ಬೈಲಾ ಆರಂಭ
Team Udayavani, Dec 11, 2017, 9:00 PM IST
ರಾಜೇಶ್ ನಟರಂಗ ಅಭಿನಯದ “ಬೈಲಾ’ ಎಂಬ ಹೊಸ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಬಾರಿಕೆ ಬ್ರದರ್ಸ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಪ್ರಭಾಕರ್ ಭಟ್, ವಾಸುದೇವ ಪ್ರಸಾದ್ ಮತ್ತು ದೇವಿಪ್ರಸಾದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಮೋದಿ ರಸ್ತೆ ಬದಿ ಇರುವ ಗಣೇಶನ ದೇವಸ್ಥಾನದಲ್ಲಿ ನಡೆದ ಮುಹೂರ್ತದಲ್ಲಿ ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕ ದೇವಿಪ್ರಸಾದ್ ಆರಂಭ ಫಲಕ ತೋರಿದರು. ಚಿತ್ರದ ಮೊದಲ ಹಂತದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುತ್ತಿದೆ.
ಗಣೇಶ್ ಪಿಲಿಕಲ್ಲು, ಸೋಮಶೇಖರ್ ಬಾರಿಕೆ ಹಾಗೂ ಆರ್.ಎನ್.ಆರ್ ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್ ಪಿಲಿಕಲ್ಲು ಕಥೆ ಬರೆದಿದ್ದಾರೆ. ಗಣೇಶ್ ಪಿಲಿಕಲ್ಲು, ಸೋಮಶೇಖರ್ ಬಾರಿಕೆ ಹಾಗೂ ಆರ್.ಎನ್.ಆರ್ ಅವರ ಚಿತ್ರಕಥೆ, ಸಂಭಾಷಣೆಯೂ ಇದೆ.
ಶಶಿಧರ್ ಕ್ಯಾಮೆರಾ ಹಿಡಿದರೆ, ಮನೋಜ್ ಜಿ.ಎಸ್ ಶ್ರೀಲಂಕ ಸಂಗೀತವಿದೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ಗಣೇಶ್ ಪಿಲಿಕಲ್ಲು ಅವರು ಗೀತೆ ರಚಿಸಿದ್ದಾರೆ. ಚಿತ್ರದಲ್ಲಿ ಶೋಭ್ರಾಜ್, ತೇಜಸ್ವಿನಿ ಶರ್ಮ, ಧರಣಿ, ಸೋಮಶೇಖರ್ ಬಾರಿಕೆ, ಮನ್ದೀಪ್ ರಾಯ್ ಮುಂತಾದವರು ನಟಿಸಿದ್ದಾರೆ.