ಹುಲಿ ಜೊತೆ ಭರಮಣ್ಣ ಫೈಟ್‌

ಬಿಚ್ಚುಗತ್ತಿ ಟೀಸರ್‌ಗೆ ಮೆಚ್ಚುಗೆ

Team Udayavani, Jan 29, 2020, 7:02 AM IST

ಚಿತ್ರದುರ್ಗ ಆಂದಾಕ್ಷಣ ಅಲ್ಲಿನ ಇತಿಹಾಸ ನೆನಪಾಗುತ್ತದೆ. ಈಗಾಗಲೇ ಚಿತ್ರದುರ್ಗ ಕಲ್ಲಿನಕೋಟೆ ಆಳಿದ ಮದಕರಿ ನಾಯಕನ ಕುರಿತು ಅನೇಕ ಪುಸ್ತಕ ಹೊರಬಂದಿವೆ. ಆ ಕುರಿತು ಚಿತ್ರ ಕೂಡ ತಯಾರಾಗುತ್ತಿದೆ. ಈಗ ಸದ್ದಿಲ್ಲದೆಯೇ ತಯಾರಾಗಿರುವ ಐತಿಹಾಸಿಕ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ.

ಹೌದು, ಇತಿಹಾಸವುಳ್ಳ ಚಿತ್ರದುರ್ಗದ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ ಅವರ ಕುರಿತ ಐತಿಹಾಸಿಕ ಚಿತ್ರ “ಬಿಚ್ಚುಗತ್ತಿ’ ಫೆಬ್ರವರಿಯಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರದುರ್ಗದ ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ತಯಾರಾಗಿರುವ “ಬಿಚ್ಚುಗತ್ತಿ’ ಡಾ.ಬಿ.ಎಲ್‌.ವೇಣು ಅವರು ಬರೆದಿರುವ “ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿ ಆಧಾರಿತ. ಚಿತ್ರದಲ್ಲಿ ರಾಜವರ್ಧನ್‌ ಭರಮಣ್ಣ ನಾಯಕರಾಗಿ ಕಾಣಿಸಿಕೊಂಡರೆ, ಹರಿಪ್ರಿಯಾ ಪ್ರಮುಖ ಆಕರ್ಷಣೆ.

ಇನ್ನು, “ಬಾಹುಬಲಿ’ ಖ್ಯಾತಿಯ ಪ್ರಭಾಕರ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐತಿಹಾಸಿಕ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ತುಂಬಿಕೊಂಡಿರುವುದು ವಿಶೇಷತೆಗಳಲ್ಲೊಂದು. ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆಗೊಂಡಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರತಂಡ ಓಎಸ್‌ಕೆ ಪ್ರೊಡಕ್ಷನ್ಸ್‌ನ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಟೀಸರ್‌ ಬಿಡುಗಡೆ ಮಾಡಿದ್ದು, ನೋಡಿದವರಿಗೆ ಒಳ್ಳೆಯ ಕಾಮೆಂಟ್ಸ್‌ ದೊರೆತಿದೆ.

ಟೀಸರ್‌ನಲ್ಲಿ ಎಲ್ಲರೂ ಟೈಗರ್‌ ಫೈಟ್ಸ್‌ ಗ್ರಾಫಿಕ್ಸ್‌ ಬಗ್ಗೆಯೇ ಗುಣಗಾನ ಮಾಡು ತ್ತಿದ್ದಾರೆ ಎಂಬುದು ಚಿತ್ರತಂಡದ ಮಾತು. ಅಂದಹಾಗೆ, ಹೈದರಾ ಬಾದ್‌ನ ನಾಗೇಶ್‌ ಹಾಗೂ ತಂಡ ಗ್ರಾಫಿಕ್ಸ್‌ ಎಪಿಸೋಡ್‌ ಮಾಡಿದೆ. ಚಿತ್ರದಲ್ಲಿ ನಾಲ್ಕು ನಿಮಿಷಗಳ ಕಾಲ ಟೈಗರ್‌ ಎಪಿ ಸೋಡ್‌ ಮೂಡಿ ಬಂದಿದ್ದು, ಮುದ್ದಣ್ಣ ಸಾಕಿದ ಹುಲಿ ಜೊತೆ ಭರ ಮಣ್ಣ ಕಾಳಗ ನಡೆಸುವ ಸೀನ್‌ ಚಿತ್ರದ ಹೈಲೈಟ್‌. ಆದರೆ, ಭರಮಣ್ಣ ಯಾಕೆ ಆ ಟೈಗರ್‌ ಜೊತೆ ಸೆಣೆಸಾಟ ನಡೆಸುತ್ತಾರೆ ಅನ್ನೋದನ್ನು ಚಿತ್ರದಲ್ಲೇ ಕಾಣಬೇಕು ಎಂಬುದು ಚಿತ್ರತಂಡದ ಮಾತು.

ಚಿತ್ರದಲ್ಲಿ ಅರಮನೆ ಕೂಡ ವಿಶೇಷವಾಗಿದೆ. ಆ ಗ್ರಾಫಿಕ್ಸ್‌ ಅನ್ನು ಸುರೇಶ್‌ ಅವರು ತಮ್ಮ ತಂಡದ ಜೊತೆ ಸೇರಿ ಮಾಡಿದ್ದಾರೆ. ಸದ್ಯ ಖುಷಿಯಲ್ಲಿರುವ ಚಿತ್ರತಂಡ, ಚಿತ್ರವನ್ನು ರಿಲೀಸ್‌ ಮಾಡಲು ತಯಾರಿ ನಡೆಸಿದೆ. ಇನ್ನು, ಫೆ.9 ರಂದು ಚಿತ್ರದ ಟ್ರೇಲರ್‌ ಅನ್ನು ಕನ್ನಡದ ಸ್ಟಾರ್‌ ನಟರೊಬ್ಬರು ರಿಲೀಸ್‌ ಮಾಡಲಿದ್ದಾರೆ. ಚಿತ್ರಕ್ಕೆ ಹರಿ ಸಂತೋಷ್‌ ನಿರ್ದೇಶಕರಾಗಿದ್ದು, ಹಂಸಲೇಖ ಅವರ ಸಂಗೀತವಿದೆ. ಗುರುಪ್ರಶಾಂತ್‌ ರೈ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್‌ ಸಂಕಲನ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ

  • ನಮ್ಮ ಊರಿನ ಒಬ್ಬ ರೈತರು ಟೆಫ್ ಎಂಬ ಹೊಸ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅದು ಯಾವ ಬೆಳೆ, ಹೇಗೆ ಬೆಳೆಯಬೇಕು ಇತ್ಯಾದಿ ಮಾಹಿತಿ ನೀಡುವಿರಾ? - ಮಂಜುನಾಥ ಪಟೇಲ್‌,...

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...

  • ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ...

  • ಬೆಂಗಳೂರು: ವಿವಿಧ ಇಲಾಖೆಯ ಸಚಿವರು ಸುಲಭವಾಗಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಬಿಜೆಪಿ ಕೇಂದ್ರ ಕಚೇರಿಗೆ ವಾರಕ್ಕೆ...