Udayavni Special

ಅಕ್ಟೋಬರ್‌ 4ರಂದು ಅಮೆರಿಕಾ ಅಧ್ಯಕ್ಷರ ಆಗಮನ


Team Udayavani, Aug 28, 2019, 3:03 AM IST

adyksha

ನಟ ಶರಣ್‌ ನಾಯಕನಾಗಿ ಅಭಿನಯಿಸಿರುವ ಚಿತ್ರ “ಅಧ್ಯಕ್ಷ ಇನ್‌ ಅಮೆರಿಕಾ’ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಕಳೆದ ಎರಡು-ಮೂರು ತಿಂಗಳಿನಿಂದ ಭರ್ಜರಿಯಾಗಿ ಪ್ರಮೋಶನ್‌ ಕೆಲಸಗಳಲ್ಲಿ ಬಿಝಿಯಾಗಿರುವ “ಅಧ್ಯಕ್ಷ ಇನ್‌ ಅಮೆರಿಕಾ’ ಇದೇ ಅಕ್ಟೋಬರ್‌ 4ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. “ರ್‍ಯಾಂಬೋ-2′ ಚಿತ್ರದ ಬಳಿಕ ಶರಣ್‌ ಅಭಿನಯಿಸುತ್ತಿರುವ “ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರದ ಕಥೆ ಸ್ವದೇಶ ಮತ್ತು ವಿದೇಶ ಎರಡೂ ಕಡೆಗಳಲ್ಲಿ ನಡೆಯಲಿದ್ದು, ಅದರಂತೆ ಚಿತ್ರವನ್ನು ಭಾರತ ಮತ್ತು ಅಮೆರಿಕಾ ಎರಡೂ ದೇಶಗಳಲ್ಲೂ ಚಿತ್ರೀಕರಿಸಲಾಗಿದೆ.

ಚಿತ್ರದಲ್ಲಿ ಶರಣ್‌ಗೆ ನಾಯಕಿಯಾಗಿ ರಾಗಿಣಿ ದ್ವಿವೇದಿ ಜೋಡಿಯಾಗಿದ್ದು, ಉಳಿದಂತೆ ದಿಶಾ ಪಾಂಡೆ, ಅಶೋಕ್‌, ಅವಿನಾಶ್‌, ಪ್ರಕಾಶ್‌ ಬೆಳವಾಡಿ, ಶಿವರಾಜ್‌ ಕೆ.ಆರ್‌.ಪೇಟೆ, ಚಿತ್ರಾ ಶೆಣೈ, ಪದ್ಮಜಾ ರಾವ್‌, ತಬಲ ನಾಣಿ, ಮಕರಂದ್‌ ದೇಶಪಾಂಡೆ, ತಾರಕ್‌ ಪೊನ್ನಪ್ಪ, ಸಾಧುಕೋಕಿಲ, ರಂಗಾಯಣ ರಘು, ರಾಕ್‌ಲೈನ್‌ ಸುಧಾಕರ್‌, ಅಂಥೋನಿ ಕಮಲ್‌, ಸುಂದರ್‌ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ “ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಫ‌ಸ್ಟ್‌ ಕಾಪಿಯೊಂದಿಗೆ ಹೊರಬಂದಿರುವ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ “ಅಧ್ಯಕ್ಷ’ನಿಗೆ “ಯು/ಎ’ ಸರ್ಟಿಫೀಕೆಟ್‌ ಕೊಟ್ಟು, ರಿಲೀಸ್‌ಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಈಗಾಗಲೇ ಬಿಡುಗಡೆಯಾಗಿರುವ “ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರದ ಟೀಸರ್‌, ಟ್ರೇಲರ್‌ಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಅಕ್ಟೋಬರ್‌ ಮೊದಲವಾರ ತೆರೆಗೆ ತರಲು ಯೋಜಿಸಿದೆ.

“ಪೀಪಲ್‌ ಮೀಡಿಯಾ ಫ್ಯಾಕ್ಟರಿ’ ಲಾಂಛನದಲ್ಲಿ ವಿಶ್ವ ಪ್ರಸಾದ್‌ ಟಿ.ಜಿ ನಿರ್ಮಿಸಿರುವ “ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರಕ್ಕೆ ಯೋಗಾನಂದ್‌ ಮುದ್ದಾನ್‌ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸುಧಾಕರ್‌ ಎಸ್‌ ರಾಜ್‌, ಸಿದ್ಧಾರ್ಥ್ ರಾಮಸ್ವಾಮಿ, ಅನೀಶ್‌ ತರುಣ್‌ ಕುಮಾರ್‌ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್‌ ಸಂಕಲನವಿದೆ. ಒಟ್ಟಾರೆ ಒಂದರ ಹಿಂದೊಂದು ಕಾಮಿಡಿ ಹಿಟ್‌ ಚಿತ್ರಗಳನ್ನು ಕೊಡುತ್ತ ಬಂದಿರುವ ಶರಣ್‌ ಕಾಮಿಡಿ ಕಮಾಲ್‌ ಇಲ್ಲೂ ಮುಂದುವರೆಯಲ್ಲಿದ್ದು, “ಅಧ್ಯಕ್ಷ’ ಅಮೆರಿಕಾದಲ್ಲಿ ಹೇಗಿದ್ದಾನೆ ಅನ್ನೋದು ಶೀಘ್ರದಲ್ಲಿಯೆ ಗೊತ್ತಾಗಲಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL

IPL 2020: ಪಂಜಾಬ್-ಡೆಲ್ಲಿ ಫೈಟ್: ರಾಹುಲ್ ಪಡೆಗೆ 5 ವಿಕೆಟ್ ಗಳ ಗೆಲುವು

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್ ..!

true-caller

ಕೋವಿಡ್ ಕಾಲದಲ್ಲಿ True caller ಬಳಕೆದಾರರ ಸಂಖ್ಯೆ ದ್ವಿಗುಣ: ಕಾರಣವೇನು ?

siddaramiha

ಪ್ರಧಾನಿ ಮೋದಿಯವರು ತಮ್ಮ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ

mandya

ಅಂತರ್ಜಾತಿ ಮದುವೆಯಾದ ಯುವತಿ ನಿಗೂಢ ನಾಪತ್ತೆ: 5 ವರ್ಷದ ಬಳಿಕ ಪೋಷಕರಿಂದ ದೂರು ದಾಖಲು





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cinema-tdy

ಬ್ರೇಕ್‌ ಕೆ ಬಾದ್‌… 50 ದಿನದ ಸಂತಸ

cinema-tdy-.02

ನವೆಂಬರ್‌ನಲ್ಲಿ ಆ್ಯಕ್ಟ್-1978 ರಿಲೀಸ್‌

CINEMA-TDY-05

ಚಿತ್ರರಂಗದಲ್ಲಿ ಮುಹೂರ್ತ ಸಂಭ್ರಮ

cinemma-tdy-5

ರೀ ರಿಲೀಸ್‌ನತ್ತ ಸ್ಟಾರ್ಸ್ ಚಿತ್ರ

cinema-tdy-4

ಮರ್ಯಾದಸ್ಥನಾದ ವಸಿಷ್ಠಗೆ ಹುಟುಹಬ್ಬದ ಸಂಭ್ರಮ

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani



ಹೊಸ ಸೇರ್ಪಡೆ

IPL

IPL 2020: ಪಂಜಾಬ್-ಡೆಲ್ಲಿ ಫೈಟ್: ರಾಹುಲ್ ಪಡೆಗೆ 5 ವಿಕೆಟ್ ಗಳ ಗೆಲುವು

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್ ..!

true-caller

ಕೋವಿಡ್ ಕಾಲದಲ್ಲಿ True caller ಬಳಕೆದಾರರ ಸಂಖ್ಯೆ ದ್ವಿಗುಣ: ಕಾರಣವೇನು ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.