ಇತರರು ನಟಿಸುತ್ತಿದ್ದಾರೆ. ಅರ್ಜುನ್‌ ಜನ್ಯಾ ಆರು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. ಬೆಂಗಳೂರು, ದಾಂಡೇಲಿ, ರಾಜಸ್ಥಾನ್‌ ಹಾಗು ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಯಲಿದೆ.

ಟಾಪ್ ನ್ಯೂಸ್

ಮಹಿಳಾ ಟಿ20 ಚಾಲೆಂಜ್: ಸೂಪರ್‌ ನೋವಾಸ್‌ಗೆ ಪ್ರಶಸ್ತಿ

ಮಹಿಳಾ ಟಿ20 ಚಾಲೆಂಜ್: ಸೂಪರ್‌ ನೋವಾಸ್‌ಗೆ ಪ್ರಶಸ್ತಿ

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

ಈಶ್ವರಮಂಗಲ: ಒಂದು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ

ಈಶ್ವರಮಂಗಲ: ಒಂದು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ

ವಿದ್ಯಾರ್ಥಿನಿಯರು ಬಯಸಿದರೆ ಟಿಸಿಗೆ ಅವಕಾಶ: ವಿ.ವಿ. ಕುಲಪತಿ

ವಿದ್ಯಾರ್ಥಿನಿಯರು ಬಯಸಿದರೆ ಟಿಸಿಗೆ ಅವಕಾಶ: ವಿ.ವಿ. ಕುಲಪತಿ

ಬಹಿರಂಗ ಚರ್ಚೆಗೆ ಬನ್ನಿ: ಪ್ರತಾಪ್‌ ಸಿಂಹ ಸವಾಲು

ಬಹಿರಂಗ ಚರ್ಚೆಗೆ ಬನ್ನಿ: ಪ್ರತಾಪ್‌ ಸಿಂಹ ಸವಾಲು

ಹಿಜಾಬ್‌ ಧರಿಸಿ ಬಂದ 11 ಮಂದಿ ವಾಪಸ್‌ಹಿಜಾಬ್‌ ಧರಿಸಿ ಬಂದ 11 ಮಂದಿ ವಾಪಸ್‌

ಹಿಜಾಬ್‌ ಧರಿಸಿ ಬಂದ 11 ಮಂದಿ ವಾಪಸ್‌

ಕೊಂಪದವು: ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತ ಸಾವು

ಕೊಂಪದವು: ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತ ಸಾವು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೂ.03 ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಮುಹೂರ್ತ

ಜೂ.03 ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಮುಹೂರ್ತ

kiccha sudeep reels

ರ..ರ..ರಕ್ಮಮ್ಮ ಸಖತ್‌ ಲುಕ್ಕಮ್ಮ… ಸುದೀಪ್ ರೀಲ್ಸ್ ವೈರಲ್

vijay’s bheema movie shooting

‘ಭೀಮ’ ಚಿತ್ರೀಕರಣದಲ್ಲಿ ವಿಜಯ್ ಬಿಝಿ

ಮೂರು ಆಯಾಮಗಳ ಕಥಾಹಂದರ ‘ಧೀರನ್’

ಮೂರು ಆಯಾಮಗಳ ಕಥಾಹಂದರ ‘ಧೀರನ್’

wheelchair romeo

ವೀಲ್‌ಚೇರ್‌ನಲ್ಲಿ ಹೊಸ ಪ್ರೇಮ ಪುರಾಣ: ವಿಭಿನ್ನ ಕಾನ್ಸೆಪ್ಟ್ ನ ಸಿನಿಮಾವಿದು..

MUST WATCH

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

ಹೊಸ ಸೇರ್ಪಡೆ

ಮಹಿಳಾ ಟಿ20 ಚಾಲೆಂಜ್: ಸೂಪರ್‌ ನೋವಾಸ್‌ಗೆ ಪ್ರಶಸ್ತಿ

ಮಹಿಳಾ ಟಿ20 ಚಾಲೆಂಜ್: ಸೂಪರ್‌ ನೋವಾಸ್‌ಗೆ ಪ್ರಶಸ್ತಿ

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

ಈಶ್ವರಮಂಗಲ: ಒಂದು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ

ಈಶ್ವರಮಂಗಲ: ಒಂದು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ

ವಿದ್ಯಾರ್ಥಿನಿಯರು ಬಯಸಿದರೆ ಟಿಸಿಗೆ ಅವಕಾಶ: ವಿ.ವಿ. ಕುಲಪತಿ

ವಿದ್ಯಾರ್ಥಿನಿಯರು ಬಯಸಿದರೆ ಟಿಸಿಗೆ ಅವಕಾಶ: ವಿ.ವಿ. ಕುಲಪತಿ

ಬಹಿರಂಗ ಚರ್ಚೆಗೆ ಬನ್ನಿ: ಪ್ರತಾಪ್‌ ಸಿಂಹ ಸವಾಲು

ಬಹಿರಂಗ ಚರ್ಚೆಗೆ ಬನ್ನಿ: ಪ್ರತಾಪ್‌ ಸಿಂಹ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.