“ಡಿಯರ್ ಕಾಮ್ರೇಡ್’​ನಲ್ಲಿ ಬಾಬಿ-ಲಿಲ್ಲಿ ರೊಮ್ಯಾಂಟಿಕ್ ಜೋರು: Watch

Team Udayavani, May 15, 2019, 8:45 PM IST

ಟಾಲಿವುಡ್​ನ ಬೆಸ್ಟ್​ ಜೋಡಿಗಳಲ್ಲಿ ಯಂಗ್ ಆ್ಯಂಡ್ ಎನರ್ಜಿಟಿಕ್ ವಿಜಯ್ ದೇವರಕೊಂಡ ಮತ್ತು ಕನ್ನಡದ ಕ್ರಶ್ ಚೆಲುವೆ ರಶ್ಮಿಕಾ ಮಂದಣ್ಣ ಜೋಡಿ ಕೂಡ ಒಂದು. ಹೌದು!, “ಗೀತಾ ಗೋವಿಂದಂ’ ಚಿತ್ರದ ಮೂಲಕ ಕಮಾಲ್ ಮಾಡಿದ್ದ ಈ ಜೋಡಿ ಇದೀಗ “ಡಿಯರ್ ಕಾಮ್ರೇಡ್’​ನಲ್ಲಿ ಮತ್ತೆ ಒಂದಾಗಿದ್ದು, ಭರತ್ ಕಾಮಾ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಿದೆ.

ಅಲ್ಲದೇ ಈಗಾಗಲೇ ಚಿತ್ರದ ಟೀಸರ್ ಹಾಗೂ ಕೆಲ ಹಾಡುಗಳಿಂದ ಸಿನಿರಸಿಕರ ಗಮನ ಸೆಳೆದಿದ್ದು, ಇದೀಗ ಚಿತ್ರತಂಡ ಮತ್ತೊಂದು ರೊಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಿದೆ. “ಕಡಲಂತೆ ಕಾದ ಕಣ್ಣು.. ನದಿಯಂತೆ ಓಡುವ ಕನಸು’ ಎಂಬ ಹಾಡು ಇದಾಗಿದ್ದು, ಹಾಡಿಗೆ ಧನಂಜಯ್ ರಂಜನ್​ ಸಾಹಿತ್ಯವಿದೆ.

ಸಿದ್​ ಶ್ರೀರಾಮ್ ಹಾಗೂ ಐಶ್ವರ್ಯ ರವಿಚಂದ್ರನ್ ಕಂಠದಲ್ಲಿ ಈ ಹಾಡು ಮೆಲೋಡಿಯಾಗಿ ಮೂಡಿಬಂದಿದೆ. ಇನ್ನು “ಡಿಯರ್ ಕಾಮ್ರೇಡ್’​ ಲವ್​ ಕಂ ರೊಮ್ಯಾಂಟಿಕ್ ಚಿತ್ರವಾಗಿದ್ದು, ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲೂ ತೆರೆಕಾಣಲಿದೆ.

ಚಿತ್ರದಲ್ಲಿ ಬಾಬಿ ರೋಲ್​ನಲ್ಲಿ ವಿಜಯ್ ಕಾಣಿಸಿಕೊಂಡರೆ, ಲಿಲ್ಲಿ ಪಾತ್ರದಲ್ಲಿ ರಶ್ಮಿಕಾ ಮಿಂಚಲಿದ್ದಾರೆ. ಮುಖ್ಯವಾಗಿ ಈಗಾಗಲೇ ಬಿಡುಗಡೆಗೊಂಡ ಟೀಸರ್​​ನಲ್ಲಿ ಈ ಜೋಡಿ ಲಿಪ್ ಲಾಕ್ ಮೂಲಕ ಹಾರ್ಟ್​ ಬೀಟ್ ಹೆಚ್ಚಿಸಿದ್ದು, ಚಿತ್ರವು ಜುಲೈ 26ರಂದು ವಿಶ್ವದಾದ್ಯಂತ​ ತೆರೆಕಾಣಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ