Udayavni Special

“ಗೀತಾ’ಗೆ ಆಟೋ ಚಾಲಕರು ಫಿದಾ

ಶಂಕರ್‌ನಾಗ್‌ ಪುತ್ಥಳಿಗೆ ಹಾಲಿನ ಅಭಿಷೇಕ

Team Udayavani, Sep 17, 2019, 3:02 AM IST

geetha

ಅಭಿಮಾನಿಗಳ ಅಭಿಮಾನವೇ ಅಂಥದ್ದು. ಅದರಲ್ಲೂ ತಮ್ಮ ಪ್ರೀತಿಯ ನಾಯಕನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ ಅಂದಮೇಲೆ ಕೇಳಬೇಕೆ? ಆ ಅಭಿಮಾನ ಎಂದಿಗಿಂತಲೂ ಕೊಂಚ ಜೋರಾಗಿಯೇ ಇರುತ್ತೆ. ಹೌದು, ಇಲ್ಲೀಗ ಹೇಳಹೊರಟಿರುವ ವಿಷಯ. “ಗೀತಾ’ ಚಿತ್ರದ್ದು. ಗಣೇಶ್‌ ಅಭಿನಯದ ಈ ಚಿತ್ರ ಸೆ.27 ರಂದು ತೆರೆಗೆ ಬರುತ್ತಿದೆ. “ಗೀತಾ’ ಅಂದಾಕ್ಷಣ, ನೆನಪಾಗೋದೇ ಶಂಕರ್‌ನಾಗ್‌. ಹಾಗಂತ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ.

ಆದರೆ, ಗಣೇಶ್‌ ಅಭಿನಯದ ಚಿತ್ರಕ್ಕೆ “ಗೀತಾ’ ಅನ್ನೋ ಹೆಸರು ಇಟ್ಟಿರುವ ವಿಷಯ ಕೇಳಿದ ಶಂಕರ್‌ನಾಗ್‌ ಅಭಿಮಾನಿಗಳು ಸಹ ಚಿತ್ರವನ್ನು ನೋಡುವ ಕಾತುರದಲ್ಲಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ ಆಟೋ ಚಾಲಕರು ಅಭಿಮಾನ ಮೆರೆದಿದ್ದಾರೆ ಕೂಡ. ಗೀತಾ ಚಿತ್ರದ ಗಣೇಶ್‌ ಅವರ ಭಾವಚಿತ್ರವನ್ನು ತಮ್ಮ ಆಟೋಗೆ ಅಂಟಿಸಿಕೊಂಡು ಕನ್ನಡ ಬಾವುಟ ಕಟ್ಟಿಕೊಂಡು ಮೆರವಣಿಗೆ ಮಾಡುವ ಮೂಲಕ “ಗೀತಾ’ ಚಿತ್ರದ ಪ್ರಚಾರ ಶುರುಮಾಡಿದ್ದಾರೆ.

ಆಟೋ ಚಾಲಕ ಅಭಿಮಾನಿಗಳು ಶಂಕರ್‌ನಾಗ್‌ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ. ಅತ್ತ, ಆಟೋ ಚಾಲಕರ ಗಣೇಶ್‌ ಅಭಿಮಾನಿಗಳ ಸಂಘದ ಕಾರ್ಯಕರ್ತರು ಕೂಡ ಗಣೇಶ್‌ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಚಿತ್ರಕ್ಕೆ ಶುಭ ಹಾರೈಸುವುದರ ಜೊತೆಗೆ ಕಿಲೋಮೀಟರ್‌ಗಟ್ಟಲೆ ಆಟೋ ಚಲಾಯಿಸುವ ಮೂಲಕ ಮೆರವಣಿಗೆ ನಡೆಸಿ ಅಭಿಮಾನ ಮೆರೆಯುತ್ತಿದ್ದಾರೆ.

ಈಗಾಗಲೇ “ಗೀತಾ’ ಚಿತ್ರಕ್ಕೆ ಪುನೀತ್‌ರಾಜಕುಮಾರ್‌ ಅವರು ಹಾಡಿದ್ದ “ಕನ್ನಡ ಕನ್ನಡ ಕನ್ನಡವೇ ಸತ್ಯ… ಹಾಡಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿತ್ತು. “ಹೇಳದೆ ಕೇಳದೆ..’ ಎಂಬ ಹಾಡು ಕೂಡ ವಿಶೇಷ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಜೇಶ್‌ ಕೃಷ್ಣನ್‌ ಹಾಗೂ ಅನನ್ಯ ಭಟ್‌ ಹಾಡಿದ ಈ ಹಾಡು 1980 ರ ಬ್ಯಾಕ್‌ ಡ್ರಾಪ್‌ನಲ್ಲಿ ಮೂಡಿಬಂದಿದ್ದು, ಗಣೇಶ್‌ ಮತ್ತು ನಾಯಕಿ ಪಾರ್ವತಿ ಆ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಎರಡು ಹಾಡಿನ ಬಳಿಕ ಚಿತ್ರತಂಡ, ಟ್ರೇಲರ್‌ ಬಿಡುಗಡೆ ಮಾಡಿದ್ದು, ಆ ಟ್ರೇಲರ್‌ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ.

ಟ್ರೇಲರ್‌ ನೋಡಿದರೆ, ಮಾಸ್‌ ಮತ್ತು ಕ್ಲಾಸ್‌ ಎರಡು ಅಂಶಗಳ ಜೊತೆಗೆ ಮುದ್ದಾದ ಲವ್‌ಸ್ಟೋರಿ ಹೊಂದಿರುವ ಚಿತ್ರ ಎಂಬುದನ್ನು ಸಾರುತ್ತದೆ. ಅದರಲ್ಲೂ ಇಲ್ಲಿ ಗಣೇಶ್‌ ಅವರು ಅಪ್ಪಟ ಕನ್ನಡ ಹೋರಾಟಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ಅದೇ ಚಿತ್ರದ ಹೈಲೈಟ್‌ಗಳಲ್ಲೊಂದು. ಚಿತ್ರಕ್ಕೆ ಅನೂಪ್‌ ರುಬೆನ್ಸ್‌ ಸಂಗೀತವಿದೆ. ಶ್ರೀಶ ಛಾಯಾಗ್ರಹಣವಿದೆ. ಚಿತ್ರವನ್ನು ಸೈಯ್ಯದ್‌ ಸಲಾಂ ಹಾಗೂ ಶಿಲ್ಪಾ ಗಣೇಶ್‌ ನಿರ್ಮಿಸುತ್ತಿದ್ದಾರೆ. ವಿಜಯ್‌ ನಾಗೇಂದ್ರ ನಿರ್ದೇಶನವಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬೀದರ್‌ ಗೆ ಬೆಂಬಿಡದ ಮಹಾ ಕಂಟಕ

ಬೀದರ್‌ ಗೆ ಬೆಂಬಿಡದ ಮಹಾ ಕಂಟಕ

ಯಾದಗಿರಿ ಐವರಲ್ಲಿ ಸೋಂಕು ಪತ್ತೆ

ಯಾದಗಿರಿ ಐವರಲ್ಲಿ ಕೋವಿಡ್-19 ಸೋಂಕು ಪತ್ತೆ

ಕಲಬುರಗಿಯಲ್ಲಿ ಒಂದೇ ದಿನ 100 ಪಾಸಿಟಿವ್ ಕೇಸ್ ಪತ್ತೆ

ಕಲಬುರಗಿಯಲ್ಲಿ ಒಂದೇ ದಿನ 100 ಪಾಸಿಟಿವ್ ಕೇಸ್ ಪತ್ತೆ

ಔಷಧ ಡೆಲಿವರಿಗೆ ಬಂತು ರೊಬೋಟ್‌ ಕಾರು!  

ಔಷಧ ಡೆಲಿವರಿಗೆ ಬಂತು ರೊಬೋಟ್‌ ಕಾರು!  

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

ರಾಕೆಟ್ ವೇಗದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ರಾಜ್ಯದಲ್ಲಿಂದು ಮತ್ತೆ ಜನರಿಗೆ ಸೋಂಕು ದೃಢ

ರಾಕೆಟ್ ವೇಗದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ರಾಜ್ಯದಲ್ಲಿಂದು 388 ಜನರಿಗೆ ಸೋಂಕು ದೃಢ

17 ವರ್ಷ ಜೈಲು ಶಿಕ್ಷೆ ಬಳಿಕ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಬಿಡುಗಡೆ

17 ವರ್ಷ ಜೈಲು ಶಿಕ್ಷೆ ಬಳಿಕ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

amar rishabh

ಭೂಗತ ಲೋಕದ ಕಥೆಯಲ್ಲಿ ರಿಷಭ್!

push mantra

ಪುಷ್ಕರ್‌ ಮಲ್ಲಿಕಾರ್ಜುನಯ್ಯ ಕೃಷಿ ಮಂತ್ರ!

chitra hosa

ಹೊಸಚಿತ್ರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವ ನಿರ್ದೇಶಕ ನಾಗಶೇಖರ್

jaggi twwee

ಜಗ್ಗೇಶ್ ಹೇಳಿದ ಮೇಕಪ್ ಹಿಂದಿನ ಕಥೆ

ಬೆಂಗಳೂರಿನಲ್ಲಿ ವಿಷ ಸೇವಿಸಿ ಸ್ಯಾಂಡಲ್ ವುಡ್ ನಟಿ ಚಂದನ ಅತಹತ್ಯೆ

ಬೆಂಗಳೂರಿನಲ್ಲಿ ವಿಷ ಸೇವಿಸಿ ಸ್ಯಾಂಡಲ್ ವುಡ್ ನಟಿ ಚಂದನ ಆತ್ಮಹತ್ಯೆ

MUST WATCH

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

ಹೊಸ ಸೇರ್ಪಡೆ

ಬೀದರ್‌ ಗೆ ಬೆಂಬಿಡದ ಮಹಾ ಕಂಟಕ

ಬೀದರ್‌ ಗೆ ಬೆಂಬಿಡದ ಮಹಾ ಕಂಟಕ

ಯಾದಗಿರಿ ಐವರಲ್ಲಿ ಸೋಂಕು ಪತ್ತೆ

ಯಾದಗಿರಿ ಐವರಲ್ಲಿ ಕೋವಿಡ್-19 ಸೋಂಕು ಪತ್ತೆ

ಕಲಬುರಗಿಯಲ್ಲಿ ಒಂದೇ ದಿನ 100 ಪಾಸಿಟಿವ್ ಕೇಸ್ ಪತ್ತೆ

ಕಲಬುರಗಿಯಲ್ಲಿ ಒಂದೇ ದಿನ 100 ಪಾಸಿಟಿವ್ ಕೇಸ್ ಪತ್ತೆ

ಔಷಧ ಡೆಲಿವರಿಗೆ ಬಂತು ರೊಬೋಟ್‌ ಕಾರು!  

ಔಷಧ ಡೆಲಿವರಿಗೆ ಬಂತು ರೊಬೋಟ್‌ ಕಾರು!  

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.