ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಚಿರಂಜೀವಿ ಸರ್ಜಾ, ಮೇಘನಾ
Team Udayavani, May 2, 2018, 3:34 PM IST
ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಕಳೆದ ಭಾನುವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದ ಜೋಡಿ ಬುಧವಾರ ಹಿಂದು ಸಂಪ್ರದಾಯದಂತೆ ಹಸೆ ಮಣೆ ಏರಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ವಿವಾಹ ಕಾರ್ಯಕ್ರಮದಲ್ಲಿ ಬೆಳಗ್ಗೆ 10-30ರಿಂದ 11ಕ್ಕೆ ನಡೆದ ಮಿಥುನ ಲಗ್ನದಲ್ಲಿ ಸಪ್ತಪದಿ ತುಳಿದಿದ್ದರು.
ಚಿರು ಮತ್ತು ಮೇಘನಾ ವಿವಾಹ ಕಾರ್ಯಕ್ರಮಕ್ಕೆ ಅರ್ಜುನ್ ಸರ್ಜಾ ಕುಟುಂಬ, ಹಿರಿಯ ನಟಿ ಜಯಂತಿ, ಹಿರಿಯ ನಟ ದ್ವಾರಕೀಶ್, ನಟ ಶ್ರೀನಾಥ್ , ಡಾ.ರಾಜ್ ಕುಮಾರ್ ಪುತ್ರಿ ಲಕ್ಷ್ಮಿ ,ನಟ ಚಂದನ್ ಮುಂತಾದವರು ಗಣ್ಯರು ಆಗಮಿಸಿದ್ದು, ನೂತನ ವಧುವರರಿಗೆ ಶುಭ ಹಾರೈಸಿದರು.
ಇಂದು ಸಂಜೆ 7.30ಕ್ಕೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಸ್ಯಾಂಡಲ್ ವುಡ್ ಸೇರಿದಂತೆ ಸಿನಿಮಾ ರಂಗದ ಗಣ್ಯರು ಭಾಗವಹಿಸಲಿದ್ದಾರೆ.