ಫಿಲಂ ಬಜಾರ್ಗೆ ಮೆಚ್ಚುಗೆ
Team Udayavani, Mar 5, 2020, 7:00 AM IST
ಕನ್ನಡ ಚಲನಚಿತ್ರಗಳಿಗೆ ವಿಶ್ವಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆರಂಭಗೊಂಡ ಡೈರೆಕ್ಟರ್ಸ್ ಫಿಲಂ ಬಜಾರ್ಗೆ ಇತ್ತೀಚೆಗೆ ಚಾಲನೆ ಸಿಕ್ಕಿದ್ದು, ಉತ್ತಮ ಮೆಚ್ಚುಗೆ ವ್ಯಕ್ತವಾಯಿತು.
ಇರಾನಿನ ಫಸ್ಟ್ ಕೌನ್ಸಿಲ್ ಕೊದಾದದ್ ನಿಜಾದ್ ಅಸಾದ್, ನಟ-ನಿರ್ದೇಶಕ ಉಪೇಂದ್ರ, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಫಿಲಂ ಬಜಾರ್ನ ಅಧ್ಯಕ್ಷ ಟೇಶಿ ವೆಂಕಟೇಶ್ ಮತ್ತು ಆಯೋಜಕ ಬಿ.ಆರ್.ಕೇಶವ್ ಹಾಗೂ ಸಂಘದ ಕಾರ್ಯಕಾರಿ ಸದಸ್ಯರುಗಳು ಹಾಜರಿದ್ದರು.