ಬಾದ್‌ಷಾ ಬದಲು ಬೇರೆ ಸಿನಿಮಾ ಮಾಡ್ತೀವಿ

Team Udayavani, Jan 2, 2019, 5:49 AM IST

ಶಿವರಾಜಕುಮಾರ್‌ ಹಾಗೂ ನಿರ್ದೇಶಕ ಆರ್‌.ಚಂದ್ರು ಕಾಂಬಿನೇಶನ್‌ನಲ್ಲಿ “ಬಾದ್‌ಷಾ’ ಎಂಬ ಸಿನಿಮಾ ಅನೌನ್ಸ್‌ ಆಗಿತ್ತು. ಸಂಗೀತ ನಿರ್ದೇಶಕ ಗುರುಕಿರಣ್‌ ಮನೆಯಲ್ಲಿ ಚಿತ್ರದ ಧ್ವನಿಮುದ್ರಣ ಕಾರ್ಯವೂ ಆರಂಭವಾಗಿತ್ತು. ಆ ನಂತರ ಆ ಸಿನಿಮಾ ಏನಾಯಿತು ಎಂಬ ಪ್ರಶ್ನೆ ಸಿನಿಪ್ರಿಯರಲ್ಲಿತ್ತು. ಅದಕ್ಕೆ ಕಾರಣ ಶಿವಣ್ಣ ಬೇರೆ ಸಿನಿಮಾಗಳಲ್ಲಿ ಬಿಝಿಯಾದರೆ, ಇತ್ತ ಕಡೆ ಚಂದ್ರು ಕೂಡಾ ತಮ್ಮದೇ ನಿರ್ಮಾಣ, ನಿರ್ದೇಶನದ ಸಿನಿಮಾದಲ್ಲಿ ಬಿಝಿಯಾದರು.

“ಬಾದ್‌ಷಾ’ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿದಿತ್ತು. ಈಗ ಶಿವಣ್ಣ “ಬಾದ್‌ಷಾ’ ಬಗ್ಗೆ ಮಾತನಾಡಿದ್ದಾರೆ. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯೂ’ ಟ್ರೇಲರ್‌ ಬಿಡುಗಡೆಯ ವೇದಿಕೆಯಲ್ಲಿ ನಿರೂಪಕರಿಂದ ಎದುರಾದ “ಬಾದ್‌ಷಾ’ ಸಿನಿಮಾ ಏನಾಯಿತು ಎಂಬ ಪ್ರಶ್ನೆಗೆ ಶಿವಣ್ಣ ನೇರವಾಗಿ ಉತ್ತರಿಸಿದ್ದಾರೆ. “ಬಾದ್‌ಷಾ ಸಿನಿಮಾ ಮಾಡುತ್ತಿಲ್ಲ.

ಅದರ ಬದಲಾಗಿ ಚಂದ್ರು ಜೊತೆ ಬೇರೆ ಸಿನಿಮಾ ಮಾಡುತ್ತಿದ್ದೇನೆ. ಕೆಲ ದಿನಗಳ ಹಿಂದೆ ಚಂದ್ರು ಬಂದು ಒಂದು ಕಥೆ ಹೇಳಿದರು. ತುಂಬಾ ಚೆನ್ನಾಗಿದೆ. ಪೌರಾಣಿಕ ಹಿನ್ನೆಲೆಯೂ ಆ ಕಥೆಯಲ್ಲಿದೆ. ಚಂದ್ರು ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. ಎಲ್ಲಾ ಭಾಷೆಗಳಿಗೂ ಸಲ್ಲುವಂತಹ ಕಥೆ. ಅವರು ಹೇಳಿದ ಕೂಡಲೇ ನಾನು ಇಂಪ್ರಸ್‌ ಆದೆ.

ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷ ಮತ್ತೆ ನಾವಿಬ್ಬರು ಜೊತೆಯಾಗಿ ಸಿನಿಮಾ ಮಾಡಬಹುದು’ ಎನ್ನುವ ಮೂಲಕ “ಬಾದ್‌ಷಾ’ ಗೊಂದಲಗಳಿಗೆ ತೆರೆ ಎಳೆದರು. “ಐ ಲವ್‌ ಯೂ’ ಟ್ರೇಲರ್‌ ನೋಡಿ ಮಾತನಾಡಿದ ಶಿವಣ್ಣ, ಚಿತ್ರದಲ್ಲಿ ಉಪೇಂದ್ರ ಹಾಗೂ ಚಂದ್ರು ಶೈಲಿ ಕಾಣುತ್ತಿದೆ. ಉಪೇಂದ್ರ ಅವರ ಬ್ರೇನ್‌ ಹಾಗೂ ಚಂದ್ರು ಅವರ ಸೆಂಟಿಮೆಂಟ್‌ ಚಿತ್ರದಲ್ಲಿದ್ದಂತಿದೆ ಎಂದು ಚಿತ್ರಕ್ಕೆ ಶುಭಕೋರಿದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ