ಚೇಸ್ ಗೆ ತುಳು ಕಾಮಿಡಿ ಕಿಂಗ್ ಬೋಳಾರ್ ಸಾಥ್!

Team Udayavani, Dec 16, 2019, 1:09 PM IST

ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಚೇಸ್. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟೀಸರ್ ಮೂಲಕವೇ ಇದೀಗ ಎಲ್ಲೆಡೆ ಈ ಸಿನಿಮಾ ಬಗ್ಗೆ ಚರ್ಚೆಗಳಾಗುತ್ತಿವೆ. ಒಂದು ರೋಚಕ ಕ್ರೈಂ ಥ್ರಿಲ್ಲರ್ ಕಥಾ ಹಂದರದ ಸುಳಿವಿನೊಂದಿಗೆ, ಹೊಸತನದ ಕಂಪಿನೊಂದಿಗೆ ಮೂಡಿ ಬಂದಿರೋ ಈ ಟೀಸರ್ ಅಂತೂ ಇದೀಗ ವೈರಲ್ ಆಗಿ ಬಿಟ್ಟಿದೆ. ಯೂಟ್ಯೂಬ್‌ನಲ್ಲಿಯೂ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಾ ಸಾಗುತ್ತಿರುವ ಈ ಟೀಸರ್ ಮೂಲಕವೇ ಚೇಸ್ ಚಿತ್ರ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಈ ಮೂಲಕವೇ ಚೇಸ್ ಭಾಗವಾಗಿರೋ ಕಲಾವಿದರ ಪಾತ್ರ ಪರಿಚಯವೂ ಆಗಿದೆ. ಆದರೆ ಅದರಲ್ಲಿ ಕಾಣಿಸದ ಮತ್ತೊಂದು ಪಾತ್ರದ ಸುಳಿವೀಗ ಚಿತ್ರತಂಡದ ಕಡೆಯಿಂದಲೇ ಜಾಹೀರಾಗಿದೆ.

ಅದು ತುಳುನಾಡ ಮಾಣಿಕ್ಯ ಎಂದೇ ಖ್ಯಾತರಾಗಿರುವ ಖ್ಯಾತ ಹಾಸ್ಯನಟ ಅರವಿಂದ ಬೋಳಾರ್ ನಟಿಸಿದ್ದಾರೆನ್ನಲಾಗಿರೋ ಪಾತ್ರ. ಈ ಸಿನಿಮಾ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥಾನಕವನ್ನೊಳಗೊಂಡಿದೆ ಎಂಬ ವಿಚಾರ ಗೊತ್ತೇ ಇದೆ. ಇದರ ಜೊತೆಜೊತೆಗೇ ಕಾಮಿಡಿ ಕಚಗುಳಿ ಇಡುವಲ್ಲಿ ಅರವಿಂದ ಬೋಳಾರ್ ಪಾತ್ರವನ್ನು ಸೃಷ್ಟಿಸಲಾಗಿದೆ. ರಜನೀಕಾಂತ್ ನಟನೆಯ ರೋಬೋ 2.0 ಚಿತ್ರದಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಿದ್ದ ಪಕ್ಷಿರಾಜನ ಪಾತ್ರದಂಥಾದ್ದೇ ಕ್ಯಾರೆಕ್ಟರ್ ಒಂದರಲ್ಲಿ ಬೋಳಾರ್ ನಟಿಸಿದ್ದಾರಂತೆ. ಆ ಪಾತ್ರವೂ ಚೇಸ್ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅರವಿಂದ ಬೋಳಾರ್ ಇದ್ದಾರೆಂದರೆ ಅಲ್ಲಿ ಭರಪೂರ ನಗು ಇದ್ದೇ ಇರುತ್ತದೆಂದರ್ಥ. ಅದನ್ನು ನಿಜ ಮಾಡುವಂಥಾ ಸನ್ನಿವೇಶಗಳು ಈ ಸಿನಿಮಾದಲ್ಲಿ ಯಥೇಚ್ಛವಾಗಿವೆಯಂತೆ.

ಈ ಚಿತ್ರದಲ್ಲಿ ಅವಿನಾಶ್ ನರಸಿಂಹರಾಜು, ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಶೆಟ್ಟಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ವೀಣಾ ಸುಂದರ್, ಉಷಾ ಭಂಡಾರಿ, ಸುಂದರ್ ಮುಂತಾದವರ ತಾರಗಣವಿದೆ. ರೆಹಮಾನ್ ಹಾಸನ್ ಇನ್ನೊಂದು ಮುಖ್ಯ ಪಾತ್ರದಲ್ಲಿದ್ದಾರೆ. ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಪ್ರೈ ಲಿಮಿಟೆಡ್ ಬ್ಯಾನರ್‌ನಲ್ಲಿ ಅಡಿಯಲ್ಲಿ ಚೇಸ್ ಚಿತ್ರ ನಿರ್ಮಾಣಗೊಂಡಿದೆ. ಮಂಗಳೂರಿನವರೇ ಆದ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರಾಗಿ, ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ