ನನ್ನ ಸಿನಿ ಕೆರಿಯರ್‌ನಲ್ಲಿ ಅಯೋಗ್ಯ ಮೈಲಿಗಲ್ಲು

Team Udayavani, Jul 30, 2018, 11:40 AM IST

ನೀನಾಸಂ ಸತೀಶ್‌ ಈಗ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, “ಅಯೋಗ್ಯ’. ಹೌದು, ಟಿ.ಆರ್‌. ಚಂದ್ರಶೇಖರ್‌ ನಿರ್ಮಿಸಿ, ಎಸ್‌. ಮಹೇಶ್‌ ಕುಮಾರ್‌ ನಿರ್ದೇಶಿಸಿರುವ “ಅಯೋಗ್ಯ’, ಒಂದರ ಮೇಲೊಂದು ದಾಖಲೆ ಮಾಡಿದೆ. ಅದೇ ಸತೀಶ್‌ ಖುಷಿಗೆ ಕಾರಣ. ಅಷ್ಟಕ್ಕೂ ಆ ದಾಖಲೆ ಏನು, ಎತ್ತ, ಇತ್ಯಾದಿ ಕುರಿತು “ಚಿಟ್‌ಚಾಟ್‌’ನಲ್ಲಿ ಮಾತನಾಡಿದ್ದಾರೆ.

* “ಅಯೋಗ್ಯ’ನದು ಹೊಸ ದಾಖಲೆಯಂತೆ ಹೌದಾ?
ಹೌದು, ಅದಕ್ಕೆ ಹಲವು ಕಾರಣಗಳು. “ಏನಮ್ಮಿ, ಏನಮ್ಮಿ’ ಹಾಡು ಡಬ್‌ಸ್ಮ್ಯಾಷ್‌ನಲ್ಲಿ ದಾಖಲೆ ಬರೆದಿದೆ. ಇದುವರೆಗೆ ಹದಿನಾರುವರೆ ಸಾವಿರ ಡಬ್‌ಸ್ಮ್ಯಾಷ್‌ ಆಗಿದ್ದು ವಿಶೇಷ. ಆನಂದ್‌ ಆಡಿಯೋ ಸಂಸ್ಥೆ ಪ್ರಕಾರ, ಕನ್ನಡದಲ್ಲಿ ಈ ಹಾಡಿಗೆ ಆದಂತಹ ಡಬ್‌ಸ್ಮ್ಯಾಷ್‌ ಬೇರೆ ಯಾವ ಹಾಡಿಗೂ ಆಗಿಲ್ಲ. ಅದೂ ಕಡಿಮೆ ಅವಧಿಯಲ್ಲಿ. “ಹಿಂದೆ ಹಿಂದೆ ಹೋಗು’ ಹಾಡು ಸಹ ಒಂದೇ ದಿನದಲ್ಲಿ ಒನ್‌ ಮಿಲಿಯನ್‌ ಆಗಿದೆ.

ಅದು ಹೊಸ ದಾಖಲೆ. ನನ್ನ ಹಿಂದಿನ ಚಿತ್ರಗಳ ಹಾಡುಗಳೂ ಸದ್ದು ಮಾಡಿದ್ದವು. ಆದರೆ, ಈ ಲೆವೆಲ್‌ಗೆ ಆಗಿರಲಿಲ್ಲ. ಈ ಚಿತ್ರ ನನ್ನನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುತ್ತೆ. ಸಾಮಾನ್ಯವಾಗಿ ಚಿತ್ರದ ಒಂದು ಹಾಡು ಹಿಟ್‌ ಆಗುವುದುಂಟು. ಆದರೆ, ಇಲ್ಲಿ ಎರಡು ಹಾಡು ಹಿಟ್‌ ಆಗಿದೆ. ಅದೂ ದಾಖಲೆ. ಇಂಡಿಯಾದಲ್ಲೇ ಜಿಯೋ ಮ್ಯೂಸಿಕ್‌ನಲ್ಲಿ ಟಾಪ್‌ 4ನಲ್ಲಿದೆ. ರಾಜ್ಯದಲ್ಲಿ ಟಾಪ್‌ ಒಂದರಲ್ಲಿದೆ. ಇದು ಖುಷಿ ಹೆಚ್ಚಿಸಿದೆ.

* ನಿಮ್ಮ ಕೆರಿಯರ್‌ನಲ್ಲಿ “ಅಯೊಗ್ಯ’ ಎಷ್ಟು ಪ್ರಮುಖ ಪಾತ್ರ ವಹಿಸುತ್ತೆ?
ನನ್ನ ಕೆರಿಯರ್‌ನಲ್ಲಿ “ಅಯೋಗ್ಯ’ ದೊಡ್ಡ ಮೈಲಿಗಲ್ಲು. ನನಗಷ್ಟೇ ಅಲ್ಲ, ಅದು ನನ್ನ ತಂಡ ಮತ್ತು ವಿತರಕರಿಗೂ ಕೂಡ. ಮೊದಲಿಗೆ ಇದು ಅಪ್ಪಟ ದೇಸಿ ಚಿತ್ರ. ಎಲ್ಲೂ ಕಾಣದ, ಕೇಳದ ಕಥೆ ಇಲ್ಲಿದೆ. ಎಲ್ಲೂ ಕದಿಯದ, ಸ್ಫೂರ್ತಿ ಪಡೆಯದ ಚಿತ್ರಣ ಇಲ್ಲಿದೆ. ಚಿತ್ರ ನೋಡಿದಾಗ, ಪ್ರತಿಯೊಬ್ಬರೂ ತನ್ನ ಲೈಫ್ಸ್ಟೋರಿನೇ ಅಂದುಕೊಳ್ಳುವಂತಿದೆ. ಈ ಚಿತ್ರವನ್ನು ನಾನು ಸುಮಾರು ಹದಿನೈದು ಸಲ ನೋಡಿದ್ದೇನೆ. ಎಲ್ಲೂ ಬೋರ್‌ ಎನಿಸಿಲ್ಲ. ಕಂಟೆಂಟ್‌ ಫ್ರೆಶ್‌ ಆಗಿರುವುದೇ ಜೀವಾಳ. ಹಾಡುಗಳು ಈ ಪರಿ ಹಿಟ್‌ ಆಗಿರುವುದರಿಂದ ಚಿತ್ರವೂ ಹೊಸ ದಾಖಲೆ ಬರೆಯುತ್ತೆ ಎಂಬ ವಿಶ್ವಾಸ ನನ್ನದು.
 
* “ಅಯೋಗ್ಯ’ನ ಮೇಲೆ ನಿರೀಕ್ಷೆ ಎಷ್ಟಿದೆ?
ಹಿನ್ನೆಲೆ ಸಂಗೀತ ಮಾಡಿರುವ ಅರ್ಜುನ್‌ ಜನ್ಯ ಹೇಳಿದ್ದಿಷ್ಟು. “ಸತೀಶ್‌, ನೀವು ಅರಾಮವಾಗಿರಿ. ಟೆನÒನ್‌ ಮಾಡ್ಕೊàಬೇಡಿ, ಹಾಯಾಗಿ ನಿದ್ದೆ ಮಾಡಿ’ ಅಂತ. ಹಾಡುಗಳಿಗೆ ಜನರು ಕೊಟ್ಟ ತೀರ್ಪು ನೋಡಿ ನಿರೀಕ್ಷೆ ಹೆಚ್ಚಿದೆ. ನಾನು ಯಾವ ಚಿತ್ರದ ಮೇಲೂ ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿಲ್ಲ. ಇದು ಹೊಸ ಪವಾಡ ಸೃಷ್ಟಿಸುತ್ತೆ ಎಂಬ ನಂಬಿಕೆಯಂತೂ ಇದೆ.

* ಮೊದಲ ಸಲ ರಚಿತಾರಾಮ್‌ ಜೊತೆಗಿನ ಹೇಗಿತ್ತು?
ರಚಿತಾರಾಮ್‌ ಒಳ್ಳೇ ನಟಿ. ಅವರು ಇದೇ ಮೊದಲ ಸಲ ಸಂಪೂರ್ಣ ಮಂಡ್ಯ ಭಾಷೆ ಮಾತಾಡಿದ್ದಾರೆ. ಅದರಲ್ಲೂ, ಬೆಂಗಳೂರು ಹುಡುಗಿಯರಿಗೆ ಮಂಡ್ಯ ಭಾಷೆ ಹಿಡಿಯೋದು ಕಷ್ಟ. ಅವರು ಹಠ ಮಾಡಿ, ನಾನೇ ಮಂಡ್ಯ ಭಾಷೆಯಲ್ಲೇ ಡಬ್‌ ಮಾಡ್ತೀನಿ ಅಂತ ಹಠ ಮಾಡಿ ಡಬ್ಬಿಂಗ್‌ ಮಾಡಿದ್ದಾರೆ. ಒಬ್ಬ ಹಳ್ಳಿ ಹುಡುಗಿಯಾಗಿ, ಥೇಟ್‌ ಪಕ್ಕದ್ಮನೆ ಹುಡುಗಿಯಂತೆ ಕಾಣುತ್ತಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಎಷ್ಟೋ ಸಲ ಡೈಲಾಗ್‌ ಕುರಿತು ಚರ್ಚಿಸಿ, ನಟಿಸಿದ್ದೇವೆ.

* ಪೋಸ್ಟರ್‌ನಲ್ಲಿ ಕಲರ್‌ಫ‌ುಲ್‌ ಗೆಟಪ್‌ ಇದೆ, ಚಿತ್ರವೂ ಹಾಗೇನಾ?
ಇಡೀ ಚಿತ್ರವೇ ಕಲರ್‌ಫ‌ುಲ್‌ ಆಗಿರಲಿದೆ. ಹೀರೋ, ಸದಾ ಕಲರ್‌ಫ‌ುಲ್‌ ಮನುಷ್ಯ. ಪಾಸಿಟಿವ್‌ ಎನರ್ಜಿ ಇರುವಂಥವನು. ನಗುವಲ್ಲೇ ಎಲ್ಲವನ್ನು ಗೆಲಲ್ಲು ಪ್ರಯತ್ನ ಪಡುವಂಥವನು. ಹಾಗಾಗಿ ಚಿತ್ರದುದ್ದಕ್ಕೂ ಕಲರ್‌ಫ‌ುಲ್‌ ಆಗಿಯೇ, ಚಿತ್ರವನ್ನೂ ರಂಗಾಗಿಸುತ್ತ ಹೋಗುತ್ತಾನೆ. ಹಾಗಾಗಿ, ಚಿತ್ರ ಅಪ್ಪಟ ರಂಗಿನ ಮನರಂಜನಾತ್ಮಕ ಚಿತ್ರ.

* ಅಯೋಗ್ಯನ ಉದ್ದೇಶ ಏನು?
ಎಲ್ಲರೂ ತಿಳಿದುಕೊಂಡಂತೆ, ಈ ಅಯೋಗ್ಯ ಕೆಟ್ಟವನಲ್ಲ. ಈ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ಹೇಳಲು ಹೊರಟಿದ್ದಾನೆ. ನಮ್ಮ ಜವಾಬ್ದಾರಿ ಎಷ್ಟಿದೆ ಎಂಬುದನ್ನು ತಿಳಿ ಹೇಳುವ ಪ್ರಯತ್ನ ಅವನದು. ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿ, ಇಷ್ಟೆಲ್ಲಾ ಸಮಸ್ಯೆ ಇದೆಯಾ? ಆ ಸಮಸ್ಯೆಗೆ ಹೀಗೆಲ್ಲಾ ಪರಿಹಾರವಿದೆಯಾ ಎಂಬುದನ್ನು ತಿಳಿದುಕೊಳ್ಳುವಷ್ಟು ಮಟ್ಟಿಗೆ ಅಯೋಗ್ಯನ ಪಾತ್ರವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ