Udayavni Special

ಮತ ಹಬ್ಬದಲ್ಲಿ ಸಿನಿತಾರೆಯರ ಸಂಭ್ರಮ


Team Udayavani, May 13, 2018, 11:40 AM IST

vote-celebrity.jpg

ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಸಿನಿತಾರೆಯರು ಸಂಭ್ರಮದಿಂದ ಪಾಲ್ಗೊಂಡು, ನಗರದ ವಿವಿಧ ಕ್ಷೇತ್ರಗಳಲ್ಲಿ  ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಕತ್ರಿಗುಪ್ಪೆಯಲ್ಲಿ ನಟ ಉಪೇಂದ್ರ, ಪತ್ನಿ ಪ್ರಿಯಾಂಕ ಉಪೇಂದ್ರ ಜತೆಯಾಗಿ ಆಗಮಿಸಿ ಮತದಾನ ಮಾಡಿದರು. ಬ್ಯಾಟರಾಯನ ಪುರ ಕ್ಷೇತ್ರದ ರಾಚೇನಹಳ್ಳಿಯಲ್ಲಿ ಶಿವರಾಜಕುಮಾರ್‌ ಮತ್ತು ಅವರ ಪತ್ನಿ ಗೀತಾ ಹಾಗೂ ಪುತ್ರಿ ನಿವೇದಿತಾ ಜತೆಗೆ ಆಗಮಿಸಿ ಮತ ಚಲಾಯಿಸಿದರು.

ಪುನೀತ್‌ ರಾಜಕುಮಾರ್‌, ಪತ್ನಿ ಅಶ್ವಿ‌ನಿ ಜತೆ ಆಗಮಿಸಿ ಸದಾಶಿವ ನಗರದ ಪೂರ್ಣಪ್ರಜ್ಞಾ ಶಾಲೆಯ ಮತಗಟ್ಟ ಕೇಂದ್ರದಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಪುನೀತ್‌, “ಕಳೆದ 18 ವರ್ಷದಿಂದ ಮತದಾನ ಮಾಡುತ್ತಿದ್ದು, ಇಲ್ಲಿಯ ತನಕ ಒಂದು ಚುನಾವಣೆಯಲ್ಲಿ ಮಾತ್ರ ಮತದಾನ ಮಾಡಿರಲು ಸಾಧ್ಯವಾಗಿರಲಿಲ್ಲ. ರಾಜ್ಯದ ಪ್ರಗತಿಗೆ ಪ್ರತಿ ಓಟ್‌ ಕೂಡ ಅಮೂಲ್ಯ’ ಎಂದರು.

ಇದೇ ಸ್ಥಳದಲ್ಲಿ ರಾಘವೇಂದ್ರ ರಾಜಕುಮಾರ್‌ ಕೂಡ ಕಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಜೆ.ಪಿ.ನಗರದ ಪುಟ್ಟೇನಹಳ್ಳಿ ಮತಗಟ್ಟೆ 178ರಲ್ಲಿ ಸುದೀಪ್‌, ಯಶವಂತಪುರ ಕ್ಷೇತ್ರದ ಚಿಕ್ಕಬಿದಿರೆಕಲ್‌ನಲ್ಲಿ ಹಿರಿಯ ನಟ ದೊಡ್ಡಣ್ಣ , ಬನಶಂಕರಿ ಎರಡನೇ ಹಂತದಲ್ಲಿರುವ ರಮೇಶ್‌ ಅರವಿಂದ್‌, ಶುಭಾ ಪೂಂಜ, ಸೃಜನ್‌ ಲೋಕೇಶ್‌, ಸೋನು ಗೌಡ, ಚಂದ್ರ ಲೇಔಟ್‌ನಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್‌,

ಶಿವಾಜಿನಗರ ವಿಧಾನ ಸಭಾಕ್ಷೇತ್ರದ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ನಟ ಶ್ರೀಮುರಳಿ, ಕೆ.ಆರ್‌.ಪುರಂ ಕ್ಷೇತ್ರದ ಕಲ್ಕೆರೆ ಕ್ಷೇತ್ರದ ಮತಗಟ್ಟೆ 42ರಲ್ಲಿ ಹರ್ಷಿಕಾ ಪೂರ್ಣಚ್ಚ ಮತದಾನ ಮಾಡಿ ಸಂಭ್ರಮಿಸಿದರು. ಇನ್ನು, ಸುಧಾರಾಣಿ ಅವರು ಗಾಂಧಿನಗರದ ಮತಗಟ್ಟೆ ಕೇಂದ್ರ 11ರಲ್ಲಿ, ರೂಪಶ್ರೀ ನ್ಯೂ ತಿಪ್ಪಸಂದ್ರದಲ್ಲಿ, ಕೋಣನಕುಂಟೆಯಲ್ಲಿ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಹೊಸಕೆರೆಹಳ್ಳಿಯಲ್ಲಿ ಯಶ್‌ ಸರದಿಯಲ್ಲಿ ಮತ ಚಲಾಯಿಸಿದರು.

ವಿಜಯನಗರದ ಕೆವಿಎನ್‌ ಪಬ್ಲಿಕ್‌ ಶಾಲೆಯಲ್ಲಿ ನಟ ಮತ್ತು ನಿರ್ದೇಶಕ ಪ್ರೇಮ್‌, ಪತ್ನಿ ರಕ್ಷಿತಾ ಜತೆಗೂಡಿ ಓಟ್‌ ಮಾಡಿದರು. ಗಿರಿನಗರದ ವಿಜಯಭಾರತಿ ಶಾಲೆಯಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌, ಅಶ್ವತ್ಥ್ ನಗರದಲ್ಲಿ ಅನಂತ್‌ ನಾಗ್‌, ಮಲ್ಲೇಶ್ವರಂನಲ್ಲಿ ಹಿರಿಯ ಬಿ. ಸರೋಜಾದೇವಿ ಸಂಭ್ರಮದಿಂದ ಮತಚಲಾಯಿಸಿದರು. ಹಿರಿಯ ನಟರಾದ ಲೀಲಾವತಿ, ದ್ವಾರಕೀಶ್‌, ರಾಜೇಶ್‌,

ಹಿರಿಯ ಚಿತ್ರ ನಿರ್ದೇಶಕ ಭಗವಾನ್‌, ಜಗ್ಗೇಶ್‌, ಅಜೇಯ್‌ ರಾವ್‌, ಮಾಲಾಶ್ರೀ, ದತ್ತಣ್ಣ, ಚಿತ್ರ ಶೆಣೈ, ರವಿಶಂಕರ್‌ ಗೌಡ, ಅನು ಪ್ರಭಾಕರ್‌, ಭಾವನಾ ರಾವ್‌, ದತ್ತಣ್ಣ, ಚಿತ್ರ ಶೆಣೈ, ದೇವರಾಜ್‌, ಪ್ರಜ್ವಲ್‌ ದೇವರಾಜ್‌, ಧನಂಜಯ್‌, “ದುನಿಯಾ’ ವಿಜಯ್‌, ಮಾನ್ವಿತಾ ಹರೀಶ್‌, ನೀತು, ಪ್ರಣೀತಾ, ರಘು ಮುಖರ್ಜಿ, ಅನಿತಾ ಭಟ್‌, ಪ್ರದೀಪ್‌ ನಿರ್ದೇಶಕರಾದ ಬಿ. ಸುರೇಶ, ಇಂದ್ರಜಿತ್‌ ಲಂಕೇಶ್‌, ದಿನಕರ್‌ ತೂಗುದೀಪ,

ಶಶಾಂಕ್‌, ಸಂತೋಷ್‌ ಆನಂದರಾಮ್‌, ಪವನ್‌ ಒಡೆಯರ್‌, ಸುನಿ, ಪಿ.ಸಿ. ಶೇಖರ್‌ ಸೇರಿದಂತೆ ಹಲವು ನಟರು ತಮ್ಮ  ಅಮೂಲ್ಯವಾದ ಮತ ಚಲಾಯಿಸಿದರು. ಈ ವೇಳೆ ಮತದಾನ ಮಾಡಲು ಬಂದಿದ್ದ ಹಲವರು ನೆಚ್ಚಿನ ತಾರೆಗಳೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದದ್ದು ಅಲ್ಲಲ್ಲಿ ಕಂಡು ಬಂತು. ಇನ್ನು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಹಿನ್ನೆಲೆಯಲ್ಲಿ ಆದಿತ್ಯ ಮುಂತಾದವರು ಮತ ಚಲಾಯಿಸದೇ ಹಿಂದುರುಗಬೇಕಾಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್

ಯುರೋಪ್‌: ಲಾಕ್‌ಡೌನ್‌ ಸಡಿಲ: ಜರ್ಮನಿಯಲ್ಲಿ ಫ‌ುಟ್ಬಾಲ್‌ ಶುರು

ಯುರೋಪ್‌: ಲಾಕ್‌ಡೌನ್‌ ಸಡಿಲ: ಜರ್ಮನಿಯಲ್ಲಿ ಫ‌ುಟ್ಬಾಲ್‌ ಶುರು

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅರ್ಜಿ ಆಹ್ವಾನ ತಾತ್ಕಾಲಿಕ ಸ್ಥಗಿತ

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅರ್ಜಿ ಆಹ್ವಾನ ತಾತ್ಕಾಲಿಕ ಸ್ಥಗಿತ

ಸೋಂಕಿತರ ಮೇಲೆ ಐಎಸ್‌ಐ ಕಣ್ಗಾವಲು!

ಸೋಂಕಿತರ ಮೇಲೆ ಐಎಸ್‌ಐ ಕಣ್ಗಾವಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cinema-chitrikarana

ಸಿನಿಮಾ ಚಿತ್ರೀಕರಣ ಅನುಮತಿಗೆ ಮನವಿ

niri prajwal

ಇನ್ಸ್‌ ಪೆಕ್ಟರ್‌ ವಿಕ್ರಂ ನಿರೀಕ್ಷೆಯಲ್ಲಿ ಪ್ರಜ್ವಲ್‌

ಘಟಾನುಘಟಿಗಳಿಗೆ ವಾಯ್ಸ್ ಕೊಡುತ್ತಿದ್ದ “ಆರ್ಮುಗಂ” ಬದುಕಿಗೆ ತಿರುವು ಕೊಟ್ಟಿದ್ದು ತಾಯಿ ಡೈರಿ

ಘಟಾನುಘಟಿಗಳಿಗೆ ವಾಯ್ಸ್ ಕೊಡುತ್ತಿದ್ದ “ಆರ್ಮುಗಂ” ಬದುಕಿಗೆ ತಿರುವು ಕೊಟ್ಟಿದ್ದು ತಾಯಿ ಡೈರಿ!

fans of ambi

ಅಂಬಿ ಯಾವತ್ತೂ ಅಭಿಮಾನಿಗಳ ಮನಸ್ಸಲ್ಲೇ ಇರುತ್ತಾರೆ: ಸುಮಲತಾ

manaranjana

ಬಣ್ಣ ಹೊಸದಾಗಿದೆ; ಬಂಧ ಬಿಗಿಯಾಗಿದೆ!

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

31-May-09

ಗ್ರಾಪಂಗಳಿಗೆ ನಾಮನಿರ್ದೇಶನ ಮಾಡಿದರೆ ಹೋರಾಟ: ಶಾಸಕ ಗಣೇಶ

ಕೋವಿಡ್‌ ನಿಯಂತ್ರಣ : ಮನೆಯಲ್ಲೂ ಮಾಸ್ಕ್ ಧಾರಣೆ ದಿ ಬೆಸ್ಟ್‌!

ಕೋವಿಡ್‌ ನಿಯಂತ್ರಣ : ಮನೆಯಲ್ಲೂ ಮಾಸ್ಕ್ ಧಾರಣೆ ದಿ ಬೆಸ್ಟ್‌!

31-May-08

ಸ್ವಗ್ರಾಮಕ್ಕೆ ತೆರಳಿದ 639 ಕಾರ್ಮಿಕರು

31-May-07

ಹೋಂ ಕ್ವಾರಂಟೈನ್‌ ವಿರೋಧಿಸುವಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.