ನಾನು ಹೀರೋ ಆಗ್ತಿರೋದಕ್ಕೆ ಎಲ್ಲ ಸ್ಟಾರ್ ಖುಷಿಯಾಗಿದ್ದಾರೆ…
Team Udayavani, Oct 21, 2020, 12:59 PM IST
ನಾನು ಹೀರೋ ಆಗೋದಕ್ಕೆ ದರ್ಶನ್, ಪುನೀತ್, ಯಶ್, ಧ್ರುವ ಎಲ್ಲರೂ ಸಪೋರ್ಟ್ ಮಾಡ್ತಿದ್ದಾರೆ. ನಮ್ಮ ಸಿನಿಮಾಕ್ಕೆ ಎಲ್ಲರೂ ಖುಷಿಯಿಂದ ವಿಶ್ ಮಾಡಿದ್ದಾರೆ. ಏನೋ ಹೊಸ ಪ್ರಯತ್ನ ಮಾಡ್ತಿದ್ದೀವಿ. ಮುಂದೆ ನೋಡೋಣ ಏನಾಗುತ್ತೆ ಅಂಥ…’ ಹೀಗೆ ಮಾತಿಗಿಳಿದರು ನಟ ಚಿಕ್ಕಣ್ಣ.
ಹೌದು. ಇಲ್ಲಿಯವರೆಗೆ ಕನ್ನಡದಲ್ಲಿ ಹಾಸ್ಯನಟನಾಗಿಕಾಮಿಡಿ ಕಮಾಲ್ ಮಾಡಿದ್ದ ಚಿಕ್ಕಣ್ಣ ಈಗ ನಾಯಕ ನಟನಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದೇ ವಾರ ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸುತ್ತಿರುವ “ಉಪಾಧ್ಯಕ್ಷ’ ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ಇದೇ ವೇಳೆ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕ ಚಿಕ್ಕಣ್ಣ, ತಮ್ಮ ಚಿತ್ರದ ಕುರಿತು ಒಂದಷ್ಟು ಮಾತನಾಡಿದರು. “ಇದೊಂದು ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ. ಆಡಿಯನ್ಸ್ಗೆ ಕಂಪ್ಲೀಟ್ ಎಂಟರ್ಟೈನ್ಮೆಂಟ್ ಕೊಡುವಂಥ ಸಿನಿಮಾ ಮಾಡಬೇಕು ಅಂಥ ಈ ಸಿನಿಮಾ ಮಾಡ್ತಿದ್ದೀವಿ. ಈಗಷ್ಟೇ ಈ ಸಿನಿಮಾದ ಸ್ಕ್ರೀಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಮೊದಲ ಹಂತವಾಗಿ ಸಿನಿಮಾದ ಟೈಟಲ್ ಅನೌನ್ಸ್ ಮಾಡಿದ್ದೇವೆ. ಉಳಿದಂತೆ ಸಿನಿಮಾದ ಹೀರೋಯಿನ್, ಇತರೆ ಕಲಾವಿದರು ಮತ್ತು ಟೆಕ್ನಿಷಿಯನ್ಸ್ ಆಯ್ಕೆ ನಡೆಯುತ್ತಿದೆ. ಇದೇ ಡಿಸೆಂಬರ್ನಲ್ಲಿ ಶೂಟಿಂಗ್ ಶುರು ಮಾಡುವ ಪ್ಲಾನ್ ಇದೆ’ ಎನ್ನುತ್ತಾರೆ ಚಿಕ್ಕಣ್ಣ.
ಇನ್ನು ಇಲ್ಲಿಯವರೆಗೆ ಯಾವ ಸಿನಿಮಾಗಳಲ್ಲೂ ನೋಡಿರ ದಂಥ ಡಿಫರೆಂಟ್ ಗೆಟಪ್ನಲ್ಲಿ ಚಿಕ್ಕಣ್ಣ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಮಾತನಾಡುವ ಚಿಕ್ಕಣ್ಣ, “ಈ ಸಿನಿಮಾದಲ್ಲಿ ನನ್ನ ಗೆಟಪ್ ಚೇಂಜ್ ಮಾಡಲು ಡೈರೆಕ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ನನ್ನ ಹೇರ್ ಸ್ಟೈಲ್, ಮ್ಯಾನರಿಸಂ ಎಲ್ಲ ಹೊಸದಾಗಿ ಕಾಣುವಂತೆ ಮಾಡುತ್ತಿದ್ದಾರೆ. ಅದು ಆಡಿಯನ್ಸ್ಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಮುಂದೆ ಗೊತ್ತಾಗಲಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು