ಸೆಟ್‌ ಒಳಗೆ ಭಟ್ರ ಪಂಚತಂತ್ರ

Team Udayavani, Feb 26, 2018, 9:00 PM IST

Panchatantra-Sets-(9).jpg

ನಿರ್ದೇಶಕ ಯೋಗರಾಜ್‌ ಭಟ್‌ ಸಾಮಾನ್ಯವಾಗಿ ಸೆಟ್‌ ಮೊರೆ ಹೋಗುವುದಿಲ್ಲ. ಒಂದು ವೇಳೆ ಅವರ ಸಿನಿಮಾಗಳಲ್ಲಿ ಸೆಟ್‌ ಇದ್ದರೂ ಅದು ಹಾಡುಗಳಲ್ಲಿ. ಆದರೆ, ಈ ಬಾರಿ ತಮ್ಮ ಹೊಸ ಚಿತ್ರಕ್ಕೆ ಸೆಟ್‌ ಮೊರೆ ಹೋಗಿದ್ದಾರೆ ಭಟ್ರು.  ಹೌದು, ಯೋಗರಾಜ ಭಟ್ರು “ಪಂಚತಂತ್ರ’ ಎಂಬ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ಆ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲಿ ನಡೆಯುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕಾಗಿ ವಿಶೇಷವಾದ ಸೆಟ್‌ ಹಾಕಲಾಗಿದೆ.

ಸುಮಾರು 30 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಎರಡು ಸೆಟ್‌ ಹಾಕಿದ್ದು, ಅದರಲ್ಲಿ ಗ್ಯಾರೇಜ್‌ ಹಾಗೂ ಕಾಲೋನಿ ಸೆಟ್‌ಗಳಿವೆ. ಮುಖ್ಯವಾಗಿ ಗ್ಯಾರೇಜ್‌ ಸೆಟ್‌ ಗಮನ ಸೆಳೆಯುತ್ತಿದ್ದು, ಸಖತ್‌ ಸ್ಟೈಲಿಶ್‌ ಆಗಿ ನಿರ್ಮಿಸಲಾಗಿದೆ. ಹೊಸ್ಮನೆ ಮೂರ್ತಿಯವರ ಕಲಾ ನಿರ್ದೇಶನದಲ್ಲಿ ಈ ಸೆಟ್‌ಗಳು ಸಿದ್ಧವಾಗಿವೆ. ಸಾðಪ್‌ಗ್ಳನ್ನು ಬಳಸಿಕೊಂಡು ವಿಶೇಷವಾದ ವಿನ್ಯಾಸಗಳನ್ನು ಕೂಡಾ ಮಾಡಲಾಗಿದೆ. ಜೊತೆಗೆ ಸೆಟ್‌ ಮುಂದೆ ನಿಮಗೆ ರೇಸ್‌ ಕಾರುಗಳು ಕೂಡಾ ಕಾಣಸಿಗುತ್ತದೆ.

ಅಷ್ಟಕ್ಕೂ ಗ್ಯಾರೇಜ್‌ ಎದುರು ಕಾಲೋನಿ ಸೆಟ್‌ ಯಾಕೆ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ಯಂಗ್‌ ವರ್ಸಸ್‌ ಓಲ್ಡ್‌. ಹೌದು, ಭಟ್ರು ಜನರೇಶನ್‌ ಗ್ಯಾಪ್‌ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದು, ಇಂದಿನ ಯುವಜನತೆ ಹಾಗೂ ಹಿರಿಯರ ನಡುವೆ ಯಾವ ತರಹದ ಗ್ಯಾಪ್‌ ಇದೆ ಮತ್ತು ಮನಸ್ಥಿತಿಗಳು ಹೇಗೆ ಬದಲಾಗಿವೆ ಎಂಬ ಅಂಶದೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಕಾಮಿಡಿ ಹಿನ್ನೆಲೆಯಲ್ಲಿ ಭಟ್ರು ಫಿಲಾಸಫಿ ಹೇಳಲು ಹೊರಟಿದ್ದಾರೆಂದರೆ ತಪ್ಪಲ್ಲ.

ಚಿತ್ರದಲ್ಲಿ ಸಾಕಷ್ಟು ಸೀರಿಯಸ್‌ ಹಾಗೂ ಜೀವನಕ್ಕೆ ಸಂಬಂಧಿಸಿದ ಅಂಶಗಳನ್ನು ಮಜಾವಾಗಿ ಹೇಳಲಿದ್ದಾರಂತೆ ಭಟ್ರು. ಅದೇ ಕಾರಣಕ್ಕೆ ಗ್ಯಾರೇಜ್‌ ಹಾಗೂ ಕಾಲೋನಿ ಸೆಟ್‌ ಹಾಕಿದ್ದಾರೆ. ಗ್ಯಾರೇಜ್‌ ಸೆಟ್‌ ಯುವಕರ ಸಂಕೇತವಾದರೆ, ಕಾಲೋನಿ ಹಿರಿಯರಿಗೆ. ಗ್ಯಾರೇಜ್‌ ನಾಯಕನ ಅಡ್ಡವಾದರೆ, ಅದರ ಎದುರಿಗಿರುವ ಕಾಲೋನಿಯಲ್ಲಿ ಹಿರಿಯ ಜೀವಗಳಿರುತ್ತವೆ. ರಂಗಾಯಣ ರಘು ಸೇರಿದಂತೆ ಇತರರು ನಟಿಸುತ್ತಿದ್ದಾರೆ.

ಇವರ ನಡುವೆ ನಡೆಯುವ ಜಿದ್ದಾಜಿದ್ದಿಯನ್ನು ಮಜಾವಾಗಿ ಹೇಳಲು ಹೊರಟಿದ್ದಾರೆ ಭಟ್ರು. ಚಿತ್ರದಲ್ಲಿ ನಾಯಕ ರೇಸ್‌ ಕಾರ್‌ ಡಿಸೈನ್‌ ಮಾಡುವ ಗ್ಯಾರೇಜ್‌ ಇಟ್ಟುಕೊಂಡಿರುತ್ತಾನೆ. ಅಲ್ಲೇ ಆತನ ಹಾಗೂ ಸ್ನೇಹಿತರ ಅಡ್ಡ. ಅಲ್ಲಿ ಸಾಕಷ್ಟು ಫ‌ನ್ನಿ ಸನ್ನಿವೇಶಗಳು ನಡೆಯಲಿವೆಯಂತೆ. ಚಿತ್ರವನ್ನು ಯೋಗರಾಜ್‌ ಮೂವೀಸ್‌ನಲ್ಲಿ ಹರಿಪ್ರಸಾದ್‌ ಮತ್ತು ಸನತ್‌ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸೋನಾಲ್‌ ಮೊಂತೆರೋ ಹಾಗೂ ಅಕ್ಷರಾ ನಾಯಕಿಯರು. ವಿಹಾನ್‌ ಗೌಡ ನಾಯಕ. 

ಟಾಪ್ ನ್ಯೂಸ್

Ashok Gehlot questions PM Modi’s ‘silence on communal clashes

ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

Mithali Raj and Jhulan Goswami rested from Women’s T20 Challenge

ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ

thumb 6

‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು

kejriwal 2

ಅತಿಕ್ರಮಣ ವಿರೋಧಿ ಅಭಿಯಾನ : ಕೇಜ್ರಿವಾಲ್ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?

ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?

ram chetan in wheel wheelchair romeo

‘ವೀಲ್ ಚೇರ್’ ನಲ್ಲಿ ರಾಮ್ ಚೇತನ್; ಚೊಚ್ಚಲ ಚಿತ್ರದ ಬಗ್ಗೆ ರೋಮಿಯೋ ನಿರೀಕ್ಷೆಯ ಮಾತು…

1-dsadsad

ಶೀಘ್ರದಲ್ಲಿ ‘ಕೆಜಿಎಫ್ 3’ ಚಿತ್ರೀಕರಣ ಪ್ರಾರಂಭಿಸುವುದಿಲ್ಲ: ಕಾರ್ಯಕಾರಿ ನಿರ್ಮಾಪಕ

ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಮೃತದೇಹ ಪತ್ತೆ!

ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಮೃತದೇಹ ಪತ್ತೆ!

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

mayor

ಎಸ್ಸೆಸ್ಸೆಂ ಹೇಳಿಕೆ ಹಾಸ್ಯಾಸ್ಪದ: ಮೇಯರ್‌

Ashok Gehlot questions PM Modi’s ‘silence on communal clashes

ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

11

ಐಟಿ ಕ್ಷೇತ್ರ ಓಟದ ಕುದುರೆ ಇದ್ದಂತೆ : ಸಿದ್ದನಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.