Udayavni Special

ಅರುಣ್‌ ಲೂಸ್‌ ಕನೆಕ್ಷನ್‌!


Team Udayavani, Jun 20, 2018, 11:02 AM IST

arun.jpg

ಕನ್ನಡದಲ್ಲಿ ಈಗಂತೂ ಹೊಸ ಬಗೆಯ ಶೀರ್ಷಿಕೆವುಳ್ಳ ಚಿತ್ರಗಳು ಸೆಟ್ಟೇರುತ್ತಿವೆ. ಅದರಲ್ಲೂ ವಿಭಿನ್ನ ಶೀರ್ಷಿಕೆ ಚಿತ್ರಗಳೇ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸುತ್ತಿವೆ. ಈಗ ಅಂಥದ್ದೇ ಭಿನ್ನವಾಗಿರುವ ಶೀರ್ಷಿಕೆ ಹೊತ್ತು ಚಿತ್ರವೊಂದು ಸೆಟ್ಟೇರುತ್ತಿದೆ. ಆ ಚಿತ್ರದ ಹೆಸರು “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’. ಅಂದಹಾಗೆ, ಈ ಚಿತ್ರವನ್ನು ಅರುಣ್‌ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಲೂಸ್‌ಗಳು’ ಚಿತ್ರ ನಿರ್ದೇಶಿಸಿದ್ದ ಅರುಣ್‌, ಈಗ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ನಿರ್ದೇಶಿಸುತ್ತಿದ್ದಾರೆ. 

ಶೀರ್ಷಿಕೆ ಹೇಳುವಂತೆ, ಇದು ಪಕ್ಕಾ ಯೂಥ್‌ ಸಿನಿಮಾ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅಷ್ಟಕ್ಕೂ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂಬ ಪದ ಬಹಳಷ್ಟು ಶಾಲಾ ಸಮಾರಂಭದಲ್ಲೇ ಕೇಳಿಬರುತ್ತೆ. ಅಂಥದ್ದೊಂದು ಪದ ಬಳಕೆಯನ್ನೇ ಚಿತ್ರದ ಶೀರ್ಷಿಕೆಯನ್ನಾಗಿಸಿ ಚಿತ್ರ ಮಾಡಲು ಹೊರಟಿದ್ದಾರೆ ನಿರ್ದೇಶಕ ಅರುಣ್‌. “ಇದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕುರಿತ ಚಿತ್ರ. ಹೈಸ್ಕೂಲ್‌ ಲೈಫ್ ಕಳೆದ, ಕಳೆಯುತ್ತಿರುವ ಹುಡುಗರ ಕಥೆ ಇಲ್ಲಿದೆ.

ಇಲ್ಲಿ ಬಹುತೇಕ 16 ರಿಂದ 20 ವರ್ಷದೊಳಗಿನ ಪ್ರತಿಭೆಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇವೆ. ಯುವ ಮನಸ್ಸುಗಳ ತಲ್ಲಣ, ತಳಮಳ, ಅವರ ಆಲೋಚನೆ ಇತ್ಯಾದಿ ವಿಷಯಗಳ ಮೇಲೆ ಚಿತ್ರ ಸಾಗಲಿದೆ. ಹಾಗಂತ ಇಲ್ಲಿ ಲವ್‌ ಇರುತ್ತಾ ಎಂಬ ಪ್ರಶ್ನೆ ಎದುರಾಗಬಹುದು. ಆ ಹಂತದ ಹುಡುಗರಲ್ಲಿ ಪ್ರೀತಿಗಿಂತ ಕ್ರಷ್‌ ಇರುತ್ತೆ. ಅದನ್ನೇ ಇಲ್ಲಿ ಹೈಲೆಟ್‌ ಮಾಡಿಕೊಂಡು ಚಿತ್ರ ಮಾಡಲಾಗುತ್ತಿದೆ.

ಆ ವಿದ್ಯಾರ್ಥಿಗಳ ತುಂಟಾಟಗಳು, ಮಧುರ ನೆನಪುಗಳು ಇತ್ಯಾದಿ ವಿಷಯಗಳು ಇಲ್ಲಿರಲಿವೆ. ಬಹುತೇಕ ಮಲೆನಾಡ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ. ಸದ್ಯಕ್ಕೆ ಆಡಿಷನ್‌ ಮಾಡಬೇಕಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ ಅರುಣ್‌. ಈ ಚಿತ್ರವನ್ನು ವೆರೈಟಿ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಸುಬ್ರಹ್ಮಣ್ಯ ಕೊಕ್ಕೆ ಮತ್ತು ಶಿವಲಿಂಗೇಗೌಡ ನಿರ್ಮಾಣ ಮಾಡುತ್ತಿದ್ದಾರೆ.

ಇವರಿಗೆ ಇದು ಮೊದಲ ಚಿತ್ರ. ಈಗಾಗಲೇ ಯುವ ಪ್ರತಿಭೆಗಳಿಗೆ ಹುಡುಕಾಟ ಶುರುವಾಗಿದ್ದು, ಅವರಿಗೆ ವರ್ಕ್‌ಶಾಪ್‌ ನಡೆಸಿ, ನಂತರ ಚಿತ್ರೀಕರಣಕ್ಕೆ ಹೋಗುವ ಯೋಚನೆ ನಿರ್ದೇಶಕರಿಗಿದೆ. ಚಿತ್ರಕ್ಕೆ ವಿಜೇತ್‌, ವಾಸು ದೀಕ್ಷಿತ್‌, ಶೇಷಗಿರಿ ಸಂಗೀತ ನೀಡುತ್ತಿದ್ದಾರೆ. ಚಿದಾನಂದ್‌ ಛಾಯಾಗ್ರಹಣವಿದೆ. ಇಷ್ಟರಲ್ಲೇ ಚಿತ್ರೀಕರಣ ಶುರುವಾಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಅಮೇಜ್ಹ್ ಫಿಟ್‌ ಟಿ ರೆಕ್ಸ್‌ ಸ್ಮಾರ್ಟ್‌ ವಾಚ್‌

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಅಮೇಜ್ಹ್ ಫಿಟ್‌ ಟಿ ರೆಕ್ಸ್‌ ಸ್ಮಾರ್ಟ್‌ ವಾಚ್‌

ಎನ್‌ 95 ಮಾಸ್ಕ್ ಗಳನ್ನು ಸ್ವಚ್ಛಗೊಳಿಸಬಹುದೇ? ಇಲ್ಲಿದೆ ಮಾಹಿತಿ

ಎನ್‌ 95 ಮಾಸ್ಕ್ ಗಳನ್ನು ಸ್ವಚ್ಛಗೊಳಿಸಬಹುದೇ? ಇಲ್ಲಿದೆ ಮಾಹಿತಿ

ಕಲಬುರಗಿಯಲ್ಲಿ ದ್ವಿಶತಕ ಬಾರಿಸಿದ ಕೋವಿಡ್: ಮಾರಕವಾಗುತ್ತಿದೆ ಮಹಾರಾಷ್ಟ್ರ ನಂಟು

ಕಲಬುರಗಿಯಲ್ಲಿ ದ್ವಿಶತಕ ಬಾರಿಸಿದ ಕೋವಿಡ್: ಮಾರಕವಾಗುತ್ತಿದೆ ಮಹಾರಾಷ್ಟ್ರ ನಂಟು

ಬೇರೆ ಬೇರೆ ಪಕ್ಷದಿಂದ 15-20 ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ: ಲಕ್ಷ್ಮಣ ಸವದಿ

ಬೇರೆ ಬೇರೆ ಪಕ್ಷದಿಂದ 15-20 ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ: ಲಕ್ಷ್ಮಣ ಸವದಿ

ಏಡ್ಸ್‌ ವಿರುದ್ಧ ಸೋತಿದ್ದ ದೇಶ ಕೋವಿಡ್‌ ಗೆದ್ದಿತು

ಏಡ್ಸ್‌ ವಿರುದ್ಧ ಸೋತಿದ್ದ ದೇಶ ಕೋವಿಡ್‌ ಗೆದ್ದಿತು

ಉದ್ಯಾವರ ಸೇತುವೆಗೆ ಢಿಕ್ಕಿ ಹೊಡೆದ ಕೆಎಸ್ ಆರ್ ಟಿಸಿ ಬಸ್ಸು: ಹಲವರಿಗೆ ಗಾಯ

ಉದ್ಯಾವರ ಸೇತುವೆಗೆ ಢಿಕ್ಕಿ ಹೊಡೆದ ಕೆಎಸ್ ಆರ್ ಟಿಸಿ ಬಸ್ಸು: ಹಲವರಿಗೆ ಗಾಯ

ಬಿಜೆಪಿಯ ಯಾವುದೇ ಶಾಸಕರು ಮಾರಾಟಕ್ಕೆ ಇರುವ ವ್ಯಕ್ತಿಗಳಲ್ಲ: ಡಿಸಿಎಂ ಸವದಿ

ಬಿಜೆಪಿಯ ಯಾವುದೇ ಶಾಸಕರು ಮಾರಾಟಕ್ಕೆ ಇರುವ ವ್ಯಕ್ತಿಗಳಲ್ಲ: ಡಿಸಿಎಂ ಸವದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

new stori

ಲಾಕ್‌ಡೌನ್‌ ಟೈಮಲ್ಲಿ ಅಜೇಯ್‌ರಾವ್‌ ಮಾಡಿದ್ದೇನು ಗೊತ್ತಾ?

mueder rachiya

ಲಿಲ್ಲಿ ಆಗ್ತಾರಂತೆ ರಚಿತಾ

wild-kar-holl

ವೈಲ್ಡ್‌ ಕರ್ನಾಟಕದಲ್ಲಿ ಚಿತ್ರ ನಟರು

suna-swabhimana

ಸುಮಲತಾ ಸ್ವಾಭಿಮಾನದ ಗೆಲುವಿಗೆ ವರ್ಷ

abhi suri bad

ಅಭಿಷೇಕ್‌ ಚಿತ್ರ ಬ್ಯಾಡ್‌ ಮ್ಯಾನರ್ಸ್‌

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

29-May-20

ಬಿತ್ತನೆ ಬೀಜ-ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಿ

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಅಮೇಜ್ಹ್ ಫಿಟ್‌ ಟಿ ರೆಕ್ಸ್‌ ಸ್ಮಾರ್ಟ್‌ ವಾಚ್‌

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಅಮೇಜ್ಹ್ ಫಿಟ್‌ ಟಿ ರೆಕ್ಸ್‌ ಸ್ಮಾರ್ಟ್‌ ವಾಚ್‌

29-May-19

ನೀರಿನ ದರ ಏರಿಕೆಗೆ ಆಕ್ಷೇಪ

ಆನ್ ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೋಟೊರೋಲಾ ಎಡ್ಜ್ ಪ್ಲಸ್ ಸ್ಮಾರ್ಟ್‌ಫೋನ್‌

ಆನ್ ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೋಟೊರೋಲಾ ಎಡ್ಜ್ ಪ್ಲಸ್ ಸ್ಮಾರ್ಟ್‌ಫೋನ್‌

ಚಿನ್ನ ಕೊಂಡರೆ ಬದುಕು ಬಂಗಾರ 

ಚಿನ್ನ ಕೊಂಡರೆ ಬದುಕು ಬಂಗಾರ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.