“ಬ್ರಹ್ಮಚಾರಿ’ ಫ್ಯಾಮಿಲಿ ಪ್ಯಾಕೇಜ್‌ ಸಿನಿಮಾ

ನಾಯಕಿ ಅದಿತಿ ಭರವಸೆಯ ಮಾತು

Team Udayavani, Nov 25, 2019, 6:06 AM IST

ನಟಿ ಅದಿತಿ ಪ್ರಭುದೇವ ಈಗ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅವರ ನಿರೀಕ್ಷೆಗೆ ಕಾರಣ “ಬ್ರಹ್ಮಚಾರಿ’. ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ “ಬ್ರಹ್ಮಚಾರಿ’ ಚಿತ್ರ ಇದೇ ವಾರ (ನ.29)ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಹಾಡು, ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಿದೆ. ಅದಿತಿ ಪ್ರಭುದೇವ ಈ ಹಿಂದೆ ಕಾಣಿಸಿಕೊಳ್ಳದಂತಹ ಪಾತ್ರದಲ್ಲಿ ನಟಿಸಿದ್ದಾರೆ.

ಹಾಗಾಗಿ, ಅದಿತಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಸ್ವಲ್ಪ ಹೆಚ್ಚೇ ಇದೆ. “ನಾನು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿಸಿರೋದು. ನನಗಂತೂ ಇದು ಹೊಸ ಅನುಭವ. ಈ ಸಿನಿಮಾದಿಂದ ನಾನು ಸಾಕಷ್ಟು ಕಲಿತಿದ್ದು ಸುಳ್ಳಲ್ಲ. ಮುಖ್ಯವಾಗಿ ಕಾಮಿಡಿ ಟೈಮಿಂಗ್‌. ಕಾಮಿಡಿ ಸಿನಿಮಾಗಳಲ್ಲಿ ಟೈಮಿಂಗ್‌ ಮುಖ್ಯವಾಗಿರುತ್ತದೆ. ಅದನ್ನು ಈ ಸಿನಿಮಾ ಮೂಲಕ ಕಲಿತೆ’ ಎನ್ನುವ ಅದಿತಿಗೆ, ಚಿತ್ರದುದ್ದಕ್ಕೂ ನಗು ನಗುತ್ತಾ, ವೈಯ್ಯಾರದಿಂದ ಇರುವ ಪಾತ್ರ ಸಿಕ್ಕಿದೆಯಂತೆ.

“ಇವತ್ತು ಜನ ಚಿತ್ರಮಂದಿರಕ್ಕೆ ಬರೋದು ಜಾಲಿಯಾಗಿ, ಬಾಯ್ತುಂಬು ನಕ್ಕು ಹೋಗುವ ಎಂದು. ಅವರದ್ದೇ ಆದ ವೈಯಕ್ತಿಕ ಟೆನ್ಶನ್‌ಗಳನ್ನು ಮರೆಯಲು. ಹೀಗಿರುವಾಗ ನಾವು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರನ್ನು ನಗಿಸಿ, ಅವರ ಮನಸ್ಸು ಹಗುರ ಮಾಡಿ ಕಳುಹಿಸಬೇಕು. ಆ ಕೆಲಸವನ್ನು “ಬ್ರಹ್ಮಚಾರಿ’ ಖಂಡಿತಾ ಮಾಡುತ್ತಾನೆ ಎಂಬ ನಂಬಿಕೆ ಇದೆ. ಇನ್ನು “ಬ್ರಹ್ಮಚಾರಿ’ ಒಂದು ಔಟ್‌ ಅಂಡ್‌ ಔಟ್‌ ಫ್ಯಾಮಿಲಿ ಪ್ಯಾಕೇಜ್‌ ಎನ್ನಲು ಅದಿತಿ ಮರೆಯುವುದಿಲ್ಲ.

“ಟ್ರೇಲರ್‌ ನೋಡಿದ ಕೆಲವರು ಚಿತ್ರದಲ್ಲಿ ಡಬಲ್‌ ಮೀನಿಂಗ್‌ ಇದೆ ಅಂತಾರೆ. ಖಂಡಿತಾ, ಆ ತರದ್ದೇನಿಲ್ಲ. ಸಿನಿಮಾ ನೋಡಿದ ಮೇಲೆ ಇಡೀ ಫ್ಯಾಮಿಲಿ ಖುಷಿ ಪಡುತ್ತೆ. ಒಂದು ಸಂಸಾರದ ಸುತ್ತ ಸಾಗುವ ಕಥೆಯನ್ನು ಜಾಲಿಯಾಗಿ ಇಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಅಶ್ಲೀಲತೆಯಾಗಲೀ, ಮುಜುಗರಪಡುವ ಅಂಶಗಳಾಗಲೀ ಇಲ್ಲ. ಮನೆಮಂದಿಯೆಲ್ಲಾ ಆರಾಮವಾಗಿ ಈ ಸಿನಿಮಾ ನೊಡಬಹುದು’ ಎನ್ನುತ್ತಾರೆ ಅದಿತಿ ಪ್ರಭುದೇವ. ನೀನಾಸಂ ಸತೀಶ್‌ ನಾಯಕರಾಗಿರುವ “ಬ್ರಹ್ಮಚಾರಿ’ ಚಿತ್ರವನ್ನು ಉದಯ್‌ ಮೆಹ್ತಾ ನಿರ್ಮಿಸಿದ್ದು, ಚಂದ್ರಮೋಹನ್‌ ನಿರ್ದೇಶಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ