Udayavni Special

ಸಾಗುತ ದೂರ ಬಂದ ಅಪೇಕ್ಷಾ


Team Udayavani, Aug 8, 2018, 10:00 PM IST

apeksha-purohit-7.jpg

ಟಿ.ಎನ್‌.ಸೀತಾರಾಮ್‌ ನಿರ್ದೇಶನದ “ಕಾಫಿತೋಟ’ ಚಿತ್ರದಲ್ಲಿ ನಟಿಸಿದ್ದ ಅಪೇಕ್ಷಾ ಪುರೋಹಿತ್‌, ಆ ಬಳಿಕ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಪ್ರಶ್ನೆ ಇತ್ತು. ಸ್ವಲ್ಪ ದಿನಗಳ ಬಳಿಕ ಸಿಕ್ಕ ಉತ್ತರ ನಿರ್ದೇಶಕ ಪವನ್‌ ಒಡೆಯರ್‌ ಜೊತೆ ನಿಶ್ಚಿತಾರ್ಥ. ಆ ಬಳಿಕ ಅಪೇಕ್ಷಾ ಪುರೋಹಿತ್‌ ಸದ್ದಿಲ್ಲದೆಯೇ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಹೌದು, ಆ ಚಿತ್ರಕ್ಕೆ “ಸಾಗುತ ದೂರ ದೂರ’ ಎಂದು ಹೆಸರಿಡಲಾಗಿದೆ. ವಿಶೇಷ ಅಂದರೆ, ಈ ಚಿತ್ರ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ.

ಅಪೇಕ್ಷಾ ಪುರೋಹಿತ್‌ಗೆ “ಸಾಗುತ ದೂರ ದೂರ’ ಮೂರನೇ ಚಿತ್ರ. ಈ ಚಿತ್ರಕ್ಕೆ ರವಿತೇಜ ನಿರ್ದೇಶಕರು. ಈ ಹಿಂದೆ “ಜಾತ್ರೆ’ ಸಿನಿಮಾ ನಿರ್ದೇಶಿಸಿದ್ದ ರವಿತೇಜ ಈಗ ತಾಯಿ ಸೆಂಟಿಮೆಂಟ್‌ ಕುರಿತ “ಸಾಗುತ ದೂರ ದೂರ’ ಚಿತ್ರ ಮಾಡಿದ್ದಾರೆ. ಇನ್ನು, ಈ ಚಿತ್ರ “ಕೃಷಿ ಕನಸು’ ಬ್ಯಾನರ್‌ನಲ್ಲಿ ಅಮಿತ್‌ ಪೂಜಾರಿ ನಿರ್ಮಾಣ ಮಾಡಿದ್ದಾರೆ. ಅಪೇಕ್ಷಾ ಪುರೋಹಿತ್‌ ಅವರೊಂದಿಗೆ ಮಹೇಶ್‌ ಎಂಬ ಹೊಸ ಪ್ರತಿಭೆ ಕಾಣಿಸಿಕೊಂಡಿದೆ. ಅಪೇಕ್ಷಾ ಪುರೋಹಿತ್‌ ಅವರಿಗೆ ಇದೊಂದು ವಿಭಿನ್ನ ಚಿತ್ರವಂತೆ.

ಅದರಲ್ಲೂ ಅವರ ಪಾತ್ರವೇ ಹೈಲೆಟ್‌. ಇಲ್ಲಿ ಲವ್‌ ಇಲ್ಲ. ಮರಸುತ್ತುವ ಗೋಜಿಲ್ಲ. ಆದರೆ, ಅಮ್ಮನ ಸೆಂಟಿಮೆಂಟ್‌ ಕಥೆ ಇದೆ. ಇದೊಂದು ಜರ್ನಿ ಕಥೆಯಾಗಿದ್ದು, ಅಪೇಕ್ಷಾ ಮತ್ತು ಇನ್ನೊಬ್ಬ ಚಿಕ್ಕ ಹುಡುಗನ ನಡುವಿನ ಕಥೆ ಸಾಗುತ್ತದೆ. ಈ ಜರ್ನಿಯಲ್ಲಿ ಇಬ್ಬರೂ ತಮ್ಮ ತಾಯಿಯನ್ನು ಹುಡುಕಿ ಹೋಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೊಂದು ಎಮೋಷನಲ್‌ ಆಗಿದ್ದು, ಪ್ರತಿಯೊಬ್ಬರಿಗೂ ನಾಟುವ ಕಥೆ ಎಂಬುದು ಅಪೇಕ್ಷಾ ಮಾತು.

ಚಿತ್ರದಲ್ಲಿ ಅಪೇಕ್ಷಾ ಪುರೋಹಿತ್‌ ಅವರಿಗೆ ಇಲ್ಲಿ ಎರಡು ಶೇಡ್‌ ಇರುವ ಪಾತ್ರವಿದೆ. “ಕಾಫಿ ತೋಟ’ದಲ್ಲಿ ಪಕ್ಕಾ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ಅವರಿಲ್ಲಿ, ಸೆನ್ಸಿಟಿವ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಬಹುತೇಕ ಕುಂದಾಪುರ ಶೈಲಿಯ ಸಿನಿಮಾ. ಇಲ್ಲಿ ಕುಂದಾಪುರದ ಹುಡುಗಿಯಾಗಿ ನಟಿಸಿರುವ ಆಪೇಕ್ಷಾ ಸಂಭಾಷಣೆ ಕೂಡ ಕುಂದಾಪುರ ಶೈಲಿಯಲ್ಲೇ ಇರಲಿದೆಯಂತೆ. ಇದು ಕಮರ್ಷಿಯಲ್‌ ಚಿತ್ರವಲ್ಲ.

ಒಂದು ರೀತಿಯ ಹಾಫ್ಬೀಟ್‌ ಚಿತ್ರವಾಗಿದ್ದರೂ ಹೊಸತನ, ಹೊಸ ಪ್ರಯೋಗ ಇಲ್ಲಿ ಇನ್ನೊಂದು ವಿಶೇಷ ಎಂಬುದು ಅವರ ಮಾತು. ಅಪೇಕ್ಷಾ ಪುರೋಹಿತ್‌ ಅವರೊಂದಿಗೆ ಜಾಹ್ನವಿ ಕೂಡ ಕಾಣಿಸಿಕೊಂಡಿದ್ದಾರೆ. ಗಡ್ಡಪ್ಪ, ಹೊನ್ನವಳ್ಳಿ ಕೃಷ್ಣ ಇತರೆ ಕಲಾವಿದರೂ ಜರ್ನಿಯಲ್ಲಿ ಎದುರಾಗಲಿದ್ದಾರೆ. ಮೂಡಿಗೆರೆ, ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು ಹಾಗೂ ಕುಂದಾಪುರ ಸುತ್ತಮುತ್ತ ಚಿತ್ರೀಕರಣವಾಗಿದೆ.

ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತವಿದ್ದು, ಮೂರು ಹಾಡುಗಳಿವೆ. “ಕಥಾ ವಿಚಿತ್ರ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಅಭಿಲಾಷ್‌ ಕಲತಿ ಚಿತ್ರಕ್ಕೆ ಛಾಯಾಗ್ರಾಹಕರು. ಸದ್ಯಕ್ಕೆ ಅಪೇಕ್ಷಾ ಈ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಇವರು ಅಭಿನಯಿಸಿರುವ “ಕಿನಾರೆ’ ಕೂಡ ಬಿಡುಗಡೆಯ ಹಾದಿಯಲ್ಲಿದೆ. ಎಲ್ಲಾ ಸರಿ, ಅಪೇಕ್ಷಾ ಪುರೋಹಿತ್‌ ಅವರ ಮದುವೆ ಯಾವಾಗ?

ಇದೇ ಆಗಸ್ಟ್‌ 28 ಎಂಬ ಉತ್ತರ ಕೊಡುತ್ತಾರೆ ಅಪೇಕ್ಷಾ. ಮದುವೆ ಬಳಿಕ ಪವನ್‌ ಒಡೆಯರ್‌ ಜೊತೆ ಕೆಲಸ ಮಾಡುವ ಆಸೆ ಇದೆ. ಆದರೆ, ಅವರು ನಿರ್ದೇಶಕರಾಗಿ, ನಾನು ನಾಯಕಿಯಾಗಿ ಅಲ್ಲ. ಬದಲಾಗಿ, ನನಗೆ ಪ್ರೊಡಕ್ಷನ್‌ನಲ್ಲಿ ಆಸಕ್ತಿ ಇದೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಕಾಲ ಸನಿಹದಲ್ಲಿದೆ ಎನ್ನುತ್ತಲೇ ಮಾತು ಮುಗಿಸುತ್ತಾರೆ ಅಪೇಕ್ಷಾ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

river

ಬೀದರ್: ಆಟವಾಡಲು ಹೋಗಿ, ಕೆರೆಯಲ್ಲಿ ಬಿದ್ದು ಅಕ್ಕ-ತಮ್ಮ ಸಾವು

coviid-stater

ಕೋವಿಡ್-19 ಕಳವಳ – ಸೆ.19: 8364 ಹೊಸ ಪ್ರಕರಣ ; 10,815 ಡಿಸ್ಚಾರ್ಜ್; 114 ಸಾವು

chamarajnagar

ಚಾಮರಾಜನಗರ: ಇಂದು 72 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಸುರೇಶ್‌ ರೈನಾ ಶುಭ ಸಂದೇಶ

ಸುರೇಶ್‌ ರೈನಾ ಶುಭ ಸಂದೇಶ

ಮಂಡ್ಯ: ಕೋವಿಡ್ ಸೋಂಕಿನಿಂದ 412 ಮಂದಿ ಗುಣಮುಖ ; ಇಬ್ಬರ ಸಾವು, 93 ಹೊಸ ಪ್ರಕರಣ

ಮಂಡ್ಯ: ಕೋವಿಡ್ ಸೋಂಕಿನಿಂದ 412 ಮಂದಿ ಗುಣಮುಖ ; ಇಬ್ಬರ ಸಾವು, 93 ಹೊಸ ಪ್ರಕರಣ

ಮಂಡ್ಯ: ಮೂವರು ಅರ್ಚಕರ ಹತ್ಯೆ ಪ್ರಕರಣ: ಮತ್ತೆ 4 ಮಂದಿಯನ್ನು ಬಂಧಿಸಿದ ಪೊಲೀಸರು

ಮಂಡ್ಯ: ಮೂವರು ಅರ್ಚಕರ ಹತ್ಯೆ ಪ್ರಕರಣ: ಮತ್ತೆ 4 ಮಂದಿಯನ್ನು ಬಂಧಿಸಿದ ಪೊಲೀಸರು

ipl-chennai-mumbai

ಐಪಿಎಲ್ ಕಲರವ ಆರಂಭ: ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ಮುಂದೂಡಿಕೆ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ CCB ನೋಟಿಸ್

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ ಸಿಸಿಬಿ ಶಾಕ್

vishnuvardhan

ಹೃದಯವಂತ ವಿಷ್ಣು ಜನ್ಮದಿನ: ಅವರ ಜೀವನಚರಿತ್ರೆ ಹಾಗೂ ನೋಡಲೇಬೇಕಾದ ಚಿತ್ರಗಳು ಇಲ್ಲಿವೆ !

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

‌ನರೇಗಾ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಮೇಘರಾಜ್‌

‌ನರೇಗಾ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಮೇಘರಾಜ್‌

ಪಿಂಚಣಿ ಸೌಲಭ್ಯ ನೀಡಲು ಒತ್ತಾಯ

ಪಿಂಚಣಿ ಸೌಲಭ್ಯ ನೀಡಲು ಒತ್ತಾಯ

river

ಬೀದರ್: ಆಟವಾಡಲು ಹೋಗಿ, ಕೆರೆಯಲ್ಲಿ ಬಿದ್ದು ಅಕ್ಕ-ತಮ್ಮ ಸಾವು

ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬಿಲ್‌: ಕ್ರಮಕ್ಕೆ ಮನವಿ

ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬಿಲ್‌: ಕ್ರಮಕ್ಕೆ ಮನವಿ

coviid-stater

ಕೋವಿಡ್-19 ಕಳವಳ – ಸೆ.19: 8364 ಹೊಸ ಪ್ರಕರಣ ; 10,815 ಡಿಸ್ಚಾರ್ಜ್; 114 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.