ನಟನೆಯಿಂದ ನಿರ್ಮಾಣದತ್ತ ಅಶ್ವಿ‌ನಿ ಗೌಡ

Team Udayavani, Apr 21, 2019, 3:00 AM IST

ಕೆಲವು ನಾಯಕ ನಟಿಯರಿಗೆ ಚಿತ್ರರಂಗದಲ್ಲಿ ಹೀರೋಯಿನ್‌ ಆಗಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ, ಸಿನಿಮಾ ಬದುಕಿಗೆ ಗುಡ್‌ ಬೈ ಹೇಳಿ ವೈಯಕ್ತಿಕ ಬದುಕಿನತ್ತ ಮುಖ ಮಾಡಿ ಬಿಡುತ್ತಾರೆ. ಇನ್ನು ಕೆಲವು ನಟಿಯರು ಚಿತ್ರರಂಗದಲ್ಲಿ ನಾಯಕಿಯಾಗಿ ಅವಕಾಶಗಳು ಕಡಿಮೆಯಾದರೂ, ಬೇರೆ ಬೇರೆ ಪಾತ್ರಗಳಿಗೆ ತೆರೆದುಕೊಳ್ಳುವ ಮೂಲಕ ಸಕ್ರಿಯರಾಗುತ್ತಾರೆ.

ಇವೆಲ್ಲದರ ನಡುವೆ, ಇನ್ನೂ ಕೆಲವು ನಟಿಯರು ಅದಕ್ಕೂ ಮುಂದೆ ಹೋಗಿ ನಿರ್ಮಾಣ, ನಿರ್ದೇಶನ ಹೀಗೆ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್‌ ಅನ್ನೆ ಶುರು ಮಾಡಿ ಆ್ಯಕ್ಟಿವ್‌ ಆಗಿರುತ್ತಾರೆ. ಆದರೆ ಇಂಥವರ ಸಂಖ್ಯೆ ವಿರಳ. ಈಗ ಈ ಸಾಲಿಗೆ ನಟಿ ಅಶ್ವಿ‌ನಿ ಗೌಡ ಸೇರ್ಪಡೆಯಾಗುತ್ತಿದ್ದಾರೆ.

ಹೌದು, “ವಾರಸ್ದಾರ’ ಚಿತ್ರದ ಮೂಲಕ ಹೀರೋಯಿನ್‌ ಆಗಿ ಬೆಳ್ಳಿತೆರೆಗೆ ಪರಿಚಯವಾದ ಅಶ್ವಿ‌ನಿ ಗೌಡ, ಕೆಲ ಚಿತ್ರಗಳಲ್ಲಿ ನಟಿಸುತ್ತಲಿರುವಾಗಲೇ, ವೈವಾಹಿಕ ಬದುಕಿಗೆ ಕಾಲಿಟ್ಟರು. ಮದುವೆಯ ಬಳಿಕ ಹಿರಿತೆರೆಯಲ್ಲಿ ಕೊಂಚ ಗ್ಯಾಪ್‌ ತೆಗೆದುಕೊಂಡಿದ್ದ ಅಶ್ವಿ‌ನಿ ಗೌಡ ನಂತರ ಕಾಣಿಸಿಕೊಂಡಿದ್ದು, ಕಿರುತೆರೆಯ ಧಾರಾವಾಹಿಗಳಲ್ಲಿ.

ಇಲ್ಲಿಯವರೆಗೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳು, 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿರುವ ಅಶ್ವಿ‌ನಿ ಗೌಡ, ಸದ್ಯ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲದರ ನಡುವೆ ಅಶ್ವಿ‌ನಿ ಗೌಡ ಈಗ ನಿರ್ಮಾಪಕಿಯಾಗುತ್ತಿದ್ದಾರೆ.

ಕಿರುತೆರೆ ಮತ್ತು ಹಿರಿತೆರೆಯಲ್ಲಿ ತಮಗಿರುವ ಅನುಭವದ ಆಧಾರದ ಮೇಲೆ ಅಶ್ವಿ‌ನಿ ಗೌಡ, ಈಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಡಾ. ರಾಜಕುಮಾರ್‌ ಪುಣ್ಯತಿಥಿಯಂದು “ಎಎಂಜಿ ಪ್ರೊಡಕ್ಷನ್ಸ್‌’ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿರುವ ಅಶ್ವಿ‌ನಿ ಗೌಡ, ಈ ಸಂಸ್ಥೆಯ ಹೊಸ ಪ್ರತಿಭೆಗಳ ಮೂಲಕ ಸಿನಿಮಾ ಮತ್ತು ಧಾರಾವಾಹಿಗಳ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

 • "ಡಾಟರ್‌ ಆಫ್ ಪಾರ್ವತಮ್ಮ', ಕಳೆದ ಎರಡು-ಮೂರು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸತತವಾಗಿ ಸೌಂಡ್‌ ಮಾಡುತ್ತಿರುವ ಹೆಸರು. ಕನ್ನಡ ಚಿತ್ರರಂಗಕ್ಕೂ ಪಾರ್ವತಮ್ಮ...

 • ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾರೆಯರು, ಅದರಲ್ಲೂ ನಾಯಕ ನಟಿಯರು ಯಾವಾಗಲೂ ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣಲು ಬಯಸುತ್ತಾರೆ. ಅದಕ್ಕಾಗಿ ಪ್ರತಿದಿನ ಯೋಗ, ಜಿಮ್‌,...

 • ಇತ್ತೀಚೆಗಷ್ಟೇ "99' ಚಿತ್ರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ನಟ ಗೋಲ್ಡನ್‌ ಸ್ಟಾrರ್‌ ಗಣೇಶ್‌ ಈಗ ಮತ್ತೆ ಥಿಯೇಟರ್‌ನಲ್ಲಿ 'ಗಿಮಿಕ್‌' ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ....

 • ಪ್ರಿಯಾಂಕ ಅಭಿನಯದ "ದೇವಕಿ' ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. "ದೇವಕಿ' ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣಗೊಂಡಿದೆ....

 • "ಆಗಸ್ಟ್‌ 9'... ಕನ್ನಡ ಚಿತ್ರರಂಗದ ಮಟ್ಟಿಗೆ ಹಬ್ಬ. ಅದರಲ್ಲೂ ಅಭಿಮಾನಿಗಳ ಪಾಲಿಗಂತೂ ಎಲ್ಲಿಲ್ಲದ ಸಡಗರ, ಸಂಭ್ರಮ. ಹಾಗಂತ, ಆಗಸ್ಟ್‌ 9 ರಂದು ಯಾವುದೇ ಚಿತ್ರೋತ್ಸವ ನಡೆಯುತ್ತಿಲ್ಲ....

ಹೊಸ ಸೇರ್ಪಡೆ

 • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

 • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

 • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

 • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

 • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

 • ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ...