ಥಿಯೇಟರ್‌ ತೆರೆಯುವ ಮುನ್ನ ಲೆಕ್ಕಾಚಾರ ಶುರು

ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಪಕರ ಸಭೆ

Team Udayavani, Jun 13, 2020, 4:17 AM IST

theatre-big-badget

ಒಂದೆಡೆ ಕೋವಿಡ್‌ 19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ, ಮತ್ತೂಂದೆಡೆ ಸರ್ಕಾರ ನಿಧಾನವಾಗಿ ಲಾಕ್‌ ಡೌನ್‌ ಸಡಿಲಗೊಳಿಸಲು ಮುಂದಾಗುತ್ತಿದೆ. ಇನ್ನು ಎಲ್ಲ ಲಾಕ್‌ ಡೌನ್‌ ಗಳೂ ತೆರೆಯುತ್ತಿದ್ದಂತೆ, ಚಿತ್ರರಂಗದ ಚಟುವಟಿಕೆಗಳಿಗೆ ಬಿದ್ದಿದ್ದ ಬ್ರೇಕ್‌ ಕೂಡ ತೆರವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಕಿರುತೆರೆಯ ಚಟುವಟಿಕೆಗಳು ಶುರುವಾಗಿರುವುದರಿಂದ, ಚಿತ್ರರಂಗದ ಚಟುವಟಿಕೆಗಳೂ ಶೀಘ್ರದಲ್ಲಿಯೇ ಶುರುವಾಗಬಹುದು ಎಂಬ ನಿರೀಕ್ಷೆ ಚಿತ್ರರಂಗದ ಮಂದಿಯಲ್ಲಿದೆ. ಅಲ್ಲದೆ ಜುಲೈ ತಿಂಗಳ ಮೊದಲ ವಾರದಲ್ಲಿ ಚಿತ್ರಮಂದಿರಗಳ ಓಪನ್ಗೆ ಮತ್ತು ಚಿತ್ರೀಕರಣಕ್ಕೆ ಅನುಮತಿ ನೀಡಬಹುದು ಎಂಬ ಮಾತೂ ಚಿತ್ರರಂಗದಲ್ಲಿ ಕೇಳಿಬರುತ್ತಿದೆ.

ಇದರ ಬೆನ್ನಲ್ಲೇ, ಸದ್ಯ ಕನ್ನಡದಲ್ಲಿ ಈಗಾಗಲೇ ರೆಡಿಯಾಗಿರುವ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳ ಪೈಕಿ ಯಾವುದು ಮೊದಲು ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ, ಚಿತ್ರರಂಗದಲ್ಲಿ ಹೆಚ್ಚಾಗಿಯೇ ಇದೆ. ಸದ್ಯ “ಸಲಗ’, “ರಾಬರ್ಟ್‌…’, “ಪೊಗರು’, “ಕೋಟಿಗೊಬ್ಬ 3′ ರಿಲೀಸ್‌ಗೆ ರೆಡಿ ಇದ್ದು, “ಯುವರತ್ನ’, “ಕೆಜಿಎಫ್ ಚಾಪ್ಟರ್‌ 2′ ಚಿತ್ರಗಳ ಕೊನೆ ಹಂತದ ಕೆಲಸಗಳು ಬಾಕಿ ಇವೆ. ಇದೇ ವೇಳೆ ಈ ಸ್ಟಾರ್‌ ನಟರ ಚಿತ್ರಗಳ ನಿರ್ಮಾಪಕರು ಇತ್ತೀಚೆಗೆ ಸಭೆ ನಡೆಸಿ ಬಿಡುಗಡೆಯ ಬಗ್ಗೆ ಒಂದಷ್ಟು ಚರ್ಚಿಸಿದ್ದಾರೆ ಎನ್ನಲಾಗಿದೆ.

ಕೋವಿಡ್‌ 19 ಲಾಕ್‌ ಡೌನ್‌ ಬಳಿಕ ಥಿಯೇಟರ್‌ ತೆರೆದಾಗ ಸಿನಿಮಾ ರಿಲೀಸ್‌ ಮಾಡುವ ರೀತಿ, ಪ್ರಚಾರ, ಪ್ರೇಕ್ಷಕರನ್ನು ಥಿಯೇರ್ಟ ಕಡೆಗೆ ಸೆಳೆಯುವ ಬಗೆ ಮೊದಲಾದ ವಿಷಯಗಳ ಬಗ್ಗೆ ನಿರ್ಮಾಪಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಚಿತ್ರರಂಗದ ಮೂಲಗಳ ಮಾಹಿತಿ ಪ್ರಕಾರ, ಸದ್ಯ ಕನ್ನಡದ ಆರು ಸ್ಟಾರ್ಸ್‌ ಗಳ ಚಿತ್ರಗಳು ಬಿಡುಗಡೆಗೆ ರೆಡಿ ಇದ್ದು ಇವನ್ನು ಒಂದರ ಹಿಂದೊಂದರಂತೆ, ಸರದಿಯಲ್ಲಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದೆ.

ನಿರ್ಮಾಪಕರಾದ ಗಂಗಾಧರ್‌, ಕೆ. ಪಿ ಶ್ರೀಕಾಂತ್‌, ಜಾಕ್‌ ಮಂಜು, ಉಮಾಪತಿ ಶ್ರೀನಿವಾಸಗೌಡ, ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್, ಜಯಣ್ಣ, ಸೂರಪ್ಪ ಬಾಬು ಮೊದಲಾದವರು ಈಗಾಗಲೇ ಎರಡು ಬಾರಿ ಸಭೆ ನಡೆಸಿ, ಸದ್ಯ ಚಿತ್ರರಂಗದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಚಿತ್ರರಂಗದ ಮೂಲಗಳ ಮಾಹಿತಿ ಪ್ರಕಾರ ಚಿತ್ರಮಂದಿರಗಳು ತೆರೆದ ಮೇಲೆ ಮೊದಲು ಚಿತ್ರ ಬಿಡುಗಡೆ ಮಾಡುವವರಾರು, ಒಂದು ಚಿತ್ರಕ್ಕೂ ಮತ್ತೂಂದು ಚಿತ್ರದ ರಿಲೀಸ್‌ಗೂ ಮಧ್ಯೆ ಗ್ಯಾಪ್‌ ಕೊಡುವ ಮತ್ತು ಈ ನಡುವೆ ಬೇರೆ ಬೇರೆ ಚಿತ್ರಗಳನ್ನು ಬಿಡುಗಡೆ ಮಾಡುವವರಿಗೂ ಅನುಕೂಲ ಮಾಡಿಕೊಡುವುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಒಟ್ಟೊಟ್ಟಿಗೆ ಸ್ಟಾರ್‌ಗಳ ಚಿತ್ರಗಳನ್ನು ಬಿಡುಗಡೆ ಮಾಡುವ ಬದಲಿಗೆ ಸಮಯ ನೊಡಿಕೊಂಡು ಮಾಡಬೇಕು. ಎಷ್ಟು ದಿನಗಳ ಗ್ಯಾಪ್‌ ಕೊಡಬೇಕು ಎಂಬೆಲ್ಲ ವಿಷಯಗಳು ಈ ಸಭೆಯಲ್ಲಿ ಚರ್ಚೆಯಾಗಿವೆ. ಇನ್ನು, ಸೆನ್ಸಾರ್‌ ಆಗಿರುವ ರಿಲೀಸ್‌ಗಗೆ ರೆಡಿ ಇರುವ ಸುಮಾರು 60ಕ್ಕೂ ಹೆಚ್ಚಿನ ಚಿತ್ರಗಳಿದ್ದು, ಅವರೇನಾದರೂ ಚಿತ್ರಮಂದಿರಗಳು ಓಪನ್‌ ಆದ ತಕ್ಷಣ ರಿಲೀಸ್‌ ಮಾಡುತ್ತೇವೆ ಅಂದರೆ ಅವರಿಗೂ ಚಿತ್ರಮಂದಿರಗಳಲ್ಲಿ ಅನುವು ಮಾಡಿಕೊಡಲಾಗವುದು ಎಂದು ಹಿರಿಯ ನಿರ್ಮಾಪಕರೊಬ್ಬರು ಹೇಳುತ್ತಾರೆ.

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.