ವಿದೇಶೀ ನೆಲದಲ್ಲಿ ಮಿಂಚಿದ ಬಬ್ರೂ!

Team Udayavani, Dec 4, 2019, 6:42 PM IST

ಸುಜಯ್ ರಾಮಯ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಬ್ರೂ ಚಿತ್ರ ಇದೇ ಡಿಸೆಂಬರ್ ೬ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಸುಮನ್ ನಗರ್‌ಕರ್ ನಿರ್ಮಾಣ ಮಾಡಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಬಿಡುಗಡೆಗೆ ಮುನ್ನವೇ ಹಲವಾರು ದಾಖಲೆಗಳನ್ನು ಮಾಡಿದೆ. ಆದರೆ ಅದು ಅಮೆರಿಕಾ ನೆಲದಲ್ಲಿ ಮಿಂಚಿದ ರೀತಿ ಮಾತ್ರ ಕನ್ನಡ ಚಿತ್ರರಂಗದ ಘನತೆಯನ್ನು ವಿಶ್ವ ಮಟ್ಟದಲ್ಲಿಯೂ ಮಿರುಗಿಸಿದೆ. ಸಂಪೂರ್ಣವಾಗಿ ಅಮೆರಿಕಾದಲ್ಲಿಯೇ ಚಿತ್ರೀಕರಣಗೊಂಡು ಜರ್ನಿ ಕಥೆಯನ್ನೊಳಗೊಂಡಿರುವ ಈ ಚಿತ್ರ ಅಮೆರಿಕಾದ ಸಿನಿ ಲಾಂಚ್‌ನಲ್ಲಿ ಪ್ರೀಮಿಯರ್ ಶೋ ಪೂರೈಸಿಕೊಂಡಿದೆ. ಆ ಸಂದರ್ಭದಲ್ಲಿ ನೋಡುಗರ ಕಡೆಯಿಂದ ಸಿಕ್ಕಿರುವ ಸದಭಿಪ್ರಾಯದ ಮಾತುಗಳೇ ಚಿತ್ರತಂಡವನ್ನು ಗೆಲುವಿನ ಅಲೆಯಲ್ಲಿ ಮಿಂದೇಳುವಂತೆ ಮಾಡಿದೆ.

ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್‌ನಗರ್‌ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ಬಬ್ರೂ ನಿರ್ಮಾಣಗೊಂಡಿದೆ. ಇಲ್ಲಿ ಸುಮನ್ ನಗರ್‌ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದು ನವೆಂಬರ್ ೨ನೇ ತಾರೀಕಿನಂದು ಅಮೆರಿಕದ ಅತ್ಯಂತ ಪ್ರತಿಷ್ಠಿತವಾದ ಸಿನಿ ಲಾಂಚ್‌ನಲ್ಲಿ ಪ್ರದರ್ಶನ ಕಂಡಿದೆ. ಅಲ್ಲಿನ ಏಳೂ ದೊಡ್ಡ ತೆರೆಗಳಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರದ ಟಿಕೆಟುಗಳು ಕೂಡಾ ಅಚ್ಚರಿದಾಯಕವಾಗಿ ಸೇಲ್ ಆಗಿದ್ದವು. ಆ ಏಳೂ ತೆರೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣೋ ಮೂಲಕ ಬಬ್ರೂ ಕೀರ್ತಿ ಪತಾಕೆ ಹಾರಿಸಿದ್ದಾನೆ.

ಅಮೆರಿಕಾದ ಸಿನಿ ಲಾಂಚ್‌ನಲ್ಲಿ ಈ ಪಾಟಿ ಪ್ರದರ್ಶನ ಕಂಡ ಮೊದಲ ಕನ್ನಡ ಚಿತ್ರವಾಗಿಯೂ ಬಬ್ರೂ ದಾಖಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಬಬ್ರೂ ತನ್ನ ಪ್ರತೀ ಹೆಜ್ಜೆಗಳಲ್ಲಿಯೂ ಕನ್ನಡ ಚಿತ್ರರಂಗದ ಘನತೆ ಹೆಚ್ಚಿಸುವ ರೀತಿಯಲ್ಲಿಯೇ ಮುಂದುವರೆಯುತ್ತಿದೆ. ಹೀಗೆ ಸಿನಿ ಲಾಂಚ್‌ನಲ್ಲಿ ಈ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ. ಹೀಗೆ ಎಲ್ಲ ಹಂತಗಳನ್ನೂ ದಾಖಲೆಗಳಿಂದಲೇ ಸಮೃದ್ಧಗೊಳಿಸಿಕೊಳ್ಳುತ್ತಾ ಬಂದಿರುವ ಈ ಚಿತ್ರ ಡಿಸೆಂಬರ್ ೬ರಂದು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್‌ಗೆ ಸಿಗುತ್ತಿರೋ ಪ್ರತಿಕ್ರಿಯೆಗಳೇ ಬಬ್ರೂ ಗೆಲುವನ್ನು ನಿಚ್ಚಳವಾಗಿಸುವಂತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನಟ ನಿಖೀಲ್‌ ಕುಮಾರ್‌ ಅಭಿನಯದ "ಜಾಗ್ವಾರ್‌' ಚಿತ್ರದಲ್ಲಿ ಬೋಲ್ಡ್‌ ಆಗಿ ಅಭಿನಯಿಸಿ ಸಿನಿ ಪ್ರಿಯರ ಗಮನ ಸೆಳೆದಿದ್ದ ನಾಯಕ ನಟಿ ದೀಪ್ತಿ ಸತಿ, ಈಗ ಮತ್ತೂಂದು ಚಿತ್ರದ...

  • ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಮಿಂಚಿರುವ ಭಾಮಾ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಕೇರಳದ ಮೂಲದ ಭಾಮಾ...

  • ಕನ್ನಡದಲ್ಲಿ ನೈಜ ಘಟನೆ ಕುರಿತ ಅನೇಕ ಚಿತ್ರಗಳು ಬಂದು ಹೋಗಿವೆ. ಆ ಸಾಲಿಗೆ ಈಗ "ನಾನು ಮತ್ತು ಗುಂಡ' ಚಿತ್ರವೂ ಸೇರಿದೆ. ಹೌದು, ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ,...

  • "ಬೆಂಕಿಯಲ್ಲಿ ಅರಳಿದ ಹೂವು...' ಬಹುಶಃ ಈ ಶೀರ್ಷಿಕೆ ಓದಿದಾಗ ನೆನಪಾಗೋದೇ ನಟಿ ಸುಹಾಸಿನಿ ಹಾಗು ಕಮಲಹಾಸನ್‌ ಕಣ್ಣ ಮುಂದೆ ಹಾದು ಹೋಗುತ್ತಾರೆ. ಕೆ.ಬಾಲಚಂದರ್‌ ನಿರ್ದೇಶನದ...

  • "ಪ್ರತಿಯೊಬ್ಬರೂ ಪ್ರೀತಿಸಿ. ಪ್ರೀತಿಸಿಲ್ಲ ಅಂದರೆ, ಪ್ರೀತಿಸಲು ಪ್ರಯತ್ನಿಸಿ. ಪ್ರೀತಿ ಮಾಡಿಲ್ಲ ಅಂದರೆ, ಜೀವನದಲ್ಲಿ ಏನನ್ನೋ ಕಳೆದುಕೊಳ್ಳುತ್ತೀರಾ. ಎಲ್ಲದ್ದಕ್ಕೂ...

ಹೊಸ ಸೇರ್ಪಡೆ