Udayavni Special

ಬೇತಾಳ ಬೆನ್ನೇರಿ ಹೊರಟವರ ಕಥೆ

ಹಾರರ್‌ ಕಾಮಿಡಿ ಚಿತ್ರ ತೆರೆಗೆ ಸಿದ್ಧ

Team Udayavani, Sep 16, 2020, 2:52 PM IST

ಬೇತಾಳ ಬೆನ್ನೇರಿ ಹೊರಟವರ ಕಥೆ

ಬೇತಾಳದ ಬಗ್ಗೆ ಹತ್ತಾರು ಹಾರರ್‌ ಕಥೆಗಳನ್ನುಕೇಳಿರಬಹುದು. ಈಗ ಅಂಥದ್ದೇ ಒಂದುಕಥೆ ಸಿನಿಮಾ ರೂಪದಲ್ಲಿ ತೆರೆಮೇಲೂ ಬರಲು ರೆಡಿಯಾಗುತ್ತಿದೆ. ಅಂದಹಾಗೆ, ಈ ಕಥೆ ಹೊಂದಿರುವ ಸಿನಿಮಾದ ಹೆಸರೇ “ಬೇತಾಳ’. ಈ ಹಿಂದೆ “ಸಮಾಗಮ’ಹಾಗೂ “ದೇವಯಾನಿ’ ಎಂಬಚಿತ್ರಗಳನ್ನುನಿರ್ದೇಶಿಸಿದ್ದ, ಕಸ್ತೂರಿ ಜಗನ್ನಾಥ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದೆ.

“ಬೇತಾಳ’ ಚಿತ್ರದಲ್ಲಿ ಸ್ಟೈಲ್‌ ಶಿವು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅನಿಕ್‌, ಬಿಗ್‌ ಬಾಸ್‌ ಖ್ಯಾತಿಯ ಸೋನು ಪಾಟೀಲ್‌,ಕಾವ್ಯಗೌಡ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಮಾತಿನಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಚಿತ್ರತಂಡ ಪತ್ರಕರ್ತರ ಮುಂದೆ ಬಂದಿತ್ತು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕಸ್ತೂರಿ ಜಗನ್ನಾಥ್‌, “ಹೆಸರೇ ಹೇಳುವಂತೆ ಇದೊಂದು ಹಾರರ್‌-ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮಾ. ಇದರ ಹೀರೋ ಶಿವು ಒಬ್ಬ ಸಾಫ್ಟ್ವೇರ್‌ ಎಂಜಿನಿಯರ್‌. ತನ್ನ ಮನೆಯಲ್ಲಿ ಆಗಾಗಕೆಟ್ಟ ಕನಸುಗಳು ಬೀಳುತ್ತಿದ್ದವೆಂದು ಆತ ಮನೆ ಬದಲಿಸಲು ಮುಂದಾಗುತ್ತಾನೆ. ಸಾಕಷ್ಟು ಹುಡುಕಾಡಿದ ಮೇಲೆ ಕೊನೆಗೂ ಆತನಿಗೊಂದು ಮನೆ ಸಿಗುತ್ತದೆ. ಆ ಮನೆಗೆ ಬಂದ ನಂತರ ಅಲ್ಲೊಂದು ದೆವ್ವ ಇರುವುದು ಗೊತ್ತಾಗುತ್ತದೆ. ಆ ದೆವ್ವಕ್ಕೆ ಒಂದು ಆಸೆ ಇರುತ್ತದೆ, ಅದನ್ನು ಪೂರೈಸಿದರೆ ತಾನು ಮನೆ ಬಿಟ್ಟು ಹೋಗುವುದಾಗಿ ಶಿವುಗೆ ತಿಳಿಸುತ್ತದೆ. ಶಿವು ಅದರ ಆಸೆ ಪೂರೈಸಿ ದನೇ ಇಲ್ಲವೇ ಎನ್ನುವುದೇ “ಬೇತಾಳ’ ಸಿನಿಮಾದಕಥೆ’ ಎಂದು ಚಿತ್ರದಕಥೆಯ ಎಳೆ ಬಿಟ್ಟುಕೊಟ್ಟರು.

“ಬೇತಾಳ’ದ ನಾಯಕ ನಟ ಸ್ಟೈಲ್‌ ಶಿವು ಮಾತನಾಡಿ, “ಸಮಾನ ಮನಸ್ಕ ಸ್ನೇಹಿತರೆಲ್ಲ ಸೇರಿ ಈ ಸಿನಿಮಾ ನಿರ್ಮಿಸಿದ್ದೇವೆ. ಈ ಮೊದಲು ಒಂದಷ್ಟು ಸಿನಿಮಾಗಳಿಗೆ ಫೈನಾನ್ಸ್‌ ಮಾಡಿದ್ದೆ. ಹಾರರ್‌ ಸಬ್ಜೆಕ್ಟ್ ಆದ್ರೂ ಅದನ್ನು ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ದೆವ್ವದ ಆಸೆ ಪೂರೈಸಲು ಹೀರೋ ಏನೆಲ್ಲಾ ಕಸರತ್ತು ಮಾಡುತ್ತಾನೆ ಅನ್ನೋದು ಸಿನಿಮಾ. ಇದರಲ್ಲಿ ನಾಲ್ಕು ಆ್ಯಕ್ಷನ್‌ ಸೀನ್‌ಗಳಿದ್ದು, ಪ್ರತಿ ಸೀನ್‌ಗಳೂ ಕುತೂಹಲ ಕೆರಳಿಸುತ್ತ ಸಾಗುತ್ತದೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಸಿನಿಮಾದ ಟಾಕಿ ಪೋರ್ಷನ್‌ ಚಿತ್ರೀಕರಣ ಮುಗಿಸಿದ್ದೇವೆ’ ಎಂದರು.

ಚಿತ್ರದ ಮತ್ತೂಬ್ಬ ನಟ ಅನಿಕ್‌ ಮಾತನಾಡಿ, “ಈ ಸಿನಿಮಾದಲ್ಲಿ ನನ್ನದು ಎರಡು ಶೇಡ್‌ ಇರುವ ಕ್ಯಾರೆಕ್ಟರ್‌. ಒಂದ್ರಲ್ಲಿ ಲವರ್‌ ಬಾಯ್‌ ಆಗಿ ಕಾಣಿಸಿದರೆ, ಮತ್ತೂಂದರಲ್ಲಿ ಕ್ವಾಟ್ಲೆಕೊ ಡುವ ದೆವ್ವವಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದರು. ಚಿತ್ರದ ನಟಿಯರಾದಕಾವ್ಯಾ ಗೌಡ, ಸೋನು ಪಾಟೀಲ್‌ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. “ಭೂಮಿಕಾ ಸಿನಿ ಕ್ರಿಯೇಶನ್ಸ್‌’ ಮೂಲಕ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ರಾಶಿ ಕಿಶೋರ್‌ ಸಂಗೀತ ನೀಡಿದ್ದಾರೆ. ಶಿವು ಬೆರಗಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸದ್ಯ ತನ್ನ ಮಾತಿನಭಾಗದ ಚಿತ್ರೀಕರಣ ಮುಗಿಸಿಕೊಂಡಿರುವ “ಬೇತಾಳ’ದ ಹಾಡುಗಳನ್ನು, ಚಿಕ್ಕಮಗಳೂರು, ಸಕಲೇಶಪುರ ಮೊದಲಾದಕಡೆಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ದೆಹಲಿಯಲ್ಲಿ ಕರ್ನಾಟಕದ ಗಟ್ಟಿ ಧ್ವನಿ ; ಗಡಿನಾಡಿನ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ

Rohith-Sharma-IPL

ರೋಹಿತ್ ಶರ್ಮಾ ಕ್ಯಾಪ್ಟನ್ ನಾಕ್ ; ನೈಟ್ ರೈಡರ್ಸ್ ಗೆಲುವಿಗೆ 196 ರನ್ ಗುರಿ

web-tdy-1

ವೃತ್ತಿಯಲ್ಲಿ ಲಾಯರ್, ಪ್ರವೃತ್ತಿಯಲ್ಲಿ “ಚಾಯಿವಾಲಿ”ಯ ಓನರ್ : ಇವರ ಕಥೆ ಗೊತ್ತಾ ?

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

Shivangi

ಕಾಶಿಯ ಸುಪುತ್ರಿ ಶಿವಾಂಗಿ ರಫೆಲ್‌ನ ಮೊದಲ ಮಹಿಳಾ ಪೈಲಟ್‌

ಬೆಳಗಾವಿ ಎಪಿಎಂಸಿಗೆ ಅನುದಾನಕ್ಕಾಗಿ ಸಚಿವರಿಗೆ ಮನವಿ

ಬೆಳಗಾವಿ ಎಪಿಎಂಸಿಗೆ ಅನುದಾನಕ್ಕಾಗಿ ಸಚಿವರಿಗೆ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೌಡಿ ಫೆಲೋ ಜೊತೆ ಪ್ರೇಮ್‌

ರೌಡಿ ಫೆಲೋ ಜೊತೆ ಪ್ರೇಮ್‌

ಸೆನ್ಸಾರ್‌ ಮುಂದೆ ಹೊಸಬರ ದಂಡು

ಸೆನ್ಸಾರ್‌ ಮುಂದೆ ಹೊಸಬರ ದಂಡು

ರಿಚ್ಚಿ Vs ರಿಚ್ಚಿ ಟೈಟಲ್ ಸುತ್ತ

ರಿಚ್ಚಿ Vs ರಿಚ್ಚಿ ಟೈಟಲ್ ಸುತ್ತ

ನಶೆ ನಂಟು: ವಿಚಾರಣೆಗೆ ಹಾಜರಾದ ಕಿರುತೆರೆ ನಟ ಅಭಿಷೇಕ್, ನಟಿ ಗೀತಾ ಭಟ್

ನಶೆ ನಂಟು: ವಿಚಾರಣೆಗೆ ಹಾಜರಾದ ಕಿರುತೆರೆ ನಟ ಅಭಿಷೇಕ್, ನಟಿ ಗೀತಾ ಭಟ್

” ಡ್ರಗ್ಸ್‌ ಪ್ರಕರಣದಲ್ಲಿ ದೊಡ್ಡವರನ್ನೇಕೆ ಬಂಧಿಸಿಲ್ಲ?” ನಟಿ ಪಾರುಲ್ ಯಾದವ್ ಪ್ರಶ್ನೆ

” ಡ್ರಗ್ಸ್‌ ಪ್ರಕರಣದಲ್ಲಿ ದೊಡ್ಡವರನ್ನೇಕೆ ಬಂಧಿಸಿಲ್ಲ?” ನಟಿ ಪಾರುಲ್ ಯಾದವ್ ಪ್ರಶ್ನೆ

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

“ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಮರು ನಾಮಕರಣ

“ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಮರು ನಾಮಕರಣ

ರೈಲಿನಲ್ಲಿ ಅಡಿಕೆ ಸಾಗಾಟಕ್ಕೆ ಸಾಂಕೇತಿಕ ಚಾಲನೆ

ರೈಲಿನಲ್ಲಿ ಅಡಿಕೆ ಸಾಗಾಟಕ್ಕೆ ಸಾಂಕೇತಿಕ ಚಾಲನೆ

ವೆಳ್ಳರಿಕುಂಡ್‌ ತಾಲೂಕು ಆನ್‌ಲೈನ್‌ ಅದಾಲತ್‌: 15 ದೂರುಗಳಿಗೆ ತೀರ್ಪು

ವೆಳ್ಳರಿಕುಂಡ್‌ ತಾಲೂಕು ಆನ್‌ಲೈನ್‌ ಅದಾಲತ್‌: 15 ದೂರುಗಳಿಗೆ ತೀರ್ಪು

ಆಸ್ಪತ್ರೆಗಳ ಸಿಬಂದಿಗೆ ಕೋವಿಡ್‌ ತಡೆ ತರಬೇತಿ

ಆಸ್ಪತ್ರೆಗಳ ಸಿಬಂದಿಗೆ ಕೋವಿಡ್‌ ತಡೆ ತರಬೇತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.