ಅಯೋಗ್ಯನ ಗೊಂದಲ!

Team Udayavani, Jun 27, 2018, 10:55 AM IST

ಕನ್ನಡದ ಸಾಕಷ್ಟು ಚಿತ್ರಗಳು ಶೀರ್ಷಿಕೆ ಗೊಂದಲಕ್ಕೆ ಸಿಲುಕಿರುವುದು ಹೊಸತೇನಲ್ಲ. ಆ ಸಾಲಿಗೆ “ಅಯೋಗ್ಯ’ವೂ ಸೇರಿದೆ. ಇಷ್ಟಕ್ಕೂ “ಅಯೋಗ್ಯ’ನ ಸಮಸ್ಯೆ ಏನು ಗೊತ್ತಾ? ಚಿತ್ರದ ಅಡಿಬರಹ. ಹೌದು, “ಗ್ರಾಮ ಪಂಚಾಯಿತಿ ಸದಸ್ಯ’ ಎಂಬ ಅಡಿಬರಹವೇ ಇಷ್ಟಕ್ಕೆಲ್ಲಾ ಕಾರಣ. “ಅಯೋಗ್ಯ’ ಶೀರ್ಷಿಕೆ ಕೆಳಗೆ “ಗ್ರಾಮ ಪಂಚಾಯಿತಿ ಸದಸ್ಯ’ ಎಂದು ಇಟ್ಟಿದ್ದೇ ತಡ, ಮೈಸೂರು ಭಾಗದ ಕೆಲ ಕನ್ನಡ ಪರ ಸಂಘಟನೆಗಳು ಮತ್ತು ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಆಕ್ಷೇಪಿಸಿದ್ದಾರೆ.

ಕೊನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಬಂದು ದೂರು ಕೊಟ್ಟಿದ್ದಾರೆ. ಪ್ರಮುಖವಾಗಿ, “ಅಯೋಗ್ಯ’ ಶೀರ್ಷಿಕೆಗಿರುವ “ಗ್ರಾಮ ಪಂಚಾಯಿತಿ ಸದಸ್ಯ’ ಅಡಿಬರಹವನ್ನು ಕಿತ್ತು ಹಾಕಬೇಕು. ಇಲ್ಲದೇ ಹೋದರೆ, ಪ್ರತಿಭಟನೆ ಮಾಡುವುದರ ಜೊತೆಗೆ ಸಿನಿಮಾ ಬಿಡುಗಡೆಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಯಾವಾಗ ಜೋರು ಮಾಡಿದರೋ, ಆಗ ತಕ್ಷಣ ಎಚ್ಚೆತ್ತುಕೊಂಡ ಚಿತ್ರತಂಡವು ಚಿತ್ರದ ಅಡಿಬರಹ ಬದಲಿಸಿದೆ.

ಹಾಗಂತ ಅಡಿಬರಹದಲ್ಲಿ ಯಾವುದೇ ವ್ಯತ್ಯಾಸವಿಲ್ಲ. “ಅಯೋಗ್ಯ’ ಆ್ಯಂಡ್‌ “ಗ್ರಾಮ ಪಂಚಾಯಿತಿ ಸದಸ್ಯ’ ಎಂದಷ್ಟೇ ಇಟ್ಟುಕೊಂಡಿದೆ. ಇದನ್ನೇ ಬದಲಾವಣೆ ಮಾಡಲಾಗಿದೆ ಅಂತ ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌, ನಿರ್ದೇಶಕ ಮಹೇಶ್‌, ನಾಯಕ ನೀನಾಸಂ ಸತೀಶ್‌ ಅವರೊಂದಿಗೆ ಪತ್ರಕರ್ತರ ಮುಂದೆ ಕುಳಿತು ಸ್ಪಷ್ಟನೆ ಕೊಟ್ಟರು. ಇಷ್ಟೆಲ್ಲಾ ಯಾಕೆ? “ಅಯೋಗ್ಯ’ ಅಂತ ಇದ್ದರೆ ಸಾಕು. “ಗ್ರಾಮ ಪಂಚಾಯಿತಿ ಸದಸ್ಯ’ ಪದ ಬಳಕೆ ಮಾಡಿದ್ದು ಎಷ್ಟು ಸರಿ?

ಈ ಪ್ರಶ್ನೆಗೆ, ನಾಯಕ ಸತೀಶ್‌, ನಿರ್ದೇಶಕ ಮಹೇಶ್‌ ತಮ್ಮದೇ ವ್ಯಾಖ್ಯಾನ ಮಾಡಿದರು. ಅದೇ ಬೇರೆ ಇದೇ ಬೇರೆ ಅಂತೆಲ್ಲಾ ಹೇಳಿಕೊಂಡರು. “ಅಯೋಗ್ಯ’ ಶೀರ್ಷಿಕೆ ಮಾತ್ರ ನೋಂದಣಿಯಾಗಿದೆ. “ಗ್ರಾಮ ಪಂಚಾಯಿತಿ ಸದಸ್ಯ’ ಎಂಬುದು ಶೀರ್ಷಿಕೆ ಅಲ್ಲ, ಅದು ಅಡಿಬರಹವಷ್ಟೇ ಆದರೂ, ಸದಸ್ಯರಿಗೆ ಬೇಸರ ಆಗಬಾರದು ಅಂತ “ಅಯೋಗ್ಯ ಮತ್ತು ಗ್ರಾಮ ಪಂಚಾಯಿತಿ ಸದಸ್ಯ’ ಅಂತ ಇಡುವುದಾಗಿ ನಿರ್ದೇಶಕ ಮಹೇಶ್‌ ಹೇಳಿಬಿಟ್ಟರು.

“ಅಯೋಗ್ಯ ಮತ್ತು ಗ್ರಾಮ ಪಂಚಾಯಿತಿ ಸದಸ್ಯ’ ಒಂದೇ ಪದ ಆಗಿರುವುದರಿಂದ ಅದನ್ನೂ ನೋಂದಣಿ ಮಾಡಿಸಿ ಎಂಬ ಪತ್ರಕರ್ತರ ಸಲಹೆಗೆ ಒಪ್ಪಿಕೊಂಡ “ಅಯೋಗ್ಯ’ ತಂಡ ಮಂಡಳಿಯಲ್ಲಿ ನೋಂದಣಿ ಮಾಡಿಸುವುದಾಗಿ ಹೇಳಿಕೊಂಡಿತು. ಅಂದಹಾಗೆ, ಈ ಚಿತ್ರವನ್ನು ರಿಲೀಸ್‌ ಮಾಡುವ ಮುನ್ನ, ರಾಜ್ಯದ ಆಯ್ದ ನೂರು ಗ್ರಾಮ ಪಂಚಾಯಿತಿ ಸದಸ್ಯರಿಗೆ ತೋರಿಸುವ ಯೋಚನೆ ಚಿತ್ರತಂಡಕ್ಕಿದೆ. ಅವರು ಚಿತ್ರ ನೋಡಿದ ಬಳಿಕ ಚಿತ್ರಕ್ಕೆ ಯಾಕೆ ಅಡಿಬರಹ ಇಡಲಾಗಿದೆ ಅನ್ನೋದು ಗೊತ್ತಾಗುತ್ತೆ ಅಂತ ಹೇಳಿಕೊಂಡು, “ಅಯೋಗ್ಯ’ನ ಗೊಂದಲದ ಮಾತುಕತೆಗೆ ಬ್ರೇಕ್‌ ಬಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ