“ಭೀಷ್ಮ’ನ ದರ್ಬಾರ್‌

ಕುರುಕ್ಷೇತ್ರದ ದರ್ಬಾರ್‌ ಹಾಲ್‌ನಲ್ಲಿ ಅಂಬಿ ಕಾರುಬಾರು

Team Udayavani, Jul 16, 2019, 3:01 AM IST

ಇಲ್ಲಿರುವ ಫೋಟೋ ನೋಡಿದರೆ, ಎಲ್ಲರಿಗೂ ಥಟ್ಟನೆ ಒಂದು ಉತ್ತರ ಸಿಕ್ಕೇ ಸಿಗುತ್ತದೆ. ಅದು “ಮುನಿರತ್ನ ಕುರುಕ್ಷೇತ್ರ’ದ ಭೀಷ್ಮನ ಪಾತ್ರಧಾರಿ ಅಂಬರೀಶ್‌ ಎಂಬುದೇ ಆ ಉತ್ತರ. ಹೌದು, ಈ ಚಿತ್ರದಲ್ಲಿ ಅಂಬರೀಶ್‌ ಅವರು ಭೀಷ್ಮನ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರದ ಪಾತ್ರಧಾರಿಗಳ ಫೋಟೋಗಳು ಎಲ್ಲೆಡೆ ಹರಿದಾಡಿವೆ.

ಅಂಬರೀಶ್‌ ಅವರು ಭೀಷ್ಮನ ಪಾತ್ರಧಾರಿಯಾಗಿ ಹೇಗೆ ಕಾಣುತ್ತಾರೆ ಎಂಬುದನ್ನು ಈ ಹಿಂದೆಯೇ ತೋರಿಸಲಾಗಿತ್ತು. ಈಗ ಚಿತ್ರತಂಡ ಪುನಃ ಒಂದಷ್ಟು ಫೋಟೋಗಳನ್ನು ಹೊರಬಿಟ್ಟಿದೆ. ಅಂಬರೀಶ್‌ ಅವರು ಚಿತ್ರದಲ್ಲಿ ಭೀಷ್ಮನಾಗಿ ಹೀಗೆ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಅಂಬರೀಶ್‌ ಅಭಿನಯದ “ಅಂಬಿ ನಿಂಗ್‌ ವಯಸ್ಸಾಯ್ತೋ’ ಚಿತ್ರದ ಬಳಿಕ “ಮುನಿರತ್ನ ಕುರುಕ್ಷೇತ್ರ’ ಬಿಡುಗಡೆಯಾಗುತ್ತಿದೆ. ಇಲ್ಲಿ ಅಂಬರೀಶ್‌ ಅವರು ಭೀಷ್ಮನ ಪಾತ್ರದ ಮೂಲಕ ಎಲ್ಲರ ಗಮನಸೆಳೆಯುವಂತಹ ಲುಕ್‌ನಲ್ಲಿ ರಾರಾಜಿಸುತ್ತಿದ್ದಾರೆ. ಇನ್ನು, ಪೌರಾಣಿಕ ಸಿನಿಮಾ ಇದಾಗಿರುವುದರಿಂದ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರ ಬಳಗ ಈ ಚಿತ್ರದಲ್ಲಿದೆ.

ಹಾಗಾಗಿ, ಎಲ್ಲರಿಗೂ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು. ದರ್ಶನ್‌ ಇಲ್ಲಿ ದುರ್ಯೋಧನ ಪಾತ್ರ ನಿರ್ವಹಿಸಿದರೆ, ಅರ್ಜುನ್‌ ಸರ್ಜಾ ಕರ್ಣರಾಗಿದ್ದಾರೆ. ಶಶಿಕುಮಾರ್‌ ಧರ್ಮರಾಯ ಪಾತ್ರ ಮಾಡಿದರೆ, ಸೋನುಸೂದ್‌ ಅರ್ಜುನನಾಗಿದ್ದಾರೆ. ನಿಖಿಲ್‌ ಅಭಿಮನ್ಯು ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಇನ್ನಷ್ಟು ಕಲಾವಿದರಿದ್ದು, ಯಾರೆಲ್ಲಾ ಯಾವ ಪಾತ್ರ ಮಾಡಿದ್ದಾರೆ ಎಂಬುದಕ್ಕೆ ಆಗಸ್ಟ್‌ 2 ರಂದು ಗೊತ್ತಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ