ಬ್ರಹ್ಮಚಾರಿಗೆ ಮತ್ತೊಬ್ಬ ಚೆಲುವೆ ಸಿಕ್ಕಳು…

Team Udayavani, Apr 29, 2019, 3:00 AM IST

ನಟ ನೀನಾಸಂ ಸತೀಶ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ಬ್ರಹ್ಮಚಾರಿ ಅನೌನ್ಸ್‌ ಆದ ಸುದ್ದಿಯನ್ನು ಇದೇ ಬಾಲ್ಕನಿಯಲ್ಲಿ ನೋಡಿರುತ್ತೀರಿ. ಈಗ ಬ್ರಹ್ಮಚಾರಿ ಚಿತ್ರದ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಬ್ರಹ್ಮಚಾರಿ ಗೆಟಪ್‌ನಲ್ಲಿರುವ ನಟ ಸತೀಶ್‌ಗೆ ಇಬ್ಬರು ಚೆಲುವೆಯರು ನಾಯಕಿಯರಾಗಿ ಜೋಡಿಯಾಗುತ್ತಿದ್ದಾರೆ.

ಹೌದು, ಈಗಾಗಲೇ ಬ್ರಹ್ಮಚಾರಿ ಚಿತ್ರಕ್ಕೆ ಒಬ್ಬ ನಾಯಕಿಯಾಗಿ ಅದಿತಿ ಪ್ರಭುದೇವ ಆಯ್ಕೆಯಾಗಿದ್ದಾರೆ. ಈಗ ಚಿತ್ರದ ಮತ್ತೊಬ್ಬ ನಾಯಕಿಯ ಜಾಗಕ್ಕೆ ಅಕ್ಷತಾ ಶ್ರೀನಿವಾಸ್‌ ಎನ್ನುವ ಹೊಸ ಹುಡುಗಿಯ ಎಂಟ್ರಿಯಾಗಿದೆ. ಅಂದಹಾಗೆ, ಅಕ್ಷತಾ ಶ್ರೀನಿವಾಸ್‌ ಮೂಲತಃ ಮಂಗಳೂರಿನವರು.

ತಮ್ಮ ಇಂಜಿನಿಯರಿಂಗ್‌ ಪದವಿ ಮುಗಿದ ಬಳಿಕ ಮಾಡೆಲಿಂಗ್‌ನತ್ತ ಮುಖ ಮಾಡಿದ್ದ ಅಕ್ಷತಾ, ಬಳಿಕ ಮಳೆ, ಧೈರ್ಯಂ, ಲೌಡ್‌ ಸ್ಪೀಕರ್‌, ಪರಸಂಗ ಹೀಗೆ ಕೆಲ ಚಿತ್ರಗಳಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದರು. ಬ್ರಹ್ಮಚಾರಿ ಚಿತ್ರತಂಡ ನಡೆಸಿದ ಆಡಿಷನ್‌ನಲ್ಲಿ ಅಕ್ಷತಾ ಶ್ರೀನಿವಾಸ್‌ ಚಿತ್ರದ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸದ್ಯ ಚಂದ್ರಮೋಹನ್‌ ನಿರ್ದೇಶನದ ಬ್ರಹ್ಮಚಾರಿ ಚಿತ್ರದಲ್ಲಿ ಅಕ್ಷತಾ ಗ್ಲಾಮರಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಕ್ಷತಾ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಇನ್ನೊಂದೆಡೆ ಚಿರಂಜೀವಿ ಸರ್ಜಾ ನಟಿಸುತ್ತಿರುವ,

ಧೈರ್ಯಂ ಖ್ಯಾತಿಯ ಶಿವತೇಜಸ್‌ ನಿರ್ದೇಶನ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲೂ ಅಕ್ಷತಾ ಸಹ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷತಾ ಆರ್ಯವೇದಿಕ್‌ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಳೆದ ವಾರವಷ್ಟೇ ಈ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ