ಬಬ್ರೂ ಜೊತೆ ಮತ್ತೆ ಬಂದ ಬೆಳದಿಂಗಳ ಬಾಲೆ!

Team Udayavani, Dec 2, 2019, 7:32 PM IST

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ನಿಷ್ಕರ್ಷ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಸುಮನ್ ನಗರ್‌ಕರ್. ಆ ನಂತರದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದರೂ ಅವರು ಕನ್ನಡಿಗರ ಮನಸುಗಳಲ್ಲಿ ಹಸಿರಾಗಿರೋದು ಬೆಳದಿಂಗಳ ಬಾಲೆಯಾಗಿಯೇ. ಹೀಗೆ ತಾವು ನಟಿಸಿದ ಸಿನಿಮಾ ಪಾತ್ರಗಳ ಮೂಲಕವೇ ಕನ್ನಡದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಸುಮನ್ ಇದೀಗ ಬಬ್ರೂ ಜೊತೆಗೆ ಮತ್ತೆ ಬಂದಿದ್ದಾರೆ. ಈ ಸಿನಿಮಾ ನಿರ್ಮಾಣದ ಜವಾಬ್ದಾರಿಯೊಂದಿಗೆ ಪ್ರಧಾನ ಪಾತ್ರದ ಮೂಲಕ ಮತ್ತೆ ತಮ್ಮ ಪ್ರೀತಿಯ ಪ್ರೇಕ್ಷಕರನ್ನು ಭೇಟಿಯಾಗ ಬಂದಿದ್ದಾರೆ.

ಯುಗ ಕ್ರಿಯೇಷನ್ಸ್ ಹಾಗೂ ಸುಮನ್‌ನಗರ್‌ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಇದೇ ಡಿಸೆಂಬರ್ 6ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಕನ್ನಡ ಸಿನಿಮಾಗಳು ಬಾಲಿವುಡ್, ಹಾಲಿವುಡ್ ರೇಂಜಿಗಿರಬೇಕೆಂಬ ಆಸೆ ಪ್ರತೀ ಪ್ರೇಕ್ಷಕರಲ್ಲಿಯೂ ಇದೆ. ಇತ್ತೀಚಿನ ದಿನಗಳಲ್ಲಿ ಅಂಥಾ ಆಸೆಗಳೆಲ್ಲವೂ ಹಂತ ಹಂತವಾಗಿ ನೆರವೇರಿಕೊಳ್ಳುತ್ತಿವೆ. ಆದರೆ ಈ ಸಿನಿಮಾ ಥೇಟೆ ಹಾಲುವುಡ್ ಮೂವಿಯಂತೆಯೇ ಮೂಡಿ ಬಂದಿದೆ. ಸಂಪೂರ್ಣವಾಗಿ ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡ ಏಕೈಕ ಚಿತ್ರವೆಂಬ ಮಹಾ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ.

ಈ ಚಿತ್ರದಲ್ಲಿ ಸುಮನ್ ನಗರರ್‌ಕರ್ ಚೆಂದದ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊನ್ನೆ ಬಿಡುಗಡೆಗೊಂಡಿರುವ ಟ್ರೇಲರ್‌ನಲ್ಲಿ ಅದರ ಒಂದಷ್ಟು ಗುಣ ಲಕ್ಷಣಗಳು ಕಾಣಿಸಿವೆ. ಅವರು ಈ ವರೆಗೇ ಹಲವಾರು ನೆನಪಿಟ್ಟುಕೊಳ್ಳುವಂಥಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅದರಲ್ಲಿ ಬಬ್ರೂ ಪಾತ್ರವೂ ಸೇರಿಕೊಳ್ಳಲಿದೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ. ನಿಷ್ಕರ್ಷ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಆ ನಂತರದಲ್ಲಿ ಸುಮನ್ ಬಹು ಬೇಡಿಕೆಯ ನಟಿಯಾಗಿ ಮಿಂಚಿದ್ದರು. ನಂತರ ನಮ್ಮೂರ ಮಂದಾರ ಹೂವೆ, ಬೆಳದಿಂಗಳ ಬಾಲೆ ಚಿತ್ರಗಳು ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಸುಜಯ್ ರಾಮಯ್ಯ ನಿರ್ದೇಶನದ ಈ ಚಿತ್ರ ಕೂಡಾ ಸುಮನ್ ನಗರ್‌ಕರ್ ಅವರ ಹಿಟ್ ಯಾನದಲ್ಲೊಂದಾಗಿ ದಾಖಲಾಗೋ ಲಕ್ಷಣಗಳಿದ್ದಾವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ