ಚಿತ್ರೀಕರಣದಲ್ಲಿ ಬ್ಯುಸಿಯಾದ “ದೃಗಾಂತರ’

ವರ್ಷದ ಮಧ್ಯ ಭಾಗದಲ್ಲಿ ತೆರೆಗೆ ಬರುವ ಸಾಧ್ಯತೆ

Team Udayavani, Jan 26, 2020, 7:00 AM IST

ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ “ದೃಗಾಂತರ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ಚಿತ್ರದಲ್ಲಿ ಬರುವ ಪ್ರಮುಖ ದೃಶ್ಯಗಳನ್ನು ಚಿತ್ರತಂಡ ಮಡಿಕೇರಿಯ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಸೆರೆಹಿಡಿಯಿತು. ಶೋಭರಾಜ್‌, ರಂಜಿತ್‌ ಗೌಡ ಮೊದಲಾದ ಕಲಾವಿದರು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

“ದೇವನಗರಿ ಸ್ಟುಡಿಯೋಸ್‌’ ಲಾಂಛನದಲ್ಲಿ ರಂಜಿತ್‌ ಗೌಡ. ಕೆ, ನಿರ್ಮಾಣದ “ದೃಗಾಂತರ’ ಚಿತ್ರಕ್ಕೆ ಅಂಕಿತ್‌ ವಿ ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಗೌತಮ್‌ ಮೋಹನ್‌ ರಾಜ್‌ ಕಥೆಯಿದೆ. ಚಿತ್ರದ ಹಾಡುಗಳಿಗೆ ಜಿ.ಆರ್‌ ರಾಯನ್‌ ಸಂಗೀತ ಸಂಯೋಜನೆಯಿದ್ದು, ಸನಿತ್‌ ಕುಮಾರ್‌, ನಾಗಾರ್ಜುನ್‌ ಶರ್ಮ, ಅಂಕಿತ್‌ ವಿ ಹೆಗಡೆ ಸಾಹಿತ್ಯವನ್ನು ರಚಿಸಿದ್ದಾರೆ. ಚಿತ್ರಕ್ಕೆ ಗೋವಿಂದ ರಾಜನ್‌ ಛಾಯಾಗ್ರಹಣ, ಜಗದೀಶ್‌ ಸಂಕಲನವಿದೆ.

ಅನಿಲ್‌ ಕಲಾ ನಿರ್ದೇಶನವಿದೆ. ಸೈಕಲಾಜಿಕಲ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ದೃಗಾಂತರ’ ಚಿತ್ರದಲ್ಲಿ ರಂಜಿತ್‌ ಗೌಡ, ನಿಖೀತಾ ಸ್ವಾಮಿ, ಶೋಭರಾಜ್‌, ಲಕ್ಷ್ಮೀ ಭಟ್‌, ನಂದೀಶ್‌, ಸಂದೇಶ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಸದ್ಯ ಶೂಟಿಂಗ್‌ನಲ್ಲಿ ನಿರತವಾಗಿರುವ “ದೃಗಾಂತರ’ ಏಪ್ರಿಲ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ