ಅಯೋಗ್ಯ ಟೈಟಲ್ ಸಾಂಗ್ ಬಂತು
Team Udayavani, Jul 24, 2018, 11:06 AM IST
ಸತೀಶ್ ನೀನಾಸಂ ನಾಯಕರಾಗಿರುವ “ಅಯೋಗ್ಯ’ ಚಿತ್ರದ “ಏನಮ್ಮಿ ಏನಮ್ಮಿ’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರೋದು ನಿಮಗೆ ಗೊತ್ತೆ ಇದೆ. ಆ ಖುಷಿಯಲ್ಲೇ ಚಿತ್ರತಂಡ ಈಗ ಮತ್ತೂಂದು ಹಾಡನ್ನು ಬಿಡುಗಡೆ ಮಾಡಿದೆ.
ಅದು ಚಿತ್ರದ ಟೈಟಲ್ ಸಾಂಗ್. “ಟಗರು’ ಖ್ಯಾತಿಯ ಅಂಥೋನಿ ದಾಸ್ ಹಾಡಿರುವ ಈ ಹಾಡನ್ನು ಇತ್ತೀಚೆಗೆ ಅಂಬರೀಶ್ ಅವರು ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಕಾವೇರಿ, ಮಂಡ್ಯ ಸಂಸ್ಕೃತಿ ಹಾಗೂ ಅಂಬರೀಶ್ ಅವರ ಕುರಿತಾದ ಸಾಲುಗಳಿರುವುದರಿಂದ ಚಿತ್ರತಂಡ ಅವರಿಂದಲೇ ಬಿಡುಗಡೆ ಮಾಡಿಸಿದೆ.
ಈ ಹಾಡಿಗೂ ಮೆಚ್ಚುಗೆ ವ್ಯಕ್ತವಾಗುತ್ತಿರುವುದರಿಂದ ಚಿತ್ರತಂಡ ಖುಷಿಯಾಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಸತೀಶ್-ರಚಿತಾ ಜೋಡಿಯಾಗಿರುವ ಈ ಚಿತ್ರವನ್ನು ಮಹೇಶ್ ನಿರ್ದೇಶಿಸಿದ್ದು, ಕ್ರಿಸ್ಟಲ್ ಪಾರ್ಕ್ ಬ್ಯಾನರ್ನಡಿ ಟಿ.ಆರ್.ಚಂದ್ರಶೇಖರ್ ನಿರ್ಮಿಸಿದ್ದಾರೆ.