ಡಾಲಿ ಸ್ನೇಹಕ್ಕೆ ಸಾಕ್ಷಿಯಾದ ‘ಬಡವ ರಾಸ್ಕಲ್’
Team Udayavani, Dec 21, 2021, 11:06 AM IST
ಧನಂಜಯ್ ಮೊದಲ ಬಾರಿಗೆ ನಿರ್ಮಿಸಿರುವ “ಬಡವ ರಾಸ್ಕಲ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿ.24ರಂದು ತೆರೆಕಾಣಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು, ಟೀಸರ್, ಟ್ರೇಲರ್ ಎಲ್ಲವೂ ಹಿಟ್ಲಿಸ್ಟ್ ಸೇರಿದೆ.
ಇದೇ ಖುಷಿಯಲ್ಲಿದ್ದ ನಾಯಕ ಧನಂಜಯ್ ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಇವೆಂಟ್ ಆಯೋಜಿಸಿದ್ದರು. ಈ ಇವೆಂಟ್ ಕೇವಲ ಒಂದು ಸಿನಿಮಾ ಕಾರ್ಯಕ್ರಮವಾಗದೇ, ಡಾಲಿ ಧನಂಜಯ್ ಅವರ ಸ್ನೇಹಕ್ಕೆ ಸಾಕ್ಷಿಯಾಯಿತು. ಚಿತ್ರರಂಗದ ಬಹುತೇಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ “ಬಡವ ರಾಸ್ಕಲ್’ಗೆ ಶುಭಕೋರಿದರು.
ಇದನ್ನೂ ಓದಿ:ಯುಎಇನಲ್ಲಿ ಇನ್ನು ಸೆನ್ಸಾರ್ ಫ್ರೀ; 21 ವರ್ಷ ಮೇಲ್ಪಟ್ಟವರಿಗೆ ವೀಕ್ಷಣೆಯ ಹೊಸ ವ್ಯವಸ್ಥೆ
ನಟ ಶಿವರಾಜ್ಕುಮಾರ್, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ವಸಿಷ್ಠ ಸಿಂಹ, ನಟಿ ರಚಿತಾ ರಾಮ್, ನಿಧಿ ಸುಬ್ಬಯ್ಯ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ನಿರ್ಮಾಪಕ, ನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಧನಂಜಯ್ ಅವರ ಶ್ರಮ, ಕನಸಿನ ಬಗ್ಗೆ ಮಾತನಾಡಿದರು.
ಎಲ್ಲರ ಮಾತಲ್ಲೂ”ಬಡವ ರಾಸ್ಕಲ್’ ಬಗೆಗಿನ ಕುತೂಹಲ ಎದ್ದು ಕಾಣುತ್ತಿತ್ತು. ಶಿವರಾಜ್ಕುಮಾರ್ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ಮೈಸೂರಿನಲ್ಲಿ ನೋಡುವುದಾಗಿ ಹೇಳಿದರು. “ಬಡವ ರಾಸ್ಕಲ್’ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದು, ಅಮೃತಾ ಅಯ್ಯಂಗಾರ್ ನಾಯಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು