ಸಂಕ್ರಾಂತಿಗೆ “ಬಿಲ್‌ಗೇಟ್ಸ್‌’ ಟ್ರೇಲರ್‌

ಕಡಲೆಕಾಯಿ ಪರಿಷೆಯಲ್ಲಿ ಚಿತ‹ತಂಡ

Team Udayavani, Jan 13, 2020, 7:01 AM IST

biilgates

ಚಿಕ್ಕಣ್ಣ ಹಾಗೂ ಶಿಶಿರ ಅಭಿನಯದ “ಬಿಲ್‌ಗೇಟ್ಸ್‌’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ಹಾಗು ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದೇ ಖುಷಿಯಲ್ಲಿರುವ ಚಿತ್ರತಂಡ, ಈಗ ಸಂಕ್ರಾಂತಿಗೆ ಚಿತ್ರದ ಟ್ರೇಲರ್‌ ಬಿಡುಗಡೆಗೆ ಅಣಿಯಾಗುತ್ತಿದೆ. ಹೌದು, ಜ.15ರ ಬುಧವಾರ ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದೆ.

ಈ ಕುರಿತು ಹೇಳುವ ನಿರ್ದೇಶಕ ಶ್ರೀನಿವಾಸ್‌, “ಚಿತ್ರ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಬಿಡುಗಡೆಗೊಂಡ ಹಾಡು, ಟೀಸರ್‌ ಜೋರು ಸದ್ದು ಮಾಡಿದೆ. ಈಗ ಸಂಕ್ರಾಂತಿ ಹಬ್ಬದಂದು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುತ್ತಿದ್ದೇವೆ. ಸುಮಾರು ಎರಡುವರೆ ನಿಮಿಷ ಇರುವ ಟ್ರೇಲರ್‌ ಅನ್ನು ವಿಶೇಷವಾಗಿ ಬಿಡುಗಡೆ ಮಾಡುವ ತಯಾರಿ ನಡೆದಿದೆ. ನೈಸ್‌ ರಸ್ತೆ ಬಳಿ ಇರುವ ಸೋಮಪುರದಲ್ಲಿ ಸಂಕ್ರಾಂತಿ ಹಬ್ಬದಂದು ಕಡಲೆ ಪರಿಷೆ ನಡೆಯುತ್ತಿದ್ದು, ಅಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಸೇರಲಿದ್ದಾರೆ.

ಅವರ ನಡುವೆ ಅಲ್ಲೊಂದು ಕಾರ್ಯಕ್ರಮ ಆಯೋಜಿಸಿ, “ಬಿಲ್‌ಗೇಟ್ಸ್‌’ ಟ್ರೇಲರ್‌ ಬಿಡುಗಡೆ ಮಾಡಲಾಗುವುದು. ಇನ್ನು, ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ಎಂ.ರುದ್ರೇಶ್‌ ಅವರ ನೇತೃತ್ವದಲ್ಲಿ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಅಂದು ಚಿಕ್ಕಣ್ಣ, ಶಿಶಿರ ಹಾಗು ನಾಯಕಿಯರು ಸೇರಿದಂತೆ ಚಿತ್ರತಂಡ ಭಾಗವಹಿಸಲಿದೆ ಎಂದು ವಿವರ ಕೊಡುವ ನಿರ್ದೇಶಕರು, “ಇಬ್ಬರು ಹುಡುಗರು ತಮ್ಮ ಲೈಫ‌ಲ್ಲಿ ದೊಡ್ಡದ್ದಾಗಿ ಸಾಧಿಸಬೇಕು ಅಂತ ಹೊರಡೋದೇ ಸಿನಿಮಾದ ಕಥೆ. ಶಿಶಿರ ಬಿಲ್‌ ಆಗಿ, ಚಿಕ್ಕಣ್ಣ ಗೇಟ್ಸ್‌ ಆಗಿಯೂ ಕಾಣಿಸಿಕೊಂಡಿದ್ದಾರೆ.

ಇದು ಔಟ್‌ ಅಂಡ್‌ ಔಟ್‌ ಎಂಟರ್‌ಟೈನ್‌ಮೆಂಟ್‌ ಚಿತ್ರ. ಸಮಾಜಕ್ಕೊಂದು ಸಂದೇಶವೂ ಇಲ್ಲಿದೆ. ಹುಟ್ಟು ತರಲೆ ಹುಡುಗರು, ಹಳ್ಳಿಯಲ್ಲಿ ಸದಾ ಹಾವಳಿ ಇಡುತ್ತಿರುತ್ತಾರೆ. ಅವರಿಗೆ ಆ ಊರಿನಲ್ಲಿ ಒಬ್ಬ ಮಾಸ್ಟರ್‌ ಸ್ಪೂರ್ತಿಯಾಗುತ್ತಾರೆ. ಅವರಂತೆ, ನಾವೂ ಆಗಬೇಕು ಎಂಬ ಮನಸ್ಸು ಮಾಡುತ್ತಾರೆ. ಹಾಗಾಗಿ, ಸಾಧಿಸಬೇಕು ಅಂತ ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ಏನೆಲ್ಲಾ ಆಗಿ ಹೋಗುತ್ತೆ ಅನ್ನೋದು ಸಾರಾಂಶ. ಬೆಂಗಳೂರು, ಮೈಸೂರು, ಮಂಡ್ಯ, ಪಾಂಡವಪುರ, ಕೊಳ್ಳೆಗಾಲ, ಶ್ರೀರಂಗಪಟ್ಟಣ್ಣ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರಕಥೆ ರಾಜಶೇಖರ್‌ ಬರೆದರೆ, ಸಂಭಾಷಣೆಯನ್ನು ರಾಜಶೇಖರ್‌ ಹಾಗೂ ಜಯ ಮಲ್ಲಿಕಾರ್ಜುನ್‌ ಬರೆದಿದ್ದಾರೆ. ನೊಬಿನ್‌ ಪೌಲ್‌ ಸಂಗೀತವಿದೆ. ರಾಕೇಶ್‌ ಪಿ.ತಿಲಕ್‌ ಛಾಯಾ ಗ್ರಹಣವಿದೆ. ಚಿತ್ರದಲ್ಲಿ ಅಕ್ಷರಾ ರೆಡ್ಡಿ ಮತ್ತು ರೋಜಾ ನಾಯಕಿಯರಾದರೆ, ಗಿರಿ, ಕುರಿಪ್ರತಾಪ್‌, ರಾಜಶೇಖರ, ವಿ.ಮನೋಹರ್‌, ಬ್ಯಾಂಕ್‌ ಜನಾರ್ದನ್‌, ರಾಜೇಶ್‌ ನಟರಂಗ ಇತರರು ನಟಿಸಿದ್ದಾರೆ. ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಡಿ ಗೆಳೆಯರು ಸೇರಿ “ಬಿಲ್‌ಗೇಟ್ಸ್‌’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಟಾಪ್ ನ್ಯೂಸ್

1hh

ಸಿಕ್ಕ ಸಿಕ್ಕವರನ್ನು ಬೈಯುವ,ಭಿಕ್ಷೆ ಬೇಡುವ ಆದಿವಾಸಿಗಳ ವಿಶಿಷ್ಟವಾದ ಹಬ್ಬ!!

ನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

ಶ್ರೀನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

1-f-ffs

ಬಿಬಿಎಂಪಿ ಚುನಾವಣೆ : ಮೇ 28ಕ್ಕೆ ಆಮ್‌ ಆದ್ಮಿ ಪಾರ್ಟಿ ಕಾರ್ಯಕಾರಿಣಿ ಸಭೆ

1-sffsf

ಸುತ್ತಲೂ ಸ್ಫೂರ್ತಿ ಇದೆ, ನಿಮ್ಮ ಪ್ರೀತಿಗಾಗಿ ಧನ್ಯವಾದಗಳು : ಕೆ.ಎಲ್.ರಾಹುಲ್

ವಿಡಿಯೋ ವೈರಲ್: ಪತ್ನಿಯ ಥಳಿತಕ್ಕೆ ಕಂಗಾಲಾದ ಪ್ರಿನ್ಸಿಪಾಲ್, ಭದ್ರತೆ ಕೊಡಿ ಎಂದ ಕೋರ್ಟ್!

ವಿಡಿಯೋ ವೈರಲ್: ಪತ್ನಿಯ ಥಳಿತಕ್ಕೆ ಕಂಗಾಲಾದ ಪ್ರಿನ್ಸಿಪಾಲ್, ಭದ್ರತೆ ಕೊಡಿ ಎಂದ ಕೋರ್ಟ್!

ತುಳು ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು: ನಟ ಆದಿತ್ಯ

ತುಳು ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು: ನಟ ಆದಿತ್ಯ

16stealing

ಡ್ರಾಪ್‌ ನೀಡಿದ ವ್ಯಕ್ತಿಯ ಮೊಬೈಲ್‌, ಎಟಿಎಂ ಕಾರ್ಡ್‌ ಕದ್ದ ಆರೋಪಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತುಳು ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು: ನಟ ಆದಿತ್ಯ

ತುಳು ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು: ನಟ ಆದಿತ್ಯ

ಅಕ್ಟೋಬರ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೀರ ಕಂಬಳ ಚಿತ್ರ ಬಿಡುಗಡೆ

ಅಕ್ಟೋಬರ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ವೀರ ಕಂಬಳ’ ಚಿತ್ರ ಬಿಡುಗಡೆ

Untitled-1

ಅಕಟಕಟ ತಂಡಕ್ಕೆ ಶ್ವೇತಾ ಎಂಟ್ರಿ

Untitled-1

ಸಾರಾ ವಜ್ರಕ್ಕೆ ಮೆಚ್ಚುಗೆ

ನಲಿದೇ ಬಿಟ್ಟಳು ವಾಸಂತಿ!

ನಲಿದೇ ಬಿಟ್ಟಳು ವಾಸಂತಿ!

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

1hh

ಸಿಕ್ಕ ಸಿಕ್ಕವರನ್ನು ಬೈಯುವ,ಭಿಕ್ಷೆ ಬೇಡುವ ಆದಿವಾಸಿಗಳ ವಿಶಿಷ್ಟವಾದ ಹಬ್ಬ!!

23

ನಂದಿಹಳ್ಳಿಯಲ್ಲಿ ಮಹನೀಯರ ನಾಮಫಲಕ ತೆರವು

ನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

ಶ್ರೀನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

22

ಬೀಜ- ರಸಗೊಬ್ಬರ ಕಳಪೆ ಪರಿಶೀಲಿಸಿ

ballary1

ಜೋಳ ಖರೀದಿ ಅವ್ಯವಹಾರ ತನಿಖೆಗೆ ಸಮಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.